ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಬೆಂಗಳೂರು, ನ.06: ಬಾಲಿವುಡ್ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಕ್ರಿಕೆಟರ್ ಅಮಿತ್ ಮಿಶ್ರಾ ಅವರ ವಿರುದ್ಧ ಅಶೋಕ್ ನಗರ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 27ರಂದು ವಿಚಾರಣೆಗೆ ಹಾಜರಾಗಿದ್ದ ಮಿಶ್ರಾರನ್ನು ವಿಚಾರಣೆ ಬಳಿಕ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ದೂರುದಾರೆ ವಂದನಾ ಅವರು, ಯಾವುದೇ ಕಾರಣಕ್ಕೂ ದೂರು ವಾಪಸ್ ಪಡೆಯುವುದಿಲ್ಲ ಎಂದಿದ್ದರು. [ಮಿಶ್ರಾ ಬಂಧನ ನಂತರ ಬಿಡುಗಡೆ]

ಹೀಗಾಗಿ ಅಮಿತ್ ಮಿಶ್ರಾ ವಿರುದ್ಧ ಅಶೋಕ ನಗರ ಪೊಲೀಸರು ಅಮಿತ್ ಮಿಶ್ರಾ ಹಾಗೂ ವಂದನಾ ಅವರ ಹೇಳಿಕೆಗಳು ಸೇರಿದಂತೆ 20 ಪುಟಗಳ ದೋಷಾರೋಪಣ ಪಟ್ಟಿ ಸಿದ್ಧಪಡಿಸಿ 11ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯದಲ್ಲಿ ಶುಕ್ರವಾರ ಸಲ್ಲಿಸಿದ್ದಾರೆ.
ಅಮಿತ್ ಮಿಶ್ರಾ ಅವರು ಗೆಳತಿಯೂ ಆಗಿರುವ ಬಾಲಿವುಡ್ ನಿರ್ಮಾಪಕಿ ವಂದನಾ ಅವರು ತಮ್ಮ ಮೇಲೆ ಬೆಂಗಳೂರಿನ ಹೋಟೆಲ್ ನಲ್ಲಿ ಮಿಶ್ರಾ ಹಲ್ಲೆ ಮಾಡಿದ್ದಾರೆ ಎಂದು ಅಶೋಕ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಐಪಿಸಿ ಸೆಕ್ಷನ್ 354, 323 ಹಾಗೂ 325ರ ಅನ್ವಯ ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಿದ್ದರು
ಸೆಪ್ಟೆಂಬರ್ 21 ರಿಂದ 27ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಟೂರ್ನಿಗೆ ಆಯ್ಕೆಯಾಗುವುದಕ್ಕೂ ಮುನ್ನಾ ಬೆಂಗಳೂರಿನ ಎನ್ ಸಿಎಯಲ್ಲಿ ಅಭ್ಯಾಸಕ್ಕೆಂದು ಮಿಶ್ರಾ ಅವರು ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೇಳಿ ಪೊಲೀಸರು ಮಿಶ್ರಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ವಿಚಾರಣೆಗೆ ಬಂದ ಮಿಶ್ರಾರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications