'ಅವನೊಬ್ಬ ರಾಕ್‌ಸ್ಟಾರ್': ಹ್ಯಾಟ್ರಿಕ್ ಹೀರೋ ಆ್ಯಷ್ಟನ್‌ಗೆ ಭಾರತೀಯನೇ ಸ್ಪೂರ್ತಿ !

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ವಿರುದ್ಧ ಆಸ್ಟ್ರೇಲಿಯಾ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಭರ್ಜರಿಯಾಗಿ ಸೋಲಿಸಿತು. ಹ್ಯಾಟ್ರಿಕ್ ವಿಕೆಟ್ ಪಡೆದು ಆಷ್ಟನ್ ಅಗರ್ ದಕ್ಷಿಣ ಆಫ್ರಿಕಾದ ಹೀನಾಯ ಸೋಲಿಗೆ ಕಾರಣರಾದರು. 24 ರನ್‌ಗೆ 5 ವಿಕೆಟ್ ಪಡೆದು ದಾಖಲೆಯನ್ನೂ ಮಾಡಿದ್ದಾರೆ ಆಷ್ಟನ್ ಅಗರ್.
ಹ್ಯಾಟ್ರಿಕ್ ವಿಕೆಟ್ ಪಡೆದು ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ಅಗರ್ ಪಂದ್ಯದ ಗೆಲುವಿನ ಬಳಿಕ ಕುತೂಹಲದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದ ಆಟಗಾರನೊಬ್ಬ ಅಗರ್‌ಗೆ ಸ್ಪೂರ್ತಿಯಂತೆ. ಆತನ ಜೊತೆಗೆ ನಡೆಸಿದ ಮಾತುಕತೆ ಆಷ್ಟನ್ ಆಟಕ್ಕೆ ಸ್ಪೂರ್ತಿ ನೀಡಿದೆ ಎನ್ನುವುದನ್ನು ಸ್ವತಃ ಅಗರ್ ಹೇಳಿಕೊಂಡಿದ್ದಾರೆ.
ಆ್ಯಷ್ಟನ್ ಅಗರ್‌ಗೆ ಹ್ಯಾಟ್ರಿಕ್ ವಿಕೆಟ್, ದಕ್ಷಿಣ ಆಫ್ರಿಕಾಕ್ಕೆ ಕೆಟ್ಟ ಹಣೆಪಟ್ಟಿ!
ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಷ್ಟನ್ಅಗರ್‌ಗೆ ಸ್ಪೂರ್ತಿಯಾದ ಟೀಮ್ ಇಂಡಿಯಾದ ಆಟಗಾರ ಯಾರು ಗೊತ್ತಾ?

ಟೀಮ್ ಇಂಡಿಯಾದ ಆಲ್‌ರೌಂಡರ್
ಆಸ್ಟನ್ ಅಗರ್‌ಗೆ ಸ್ಪೂರ್ತಿಯಾದ ಆಟಗಾರ ಬೇರೆ ಯಾರೂ ಅಲ್ಲ. ಅದು ಟೀಮ್ ಇಂಡಿಯಾದ ಅಲ್‌ರೌಂಡರ್ ರವೀಂದ್ರ ಜಡೇಜಾ. ಕಳೆದ ತಿಂಗಳು ಭಾರತದಲ್ಲಿ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಜಡೇಜಾ ಜೊತೆ ನಡೆಸಿದ ಮಾತುಕತೆ ತನಗೆ ಸ್ಪೂರ್ತಿ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಜಡೇಜಾರನ್ನು 'ರಾಕ್‌ಸ್ಟಾರ್' ಎಂದ ಅಗರ್
ಆಸ್ಟನ್ ಅಗರ್ ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ತಮಗೆ ಯಾವ ರೀತಿ ಸ್ಪೂರ್ತಿ ನೀಡಿದರು ಎನ್ನುವುದನ್ನು ಹೇಳುತ್ತಾ ಜಡೇಜಾಗೆ ಆತನೊಬ್ಬ ರಾಕ್‌ಸ್ಟಾರ್ ಎಂದಿದ್ದಾರೆ. ಬೌಲಿಂಗ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಜಡೇಜಾ ಪ್ರದರ್ಶನವನ್ನು ಆಷ್ಟನ್ ಈ ರೀತಿ ಬಣ್ಣಿಸಿದ್ದಾರೆ.

ಜಡೇಜಾ ಹಾಗೂ ಆಷ್ಟನ್‌ಗಿದೆ ಸಾಮ್ಯತೆ
ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಆಸ್ಟ್ರೇಲಿಯಾ ಆಟಗಾರ ಆಷ್ಟನ್ ಅಗರ್ ಮಧ್ಯೆ ಸಾಕಷ್ಟು ಸಾಮ್ಉತೆಗಳು ಇರುವುದನ್ನು ಗಮನಿಸಬಹುದು. ಇನ್ನರೂ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಆಟಗಾರರು. ಜೊತೆಗೆ ಇಬ್ಬರೂ ಎಡಗೈ ಸ್ಪಿನ್ನರ್‌ಗಳು. ಆದರೆ ಫೀಲ್ಡಿಂಗ್ ವಿಚಾರದಲ್ಲಿ ಮಾತ್ರ ಜಡೇಜಾಗೆ ಹೋಲಿಸಿದರೆ ಅಗರ್ ಇನ್ನೂ ಸಾಕಷ್ಟು ಸುಧಾರಿಸಬೇಕಿದೆ

ಹ್ಯಾಟ್ರಿಕ್ ಸಾಧಿಸಿದ ಎರಡನೇ ಆಸಿಸ್ ಆಟಗಾರ
ಆಫ್ರಿಕಾ ವಿರುದ್ಧದ ಮೊದಲ ಟಿ20 ಸರಣಿಯಲ್ಲಿ ಹ್ಯಾಟ್ರಿಕ್ ಗಳಿಸಿದ ಸಾಧನೆಯನ್ನು ಮಾಡಿ ಆಷ್ಟನ್ ಮಿಂಚಿದ್ದಾರೆ. ಟಿ20ಯಲ್ಲಿ ಹ್ಯಾಟ್ರಿಕ್ ಸಾಧಿಸಿದ ಎರಡನೇ ಆಸ್ಟ್ರೇಲಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಆಷ್ಟನ್ ಪಾತ್ರರಾಗಿದ್ದಾರೆ.

ಐದು ವಿಕೆಟ್ ಕಿತ್ತ ಆಷ್ಟನ್
ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಬೌಲರ್ ಆಷ್ಟನ್ ಅಗರ್ 5 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರವಾಗಿ ಅತ್ಯುತ್ತಮ ಬೌಲಿಂಗ್ ಸಾಧನೆಯನ್ನು ಮಾಡಿದ ಆಟಗಾರನಾಗಿದ್ದಾರೆ ಅಗರ್. ಈ ಹಿಂದೆ 2016ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜೇಮ್ಸ್ ಫಾಲ್ಕ್‌ನರ್ 24 ರನ್‌ಗೆ 5 ವಿಕೆಟ್ ಪಡೆದದ್ದು ದಾಖಲೆಯಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications