Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಶ್ವಿನ್‌ ನಿವೃತ್ತಿಯ ಬಳಿಕ ಮುಂದಿನ ಸರದಿ ಇವರದ್ದೇ..

ಭಾರತ ತಂಡದಲ್ಲಿ ಸದ್ಯ ನಿವೃತ್ತಿ ಗಾಳಿಯ ಸುದ್ದಿ ನಿಜವಾಗಿದೆ. ಬುಧವಾರ ಮೂರನೆ ಟೆಸ್ಟ್ ಮುಗಿದ ಬಳಿಕ ಟೀಮ್ ಇಂಡಿಯಾ ಅನುಭವಿ ಆಟಗಾರ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು ವಿದಾಯ ಘೋಷಿಸಿರುವುದು ನಿಜಕ್ಕೂ ತಂಡಕ್ಕೆ ಪೆಟ್ಟು ಬಿದ್ದಿದೆ. ಅನುಭವಿಗಳನ್ನು ಕಡೆಗಣನೆ ಮಾಡುತ್ತಾ ಸಾಗಿದರೆ ಹೇಗಪ್ಪಾ ಎನ್ನುವ ಚಿಂತೆ ಸಹ ಅಭಿಮಾನಿಗಳಲ್ಲಿ ಕಾಡುತ್ತಿದೆ. ಹಾಗಿದ್ದರೆ ಅಶ್ವಿನ್‌ ಬಳಿಕ ನಿವೃತ್ತಿ ಹೊಂದುವ ಆಟಗಾರರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಐದು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಎರಡನೇ ಟೆಸ್ಟ್‌ನಲ್ಲಿ ಆಡವ ಅವಕಾಶ ಲಭಿಸಿತು. ಈ ಟೆಸ್ಟ್‌ನಲ್ಲಿ ಅಶ್ವಿನ್‌ ವಿಶೇಷವಾದ ಸಾಧನೆ ಮಾಡಲಿಲ್ಲ. ಹೀಗಾಗಿ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇವರಿಗೆ ತಂಡದಿಂದ ಹೊರಗೆ ಉಳಿಸಲಾಯಿತು. ಹೀಗಾಗಿ ಅವರು ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದು ನಿವೃತ್ತಿ ಪಡೆದರು ಎಂದು ಹೇಳಲಾಗುತ್ತಿದೆ. ಆದರೆ ಅಶ್ವಿನ್‌ ತಮ್ಮ ನಿರ್ಧಾರವನ್ನು ತೆಗೆದುಕೊಂಡರು ಮುಂದೆ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ..

Ashwin Retires Who Will Follow Him Among Team India s Veterans

ನಿವೃತ್ತಿಯ ಅಲೆ

ಕ್ರಿಕ್‌ಬಜ್‌ನ ವರದಿಯ ಅನುಸಾರ ಭಾರತ ಮುಂದಿನ ವರ್ಷದ ಮಧ್ಯದ್ಲ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿಎ. ಈ ವೇಳೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯು ಟೀಮ್ ಇಂಡಿಯಾದ ಅನೇಕ ಹಿರಿಯ ಆಟಗಾರರಿಗೆ ಕೊನೆಯ ಟೆಸ್ಟ್ ಸರಣಿ ಎಂದು ಹೇಳಲಾಗುತ್ತಿದೆ.

ಮುಂದಿನ ನಂಬರ್ ಯಾರದ್ದು?

ಟೀಮ್ ಇಂಡಿಯಾ ಬದಲಾವಣೆಯನ್ನು ನೋಡುತ್ತಿದೆ. ಟೀಮ್ ಇಂಡಿಯಾದ ಸ್ಟಾರ್ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್‌, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಒಬ್ಬರಾದ ಮೇಲೆ ಒಬ್ಬರತೆ ನಿವೃತ್ತಿ ಪಡೆದಿದ್ದದಾರೆ. ಈ ವೇಳೆ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರಂತಹ ಆಟಗಾರರು ತಂಡದ ಭಾಗವಾದರು.

Ashwin Retires Who Will Follow Him Among Team India s Veterans

ತಂಡದಿಂದ ಬಹುದಿನಗಳಿಂದ ದೂರ ಇರುವ ಸ್ಟಾರ್ಸ್‌

ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ನಿವೃತ್ತಿಯ ಹಂತದಲ್ಲಿದ್ದಾರೆ. ಬಹು ದಿನಗಳಿಂದ ತಂಡದಿಂದ ಹೊರಗುಳಿದಿರುವ ಆಟಗಾರರು ನಿವೃತ್ತಿ ಅಂಚಿನಲ್ಲಿದ್ದಾರೆ. ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಬಹುದಿನಗಳಿಂದ ತಂಡದ ಭಾಗವಾಗಿಲ್ಲ. ಇನ್ನು ರೋಹಿತ್ ಶರ್ಮಾ ಸಹ ಕೆಟ್ಟ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ ಮುಂದಿನ ನಂಬರ್ ಯಾರದ್ದು ಎಂಬ ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾದಿಂದ ದೂರ ಉಳಿದಿರುವ ಆಟಗಾರರು ಸದ್ಯ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು ಮತ್ತೆ ತಂಡವನ್ನು ಸೇರುವ ಕನಸಿನಲ್ಲಿದ್ದಾರೆ.

Story first published: Thursday, December 19, 2024, 15:44 [IST]
Other articles published on Dec 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+