For Quick Alerts
ALLOW NOTIFICATIONS  
For Daily Alerts
 

ಸರಣಿ ಶ್ರೇಷ್ಠ : ಸಚಿನ್ ಸಮಕ್ಕೆ ನಿಂತ ಆಫ್ ಸ್ಪಿನ್ನರ್ ಅಶ್ವಿನ್

By Mahesh

ನವದೆಹಲಿ, ಡಿ. 07: ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲೂ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಳ್ಳುವುದರಲ್ಲಿ ಎತ್ತಿದ ಕೈ ಎನಿಸಿದ್ದ ಸಚಿನ್ ತೆಂಡೂಲ್ಕರ್ ಅವರ ಸಾಲಿಗೆ ಈಗ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಸೇರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋಮವಾರ ಅಶ್ವಿನ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದಾರೆ.

ಅಶ್ವಿನ್ ಅವರು ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಿತ್ತು ಭಾರತದ ಗೆಲುವಿನಲ್ಲಿ ಮತ್ತೊಮ್ಮೆ ಮಹತ್ವದ ಪಾತ್ರವಹಿಸಿದರು. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಅಶ್ವಿನ್ ಅವರು 5 ವಿಕೆಟ್ ಪಡೆದುಕೊಂಡರು. ದಕ್ಷಿಣ ಆಫ್ರಿಕಾ ತಂಡ 337 ರನ್ ಅಂತರದಲ್ಲಿ ಸೋಲು ಕಂಡಿತು. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ 3-0 ಅಂತರದಿಂದ ಗೆದ್ದುಕೊಂಡಿತು. [ಕೋಟ್ಲಾದಲ್ಲಿ ಇತಿಹಾಸ ನಿರ್ಮಿಸಿದ ಕೊಹ್ಲಿ ಹಾಗೂ ಟೀಂ ಇಂಡಿಯಾ]

Delhi Test: Off-spinner Ashwin equals Tendulkar, McGrath

29 ವರ್ಷ ವಯಸ್ಸಿನ ಅಶ್ವಿನ್ ಅವರು ಗಾಂಧಿ ಮಂಡೇಲ ಫ್ರೀಡಂ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಸರಣಿಯಲ್ಲಿ ಅತ್ಯಧಿಕ ವಿಕೆಟ್ ಗಳಿಕೆ (31 ವಿಕೆಟ್) ಮಾಡುವ ಮೂಲಕ ಸರಣಿ ಶ್ರೇಷ್ಠ ಎನಿಸಿದ್ದಾರೆ.

ಐದನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಅಶ್ವಿನ್ ಅವರು ಸಚಿನ್ ತೆಂಡೂಲ್ಕರ್, ಗ್ಲೆನ್ ಮೆಗ್ರಾ, ವಿರೇಂದ್ರ ಸೆಹ್ವಾಗ್ ಹಾಗೂ ಇತರರ ಸಾಲಿಗೆ ಸೇರಿದ್ದಾರೆ. [ಬ್ಲಾಕಾಥಾನ್ : ಹಶೀಂ ಆಮ್ಲಾ ಅಭೂತಪೂರ್ವ ದಾಖಲೆ]

ಸಚಿನ್ ಅವರು 200 ಟೆಸ್ಟ್ ಬದುಕಿನಲ್ಲಿ 5 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಅಶ್ವಿನ್ ಅವರು 31 ಟೆಸ್ಟ್ ಪಂದ್ಯಗಳಲ್ಲೇ 5 ಬಾರಿ ಸರಣಿ ಶ್ರೇಷ್ಠ ಎನಿಸಿಕೊಂಡಿರುವ ದೊಡ್ಡ ಸಾಧನೆ. ಟೆಸ್ಟ್ ಇತಿಹಾಸದಲ್ಲಿ ಶ್ರೀಲಂಕಾದ ಸ್ಪಿನ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದು ಅಗ್ರಸ್ಥಾನದಲ್ಲಿದ್ದಾರೆ. 133 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ : ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರು
* 11 - ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ)
* 9- ಜಾಕ್ ಕಾಲೀಸ್ (ದಕ್ಷಿಣ ಆಫ್ರಿಕಾ)
* 8- ಇಮ್ರಾನ್ ಖಾನ್ (ಪಾಕಿಸ್ತಾನ), ರಿಚರ್ಡ್ ಹ್ಯಾಡ್ಲಿ (ನ್ಯೂಜಿಲೆಂಡ್), ಶೇನ್ ವಾರ್ನ್ (ಆಸ್ಟ್ರೇಲಿಯಾ)
* 7- ವಾಸೀಂ ಅಕ್ರಂ (ಪಾಕಿಸ್ತಾನ), ಶಿವ ನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್)
* 6- ಮಾಲ್ಕಂ ಮಾರ್ಷಲ್ (ವೆಸ್ ಇಂಡೀಸ್), ಕರ್ಟ್ಲಿ ಅಂಬ್ರೋಸ್ (ವೆಸ್ಟ್ ಇಂಡೀಸ್), ಸ್ಟೀವ್ ವಾ (ಆಸ್ಟ್ರೇಲಿಯಾ
* 5- ಆಶ್ವಿನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ (ಎಲ್ಲರೂ ಭಾರತ), ಗ್ರಹಾಂ ಗೂಚ್, ಆಂಡ್ರ್ಯೂ ಸ್ಟ್ರಾಸ್ (ಇಬ್ಬರೂ ಇಂಗ್ಲೆಂಡ್), ಗ್ಲೆನ್ ಮೆಗ್ರಾ, ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ), ಡೇಲ್ ಸ್ಟೇನ್(ದಕ್ಷಿಣ ಆಫ್ರಿಕಾ), ವಖಾರ್ ಯೂನಿಸ್ (ಪಾಕಿಸ್ತಾನ)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+