For Quick Alerts
ALLOW NOTIFICATIONS  
For Daily Alerts
 

R Ashwin: ಅಶ್ವಿನ್‌ಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ವಿಕೆಟ್‌ ಸಾಧನೆಯ ಸುವರ್ಣ ಅವಕಾಶ

ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಎರಡನೇ ಟೆಸ್ಟ್‌ ಕಾನ್ಪುರ್‌ದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಕನಸು ಕಾಣುತ್ತಿದೆ. ನಾಲ್ಕನೇ ದಿನದ ಆಟದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಮಂಗಳವಾರ ಮೊದಲಾವಧಿಯ ಆಟದಲ್ಲಿ ಬಾಂಗ್ಲಾ ಆಟಕ್ಕೆ ಬ್ರೇಕ್ ಹಾಕುವ ಕನಸು ಭಾರತ ತಂಡದ್ದಾಗಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಅಶ್ವಿನ್ ದಾಖಲೆಯ ಪುಟಕ್ಕೆ ಹೆಸರು ನಮೂದಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಎರಡು ಹಾಗೂ ಮೂರನೇ ದಿನದಾಟಕ್ಕೆ ಮಳೆ ಅಡ್ಡಿ ಪಡಿಸಿತ್ತು. ಆದರೆ ನಾಲ್ಕನೇ ದಿನದಾಟ ಪೂರ್ಣವಾಗಿ ನಡೆದಿದೆ. ಈ ವೇಳೆ ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ 52 ರನ್‌ಗಳ ಮುನ್ನಡೆ ಸಾಧಿಸಿ ಡಿಕ್ಲೇರ್ ಮಾಡಿಕೊಂಡಿದೆ. ಎರಡನೇ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾ 2 ವಿಕೆಟ್‌ಗೆ 26 ರನ್‌ ಕಲೆ ಹಾಕಿದೆ. ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲಿ ಅಶ್ವಿನ್ ಎರಡು ವಿಕೆಟ್‌ ಪಡೆದು ಬೀಗಿದ್ದಾರೆ. ಇನ್ನು ನಾಲ್ಕು ವಿಕೆಟ್‌ ಪಡೆದಲ್ಲಿ ಅಶ್ವಿನ್ ಇತಿಹಾಸ ಸೃಷ್ಟಿಸುವ ಸಾಧ್ಯತೆ ಇದೆ.

Ashwin Nears WTC Record Set to Overtake Lyon as Top Wicket-Taker

ಇತಿಹಾಸದ ಸನಿಹದಲ್ಲಿ ಅಶ್ವಿನ್

ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ರವಿಚಂದ್ರನ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗುವ ಅವಕಾಶ ಹೊಂದಿದ್ದಾರೆ. ಸದ್ಯ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಬೌಲರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

4 ವಿಕೆಟ್‌ ಪಡೆದರೆ ಸಾಧನೆ

ಲಿಯಾನ್ 43 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಂದ್ಯಗಳನ್ನು ಆಡಿದ್ದು 187 ವಿಕೆಟ್ ಪಡೆದಿದ್ದಾರೆ. ಆರ್ ಅಶ್ವಿನ್ 37 ಟೆಸ್ಟ್ ಪಂದ್ಯಗಳನ್ನು ಆಡಿದ್ದು 184 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅಶ್ವಿನ್‌ಗೆ ಅಗ್ರ ಸ್ಥಾನಕ್ಕೆ ಏರಲು ಇನ್ನು ನಾಲ್ಕು ವಿಕೆಟ್‌ಗಳ ಅವಶ್ಯಕತೆ ಇದೆ. ಬಾಂಗ್ಲಾದೇಶದ ಎರಡನೇ ಇನಿಂಗ್ಸ್‌ನಲ್ಲಿ ಇನ್ನು ಎಂಟು ವಿಕೆಟ್‌ಗಳು ಬಾಕಿ ಇವೆ. ಅಲ್ಲದೆ ಮಂಗಳವಾರ ಇಡೀ ದಿನದ ಆಟ ನಡೆಯುವ ಸಾಧ್ಯತೆ ಇದೆ. ಅಶ್ವಿನ್‌ ಉಳಿದ ಎಂಟು ವಿಕೆಟ್‌ಗಳಲ್ಲಿ ನಾಲ್ಕು ವಿಕೆಟ್‌ ಕಬಳಿಸಿದರೆ ದಾಖಲೆ ಪುಟ ಸೇರುತ್ತಾರೆ.

Ashwin Nears WTC Record Set to Overtake Lyon as Top Wicket-Taker

ಈ ಟೆಸ್ಟ್‌ ಸರಣಿಯಲ್ಲಿ ಅಶ್ವಿನ್‌ ಈ ಸಾಧನೆ ಮಾಡುವಲ್ಲಿ ವಿಫಲರಾದರೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಈ ಸಾಧನೆ ಮಾಡುವ ಅವಕಾಶ ಇದೆ. ಅಕ್ಟೋಬರ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇಲ್ಲಿಯೂ ಅಶ್ವಿನ್‌ಗೆ ಹಲವು ದಾಖಲೆಗಳನ್ನು ನಿರ್ಮಿಸುವ ಅವಕಾಶ ಇದೆ. ಆಸ್ಟ್ರೇಲಿಯಾ ನಾಥನ್ ಲಿಯಾನ್ ಅವರಿಗೆ ಸದ್ಯ ಯಾವುದೇ ಟೆಸ್ಟ್‌ ಪಂದ್ಯಗಳಿಲ್ಲ. ಹೀಗಾಗಿ ಅಶ್ವಿನ್‌ ಇನ್ನೇನು ಕೆಲವೇ ದಿನಗಳಲ್ಲಿ ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ ಆಗಲಿದ್ದಾರೆ.

ಜೋಶ್‌ ದಾಖಲೆ ಅಳಿಸಿದ ಅಶ್ವಿನ್

ಬಾಂಗ್ಲಾದೇಶದ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಪಡೆದಿರುವ ಅಶ್ವಿನ್‌ 2023-25ರ ಸಾಲಿನ ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಅಶ್ವಿನ್‌ ಪ್ರಸಕ್ತ ಋತುವಿನ 10 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಅಶ್ವಿನ್, ಜೋಶ್ ಹ್ಯಾಜಲ್‌ವುಡ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಜೋಶ್ 11 ಪಂದ್ಯಗಳಲ್ಲಿ 51 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Story first published: Tuesday, October 1, 2024, 6:30 [IST]
Other articles published on Oct 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+