ಬೆಂಗಳೂರು, ಮಾರ್ಚ್ 23: ಟೀಂ ಇಂಡಿಯಾ ವೇಗಿ ಆಶೀಶ್ ನೆಹ್ರಾ ಅವರು ಮಂಗಳವಾರ (ಮಾರ್ಚ್ 22) ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಆಗಿ ಟ್ರಾಲ್ ಆಗಿಬಿಟ್ಟರು. ಸಾಮಾಜಿಕ ಜಾಲ ತಾಣಗಳು ನನಗೆ ತಿಳಿದಿಲ್ಲ, ನಾನಿನ್ನೂ ನೋಕಿಯಾ ಫೋನ್ ಬಳಸುತ್ತಿದ್ದೇನೆ ಎಂದು ನೆಹ್ರಾ ಹೇಳಿದ್ದು ಚರ್ಚೆಯ ವಿಷಯವಾಗಿತ್ತು.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್
'ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಾನು ಬಳಸುತ್ತಿಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ನಾನು ಯಾವುದೇ ಖಾತೆ ಹೊಂದಿಲ್ಲ. ನಾನು ನೋಕಿಯಾ ಫೋನ್ ಬಳಸುತ್ತಿದ್ದೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ವಿಶ್ವ ಟಿ20 ಟೂರ್ನಿಯಲ್ಲಿ ಮಾರ್ಚ್ 23ರಂದು ಸಂಜೆ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಪಂದ್ಯಕ್ಕೂ ಮುನ್ನ ಆಶೀಶ್ ನೆಹ್ರಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.