Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಅಶೋಕ್ ದಿಂಡಾ

Ashok Dinda Announces Retirement From All Forms Of Cricket

ನವದೆಹಲಿ: ಟೀಮ್ ಇಂಡಿಯಾದ ಬೌಲರ್ ಅಶೋಕ್ ದಿಂಡಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದಿಂಡಾ ಭಾರತದ ಪರ 13 ಏಕದಿನ ಪಂದ್ಯಗಳಲ್ಲಿ 12 ವಿಕೆಟ್‌ಗಳು ಮತ್ತು 9 ಟಿ20ಐ ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು. ದಿಂಡಾಗೀಗ 36ರ ಹರೆಯ.

'ಭಾರತ ಪರ ಆಡಬೇಕನ್ನೋದು ಪ್ರತಿಯೊಬ್ಬರ ಕನಸು. ನಾನು ಬೆಂಗಾಲ್ ತಂಡದಲ್ಲಿ ಆಡಿದ್ದೆ. ಹಾಗಾಗಿ ನನಗೆ ಭಾರತ ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಭಾರತ ಪರ ಆಡುವ ಅವಕಾಶವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನನಗೆ ನೀಡಿತು ಅಂದುಕೊಳ್ಳುತ್ತೇನೆ,' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಂಡಾ ಹೇಳಿದ್ದಾರೆ.

'ಬೆಂಗಾಲ್ ಪರ ಆಡುತ್ತಿದ್ದಾಗ ನನಗೆ ದೀಪ್‌ದಾಸ್ ಗುಪ್ತಾ, ರೋಹನ್ ಗವಾಸ್ಕರ್‌ನಂತ ಹಿರಿಯರು ಮಾರ್ಗದರ್ಶನ ನೀಡಿದ್ದಾರೆ. ಪ್ರತೀ ವಿಕೆಟ್ ಸಿಕ್ಕಾಗಲೂ ನನಗೆ ಬೆಂಬಲ ಸಿಗುತ್ತಿತ್ತು,' ಎಂದು ದಿಂಡಾ ತನ್ನ ಆಟದ ವೇಳೆಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.

ಮೇ 2010ರಂದು ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದ ದಿಂಡಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಗಂಗೂಲಿ ತನಗೆ ಯಾವತ್ತಿಗೂ ಬೆಂಬಲ ನೀಡುತ್ತಿದ್ದರು ಎಂದು ದಿಂಡಾ ಹೇಳಿದ್ದಾರೆ.

Story first published: Wednesday, February 3, 2021, 10:04 [IST]
Other articles published on Feb 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+