For Quick Alerts
ALLOW NOTIFICATIONS  
For Daily Alerts
 

9 ದಿನ ಬಿಡುವಿನಲ್ಲಿ 6 ದಿನ ಕುಡಿತ: ಆಶಸ್‌ ಸರಣಿಯ ವೇಳೆ ಭುಗಿಲೆದ್ದ ದೊಡ್ಡ ವಿವಾದ

ಇಂಗ್ಲೆಂಡ್ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪ್ರತಿಷ್ಠಿತ ಆಶಸ್‌ ಸರಣಿಯನ್ನು ಆಡುತ್ತಿದೆ. ಈಗಾಗಲೇ ನಡೆದಿರುವ ಮೂರು ಟೆಸ್ಟ್‌ ಪಂದ್ಯಗಳನ್ನು ಆಸೀಸ್‌ ಗೆದ್ದು ಬೀಗಿದೆ. ಅಲ್ಲದೆ ಇನ್ನೂ ಎರಡು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ. ಈ ವೇಳೆ ಇಂಗ್ಲೆಂಡ್ ಆಟಗಾರರ ಪ್ರದರ್ಶನದ ಮೇಲೆ ಪ್ರಶ್ನೆಗಳು ಎದ್ದಿವೆ.

ಸದ್ಯ ಹೊರಬರುತ್ತಿರುವ ಮಾಧ್ಯಮ ವರದಿಗಳು ಇಂಗ್ಲೆಂಡ್‌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆಶಸ್‌ ಸರಣಿಯ ಎರಡನೇ ಹಾಗೂ ಮೂರನೇ ಟೆಸ್ಟ್‌ ನಡುವಣ ಒಟ್ಟು 9 ದಿನಗಳ ರಜೆ ಇತ್ತು. ಈ ವೇಳೆ ಇಂಗ್ಲೆಂಡ್ ಆಟಗಾರರು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಇಂಗ್ಲೆಂಡ್ ತಂಡದ ಆಟಗಾರರ ಮೋಜು ಮಸ್ತಿಯ ವಿಡಿಯೋಗಳು ಸಖತ್ ವೈರಲ್ ಆಗಿವೆ. ಇಂಗ್ಲೆಂಡ್ ತಂಡ ಸತತ ಸೋಲು ಅನುಭವಿಸುತ್ತಿರುವ ಬೆನ್ನಲ್ಲೇ, ಬಹಿರಂಗಗೊಂಡಿರುವ ವರದಿ ಇಂಗ್ಲೆಂಡ್‌ ಆಟಗಾರರಿಗೆ ಸಂಕಷ್ಟ ತಂದಿದೆ.

Ashes Controversy England Players Face Scrutiny Over 6-Day Drinking Spree During Break

ಒಂದು ಕಡೆಯಲ್ಲಿ ಸತತ ಸೋಲು, ಇನ್ನೊಂದು ಕಡೆ ಇಂಗ್ಲೆಂಡ್ ಆಟಗಾರರ ವರ್ತನೆಗೆ ಟೀಕೆಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಎರಡನೇ ಹಾಗೂ ಮೂರನೇ ಟೆಸ್ಟ್‌ ಪಂದ್ಯದ ನಡುವೆ ಸಿಕ್ಕ ಕೆಲವು ಸದಸ್ಯರು 6 ದಿನ ಮಧ್ಯಪಾವನ್ನೇ ಮಾಡಿದ್ದಾರೆ ಎಂದು ವರದಿಗಳು ಬರುತ್ತಿವೆ. ಎರಡನೇ ಟೆಸ್ಟ್‌ ಮುಗಿದ ಬಳಿಕ ಆಟಗಾರರು ಕ್ವೀನ್ಸ್‌ಲ್ಯಾಂಡ್‌ನ ನೂಸಾ ಎಂಬ ಪ್ರವಾಸಿ ತಾಣಕ್ಕೆ ಹೋಗಿದ್ದರು. ಈ ಪ್ರವಾಸ ಆಟಗಾರರ ಪ್ರವಾಸದಂತೆ ಇರದೆ, ಪಾರ್ಟಿ ರೀತಿಯಲ್ಲಿ ಕಾಣಿಸಿಕೊಂಡಿದೆ.

9 ದಿನ ಬಿಡುವಿನಲ್ಲಿ 6 ದಿನ ಕುಡಿತ

ನೂಸಾದಲ್ಲಿ ಆಟಗಾರರು ಮಸ್ತ್ ಮಜಾ ಮೂಡ್‌ನಲ್ಲಿದ್ದರು. ಈ ವೇಳೆ ಇವರು ಹೊಟೇಲ್‌ ಹಾಗೂ ರಸ್ತೆಯ ಪಕ್ಲದಲ್ಲಿ ಕುಳಿತು ಮಧ್ಯಪಾಸ ಮಾಡುವುದು ಕಂಡು ಬಂದಿದೆ. ಇದೇ ಪ್ರವಾಸದ ವೇಳೆ ಬೆನ್‌ ಸ್ಟೋಕ್ಸ್‌ ಆಯೋಜಿಸಿದ್ದ ಗ್ರೂಪ್‌ ರನ್‌ಗೂ ಯಾರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈ ರನ್‌ಗೆ ತಂಡದ ಕೇವಲ ಮೂರು ಆಟಗಾರರು ಮಾತ್ರ ಭಾಗವಹಿಸಿದ್ದರು. ಇದು ಸಹ ತಂಡದಲ್ಲಿರುವ ಶಿಸ್ತಿ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿವೆ.

ಇಂಗ್ಲೆಂಡ್‌ ತಂಡದ ಆಟಗಾರರ ಮಧ್ಯಪಾನದ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯ ಮ್ಯಾನೇಜಿಂಗ್ ಡೈರೆಕ್ಟರ್‌ ರಾಬ್ ಕೀ ದೊಡ್ಡ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಆಟಗಾರರು ಮಿತಿಮೀರಿ ಮದ್ಯಪಾನ ಮಾಡುವುದು ಒಪ್ಪುವಂತದ್ದಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇಂಗ್ಲೆಂಡ್ ಆಟಗಾರರ ಬಗ್ಗೆ ಬರೆಯಲಾದ ಸುದ್ದಿಗಳನ್ನು ನಾನು ಓದಿದ್ದೇನೆ. ಆಟಗಾರರು ಅತಿಯಾದ ಮಧ್ಯಪಾನ ತರಹದ ವರ್ತನೆ ಖಂಡಿತ ಸಹಿಸುವುದಿಲ್ಲ. ಮಧ್ಯಪಾನ ಸಂಸ್ಕೃತಿ ಸರಿಯಲ್ಲ. ಇನ್ನು ನೂಸಾ ಪ್ರವಾಸದ ಬಗ್ಗೆಯೂ ನನಗೆ ತಕರಾರಿಲ್ಲ. ಆದರೆ ಅಲ್ಲಿ ನಡೆದ ಘಟನೆಯ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ ಎಂದಿದ್ದಾರೆ.

Story first published: Tuesday, December 23, 2025, 17:24 [IST]
Other articles published on Dec 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+