Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಮರಣೀಯ ಟೆಸ್ಟ್‌ನಲ್ಲಿ ಡಕೌಟ್‌ ಆದ ಅಶ್ವಿನ್‌: ಬೇಡದ ದಾಖಲೆಗೆ ಭಾಜನರಾದ ಆಲ್‌ರೌಂಡರ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆದರೆ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್‌ ಒಬ್ಬ ಸ್ಮರಣೀಯ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. 100ನೇ ಟೆಸ್ಟ್‌ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ.

ರವಿಚಂದ್ರನ್‌ ಅಶ್ವಿನ್‌ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಸ್ಪಿನ್ ಮಾಂತ್ರಿಕ ನಾಲ್ಕು ವಿಕೆಟ್‌ ಪಡೆದ ಅಬ್ಬರಿಸಿದ್ದಾರೆ. ಅಶ್ವಿನ್ ಅವರ 100ನೇ ಟೆಸ್ಟ್ ಪಂದ್ಯದಲ್ಲಿ ಅನಗತ್ಯ ದಾಖಲೆಯೂ ಅವರ ಹೆಸರಿನಲ್ಲಿ ದಾಖಲಾಗಿದೆ. ಅವರು ತಮ್ಮ 100ನೇ ಪಂದ್ಯದಲ್ಲೇ ಡಕ್‌ ಔಟ್ ಆದರು. ಅಶ್ವಿನ್ ಡಕ್ ಔಟ್ ಆದ ಕೂಡಲೇ ಅವರ ಹೆಸರಿಗೆ ದಾಖಲೆಯೂ ಸೇರ್ಪಡೆಯಾಯಿತು. ಇದಕ್ಕೂ ಮೊದಲು ಕೇವಲ ಇಬ್ಬರು ಭಾರತೀಯ ಆಟಗಾರರು ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಡಕ್‌ಗೆ ಔಟಾಗಿದ್ದರು. ಅಶ್ವಿನ್ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

Ashwin ducked out in a memorable Test All-rounder who got an unwanted record

ಒಟ್ಟು 14 ಆಟಗಾರರು ಭಾರತಕ್ಕಾಗಿ 100 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆ ಆಟಗಾರರಲ್ಲಿ ಅಶ್ವಿನ್ ಕೂಡ ಒಬ್ಬರು. ಆದರೆ 14 ಆಟಗಾರರ ಪೈಕಿ ಮೂವರು ಆಟಗಾರರು ಮಾತ್ರ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಖಾತೆ ತೆರೆಯದೆ ಡಕ್‌ನಲ್ಲಿ ಔಟಾಗಿದ್ದಾರೆ. ಆರ್ ಅಶ್ವಿನ್ ಹೊರತಾಗಿ ಚೇತೇಶ್ವರ ಪೂಜಾರ ಮತ್ತು ದಿಲೀಪ್ ವೆಂಗ್‌ಸರ್ಕರ್ ಅವರ ಹೆಸರುಗಳು ಆ ಆಟಗಾರರಲ್ಲಿ ಸೇರಿವೆ.

ಚೇತೇಶ್ವರ ಪೂಜಾರ ಅವರು 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡಿದರು. ಅಲ್ಲಿ ಅವರು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ಖಾತೆಯನ್ನು ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 31 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಮತ್ತೊಂದೆಡೆ, ದಿಲೀಪ್ ವೆಂಗ್‌ಸರ್ಕರ್ 1988 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ವೇಳೆ ಅವರು ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 0 ಸ್ಕೋರ್‌ನಲ್ಲಿ ಪೆವಿಲಿಯನ್‌ಗೆ ಮರಳಿದರು.

ಆರ್ ಅಶ್ವಿನ್ ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್‌ನಿಂದ ರನ್ ಬಾರಿಸುವಲ್ಲಿ ವಿಫಲರಾದರು. ಅವರು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಇಂಗ್ಲೆಂಡ್ ವಿರುದ್ಧ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅದ್ಭುತ ಬೌಲಿಂಗ್ ನಡೆಸಿ 11.4 ಓವರ್ ಗಳಲ್ಲಿ 51 ರನ್ ನೀಡಿ 4 ವಿಕೆಟ್ ಕಬಳಿಸಿದರು.

Ashwin ducked out in a memorable Test All-rounder who got an unwanted record

ಅಶ್ವಿನ್ ಅವರ ಟೆಸ್ಟ್ ವೃತ್ತಿಜೀವನವು ಸಾಕಷ್ಟು ಅದ್ಭುತವಾಗಿದೆ. ಅಶ್ವಿನ್ ಭಾರತದ ಪರ 100 ಟೆಸ್ಟ್ ಪಂದ್ಯಗಳಲ್ಲಿ 511 ವಿಕೆಟ್ ಪಡೆದಿದ್ದಾರೆ. ಅವರು ಬ್ಯಾಟ್‌ನಿಂದ 3309 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ ಐದು ಶತಕಗಳಿವೆ. ಈ ಸ್ವರೂಪದಲ್ಲಿ 500+ ವಿಕೆಟ್‌ಗಳು ಮತ್ತು 5 ಶತಕಗಳನ್ನು ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

Story first published: Friday, March 8, 2024, 20:26 [IST]
Other articles published on Mar 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+