For Quick Alerts
ALLOW NOTIFICATIONS  
For Daily Alerts
 

ಆಸಿಸ್ ನೆಲದಲ್ಲಿ ಗೆಲುವು ಸುಲಭವಲ್ಲ: ಬಾರ್ಮಿ ಅರ್ಮಿಗೆ ಕುಟುಕಿದ ಭಾರತ್ ಆರ್ಮಿ

Ashes: Bharat Army trolls Englands Barmy Army after England lost match against australia

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಗೆಲುವು ಸಾಧಿಸಲು ವಿಫಲವಾಗಿದೆ. ಮೊದಲ ದಿನದಿಂದ ಅಂತಿಮ ದಿನದ ವರೆಗೂ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡ ಭರ್ಜರಿ 275 ರನ್‌ಗಳ ಅಂತರದಿಂದ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ ಭರ್ಜರಿ 2-0 ಅಂತರದಿಂದ ಮುನ್ನಡೆ ಸಾಧಿಸಲು ಯಶಸ್ವಿಯಾಗಿದೆ.

ಇನ್ನು ಇಂಗ್ಲೆಂಡ್ ತಂಡದ ಈ ಸೋಲಿನ ಬಳಿಕ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಬಳಗವಾದ "ಭಾರತ್ ಆರ್ಮಿ" ಇಂಗ್ಲೆಂಡ್ ತಂಡದ ಅಭಿಮಾನಿಗಳ ಬಳಗವಾದ "ಬಾರ್ಮಿ ಆರ್ಮಿ"ಯನ್ನು ಟ್ವಿಟ್ಟರ್‌ನಲ್ಲಿ ಕುಟುಕಿದೆ. ಈ ಟ್ವೀಟ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಬರುತ್ತಿದೆ.

ಭಾರತ ತಂಡ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡವನ್ನು 2-1 ಅಂತರದ ಮಣಿಸಿ ಆಸಿಸ್ ನೆಲದಲ್ಲಿ ಭರ್ಜರಿಯಾಗಿ ಸರಣಿಯನ್ನು ಗೆದ್ದ ಸಾಧನೆ ಮಾಡಿತ್ತು. ಭಾರತದ ಈ ಸಾಧನೆಯನ್ನು ಉಲ್ಲೇಖಿಸಿ 'ಬಾರ್ಮಿ ಆರ್ಮಿ'ಯನ್ನು ಭಾರತ್ ಆರ್ಮಿ ಕೆಣಕಿದೆ. ಈ ಟ್ವಿಟ್‌ನಲ್ಲಿ ಭಾರತ್ ಆರ್ಮಿ "ನಿಮಗಾಗಿ ನಾವು ಇಲ್ಲಿದ್ದೇವೆ ಬಾರ್ಮಿ ಆರ್ಮಿ. ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸುವುದು ಸುಲಭವಲ್ಲ" ಎಂದು ಭಾರತ್ ಆರ್ಮಿ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಇಂಗ್ಲೆಂಡ್ ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಕಳೆದ 12 ಪಂದ್ಯಗಳ ಪೈಕಿ 11ರಲ್ಲಿ ಸೋಲು ಕಂಡಿದೆ. ಈ ಮೂಲಕ ಇಂಗ್ಲೆಂಡ್ ತಂಡ ಆಸಿಸ್ ನೆಲದಲ್ಲಿ ಗೆಲುವಿಗಾಗಿ ಅಕ್ಷರಶಃ ಪರದಾಟವನ್ನು ನಡೆಸುತ್ತಿದೆ. ಮತ್ತೊಂದೆಡೆ ಭಾರತೀಯ ತಂಡ ಆಸ್ಟ್ರೇಲಿಯಾದಲ್ಲಿ ಒಂದರ ನಂತರ ಮತ್ತೊಂದರಂತೆ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. 2018-19ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಅದಾದ ಬಳಿಕ 2020-21ರ ಪ್ರವಾಸದಲ್ಲಿಯೂ ಭಾರತ ತಂಡ 2-1 ಅಂತರದಿಂದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್‌ಅನ್ನು ಮತ್ತೊಮ್ಮೆ ತನ್ನತ್ತ ತಿರುಗಿ ನೋಡುವಂತೆ ಮಾಡಿತು. ಇನ್ನು ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಸುದೀರ್ಘ ಕಾಲದ ಗೆಲುವಿನ ಸರಪಳಿಯನ್ನು ಕೂಡ ಮುರಿಯುವಲ್ಲಿ ಯಶಸ್ವಿಯಾಗಿತ್ತು.

ಇನ್ನು ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಿಡಿದ ಪ್ರದರ್ಶನ ನೋಡಿದ ಬಳಿಕ ಇಂಗ್ಲೆಂಡ್ ತಮಡ ಕೂಡ ಆಸಿಸ್ ನೆಲದಲ್ಲಿ ಸರಣಿ ಗೆಲುವಿನ ಸಾಧನೆ ಮಾಡುವ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆದರೆ ಗಾಬಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ನಾಲ್ಕೇ ದಿನದಲ್ಲಿ 9 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿದೆ. ನಂತರ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಜೋಶ್ ಹ್ಯಾಜಲ್‌ವುಡ್ ಅವರ ಅಲಭ್ಯತೆಯ ಮಧ್ಯೆಯೂ ಪಿಂಕ್ ಬಾಲ್ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿ 275 ರನ್‌ಗಳ ಅಂತರದ ಗೆಲುವು ಸಾಧಿಸಿದೆ.

ಇನ್ನು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಿದೆ. ಹೀಗಾಗಿ ಈಗ ಆಸ್ಟ್ರೇಲಿಯಾ ಕಣ್ಣು ಆಶ್ ಟ್ರೋಫಿ ಗೆಲ್ಲುವುದರ ಜೊತೆಗೆ ಇಂಗ್ಲೆಂಡ್‌ಗೆ ವೈಟ್‌ವಾಶ್ ಮಾಡುವ ಲೆಕ್ಕಾಚಾರದಲ್ಲಿದೆ. ಅಂತಿಮ ಮೂರು ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ 5-0 ಅಂತರದಿಂದ ಗೆಲುವು ಸಾಧಿಸಬೇಕು ಎಂಬ ಲೆಕ್ಕಾಚಾರವನ್ನು ಮಾಡಿಕೊಳ್ಳುತ್ತಿದೆ.

Story first published: Tuesday, December 21, 2021, 9:31 [IST]
Other articles published on Dec 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+