Ashutosh Sharma: ಡೆಲ್ಲಿ ತಂಡದ ಮ್ಯಾಚ್ ವಿನ್ನಿಂಗ್ ಹೀರೋ ಆಶುತೋಷ್ ಶರ್ಮಾ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಗೆಲುವಿನ ಖಾತೆ ಓಪನ್ ಮಾಡಿದೆ ಎಂದ್ರೆ ಅದರ ಸಂಪೂರ್ಣ ಕ್ರೆಡಿಟ್ ಆಶುತೋಷ್ ಶರ್ಮಾಗೆ ಸಲ್ಲುತ್ತದೆ. ಒಂದು ಹಂತದಲ್ಲಿ ವಿಕೆಟ್‌ಗಳು ಬೀಳ್ತಾ ಇದ್ದರೂ ಸಹ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ, ಯುವ ಬ್ಯಾಟರ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಇವರು ತಮ್ಮ ಕ್ಲಾಸಿಕ್ ಆಟದ ಪ್ರದರ್ಶನ ನೀಡಿ, ಎದುರಾಳಿಗಳ ಕಡೆಯಿದ್ದ ವಿಜಯ ಲಕ್ಷ್ಮಿಯನ್ನು ತಮ್ಮತ್ತ ವಾಲುವಂತೆ ಮಾಡಿದರು. ಇದರಿಂದ ಆಶುತೋಷ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ಜಯದಲ್ಲಿ ಮಿಂಚಿದರು.
ಪಂಜಾಬ್ ಕಿಂಗ್ಸ್ ತಂಡದ ಪರ ಈ ಹಿಂದಿನ ಆವೃತ್ತಿಯನ್ನು ಆಡಿದ್ದ ಆಶುತೋಷ್ ಅವರನ್ನು ತಂಡ ಕೈ ಬಿಟ್ಟಿತ್ತು. ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇವರು 30 ಲಕ್ಷ ರೂಪಾಯಿ ಇಂದ ಹರಾಜು ಅಂಗಳ ಪ್ರವೇಶಿಸಿದ್ದರು. ಆದರೆ ಡೆಲ್ಲಿ 3.80 ಕೋಟಿ ನೀಡಿ ಇವರಿಗೆ ತಮ್ಮ ತಂಡಕ್ಕೆ ಬರಮಾಡಿಕೊಂಡಿತು. ಅಲ್ಲದೆ ತಂಡದಲ್ಲಿ ದೊಡ್ಡ ಜವಾಬ್ದಾರಿಯನ್ನು ಸಹ ನೀಡಿತು. ಫಿನಿಷರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಆಶುತೋಷ್ ಡೆಲ್ಲಿ ಪಾಳಯದಲ್ಲಿ ಮಂದಹಾಸ ಮೂಡಿಸಿದರು.

ಆಶುತೋಷ್ ಶರ್ಮಾ ಬ್ಯಾಟಿಂಗ್ ಮಾಡಲು ಬಂದಾಗ ಡೆಲ್ಲಿ ಸಂಕಷ್ಟದಲ್ಲಿತ್ತು. ಡೆಲ್ಲಿ ಕ್ಯಾಪಿಟಲ್ಸ್ 6.4 ಓವರ್‌ಗಳಲ್ಲಿ 65 ರನ್‌ಗಳನ್ನು ಕಳೆದುಕೊಂಡು ಪ್ರಮುಖ ಐದು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಬ್ಯಾಟ್ ಮಾಡಲು ಬಂದ ಆಶುತೋಷ್ ಅಬ್ಬರಿಸಿದರು. ತಮ್ಮ ಕಲಾತ್ಮಕ ಆಟದ ಪ್ರದರ್ಶನ ನೀಡಿದ ಆಶುತೋಷ್ ಅಮೋಘ ಇನಿಂಗ್ಸ್ ಕಟ್ಟಿ ಬೀಗಿದರು. ಒಂದು ಬದಿಯಲ್ಲಿ ವಿಕೆಟ್‌ಗಳು ಪಟಪಟನೆ ಬೀಳ್ತಾ ಇದ್ರು ಸಹ ಧ್ರುತಿ ಗೆಡದೆ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಆಶುತೋಷ್ ಡೆಲ್ಲಿ ತಂಡದ ನವ ತಾರೆಯಾಗಿ ಹೊರ ಹೊಮ್ಮಿದರು.
ಆಶುತೋಷ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವದರು. ಕೇವಲ 31 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 66 ರನ್ ಬಾರಿಸಿದ ಆಶುತೋಷ್ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಹೀರೋ ಆದರು.
ಮೆಂಟರ್‌ಗೆ ಪ್ರಶಸ್ತಿ ಅರ್ಪಣೆ
ಅಶುತೋಷ್ ಶರ್ಮಾ ಅವರ ಮನಮೋಹಕ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಸಂದಿತು. ಇದೇ ವೇಳೆ ಆಶುತೋಷ್ ಕಳೆದ ವರ್ಷದಿಂದ ತಾನು ಬಹಳಷ್ಟು ಕಲಿತಿದ್ದೇನೆ ಎಂದು ಹೇಳಿದರು. ಕಳೆದ ಆವೃತ್ತಿಯಲ್ಲಿ ಇಂತಹದ್ದೇ ಸ್ಥಿತಿಯಲ್ಲಿ ಕೊನೆಯ ವರೆಗೂ ಹೋರಾಡಿ ಎಡವಿದ್ದೆ. ಈ ತಪ್ಪನ್ನು ಮಾಡಬಾರದು ಎಂದು ಪಣ ತೊಟ್ಟೆ. ದೇಶೀಯ ಟೂರ್ನಿಯಲ್ಲೂ ಸಹ ಮ್ಯಾಚ್ ಫಿನಿಷರ್ ರೂಪದಲ್ಲಿ ಕಾಣಿಸಿಕೊಂಡೆ. ಕಳೆದ ಒಂದು ವರ್ಷ ಇದೇ ಹಾದಿಯಲ್ಲಿ ಕೆಲಸ ಮಾಡಿದ್ದೇನೆ. ಕೊನೆಯ ಓವರ್ ವರೆಗೂ ಕ್ರೀಸ್‌ನಲ್ಲಿ ನಿಂತರೆ ಪಂದ್ಯದ ಗತಿಯನ್ನೇ ಬದಲಿಸಬಲ್ಲ ವಿಶ್ವಾಸ ನನ್ನಲ್ಲಿತ್ತು. ವಿಪ್ರಜ್ ಚೆನ್ನಾಗಿ ಆಡಿದ್ದಾರೆ. ಒತ್ತಡದಲ್ಲಿ ಅವರು ತುಂಬಾ ಶಾಂತವಾಗಿದ್ದರು ಎಂದಿದ್ದಾರೆ. ಇನ್ನು ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಆಶುತೋಷ್ ತಮ್ಮ ಮೆಂಟರ್ ಶಿಖರ್ ಧವನ್ ಅವರಿಗೆ ಅರ್ಪಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications