ಪಂದ್ಯದ ವೇಳೆ ವೇಗಿ ಅಶೋಕ್ ದಿಂಡಾ ತಲೆಗೆ ಬಡಿದ ಚೆಂಡು

ಕೋಲ್ಕತಾ, ಫೆಬ್ರವರಿ 11: ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಬೆಂಗಾಲದ ವೇಗಿ ಅಶೋಕ್ ದಿಂಡಾ ಅವರ ತಲೆಗೆ ಚೆಂಡು ಬಡಿದಿದೆ.
ಸೋಮವಾರ(ಫೆ. 11)ದಂದು ಬೆಂಗಾಳದ ಟ್ವೆಂಟಿ20 ಅಭ್ಯಾಸ ಪಂದ್ಯದ ವೇಳೆ ಅಶೋಕ್ ಬೌಲಿಂಗ್ ಮಾಡುವ ವೇಳೆ, ಬ್ಯಾಟ್ಸ್ ಮನ್ ಬಿರೇಂದರ್ ವಿವೇಕ್ ಸಿಂಗ್ ಅವರು ನೇರವಾಗಿ ಹೊಡೆದಿದ್ದಾರೆ, ದಿಂಡಾ ಅವರು ಕ್ಯಾಚ್ ಹಿಡಿಯಲು ಯತ್ನಿಸಿದಾಗ, ದಿಂಡಾ ಅವರ ಹಣೆಗೆ ಚೆಂಡು ಬಡಿದಿದೆ ಎಂದು ಬೆಂಗಾಳ ತಂಡದ ಸಹಾಯಕ ಸಿಬ್ಬಂದಿ ಹೇಳಿದ್ದಾರೆ.
ದಿಂಡಾ ಅವರು ತಲೆಗೆ ಪೆಟ್ಟು ತಿಂದ ಬಳಿಕವೂ ಬೌಲಿಂಗ್ ಮಾಡಿದರು. ಕೆಲ ಕಾಲ ಡ್ರೆಸಿಂಗ್ ರೂಮಿನಲ್ಲಿ ವಿಶ್ರಾಂತಿ ಪಡೆದರು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಅವರಿಗೆ ಎರಡು ದಿನಗಳ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್ ಮಾಡಿಸಲಾಗುವುದು ಎಂದು ಬೆಂಗಾಳ ಕ್ರಿಕೆಟ್ ಸಮಿತಿ ತಿಳಿಸಿದೆ.
2011ರ ಮುಷ್ತಾಕ್ ಅಲಿ ಚಾಂಪಿಯನ್ಸ್ ಬೆಂಗಾಳ್ ಓಪನ್ ದೇಶಿ ಟಿ20 ಟೂರ್ನಮೆಂಟ್ ನಲ್ಲಿ ಮಿಜೋರಾಮ್ ವಿರುದ್ಧ ಡಿ ಗುಂಪಿನ ಪಂದ್ಯವನ್ನು ಕಟಕ್ ನ ಬಾರಬತಿ ಸ್ಟೇಡಿಯಂನಲ್ಲಿ ಫೆಬ್ರವರಿ 21ರಂದು ಆಡಲಿದೆ. ಕಳೆದ ಸೀಸನ್ ನಲ್ಲಿ ಫೈನಲ್ ತಲುಪವಲ್ಲಿ ವಿಫಲವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications