ಧೋನಿ, ಕೊಹ್ಲಿ, ರೋಹಿತ್ ನಾಯಕತ್ವದಲ್ಲಿನ ವ್ಯತ್ಯಾಸ ಬಹಿರಂಗ ಪಡಿಸಿದ ಅಶ್ವಿನ್
ಭಾರತ ಕ್ರಿಕೆಟ್ ತಂಡ ಹತ್ತು ಹಲವು ನಾಯಕರನ್ನು ನೋಡಿದೆ. ಪ್ರತಿಯೊಬ್ಬರೂ ಸಹ ತಂಡದ ಏಳಿಗೆಗಾಗಿ ಹಗುಲಿರುಳು ಶ್ರಮಿಸಿದ್ದಾರೆ. ಇನ್ನು ಹಲವರು ತಮ್ಮ ವಿಭಿನ್ನ ತಂತ್ರಗಾರಿಕೆಯಿಂದ ಮನ ಗೆದ್ದಿದ್ದಾರೆ. ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ತಂಡದ ಯಶಸ್ಸಿನಲ್ಲಿ ನಾಯಕರು ಶ್ರಮಿಸಿದ್ದಾರೆ. ಕಪಿಲ್ ದೇವ್ ಅವರಿಂದ ಹಿಡಿದು, ಈಗಿನ ರೋಹಿತ್ ಶರ್ಮಾ ವರೆಗೂ ಎಲ್ಲರೂ ತಮ್ಮ ತಮ್ಮ ಛಾಪನ್ನು ತಂಡದಲ್ಲಿ ಬಿಟ್ಟು ಹೋದವರೆ.
ಒಂದು ದಶಕದಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದವರಲ್ಲಿ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪ್ರಮುಖರು. ಧೋನಿ ಸಾರಥ್ಯದಲ್ಲಿ ಭಾರತ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದಿತು. ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತು. ರೋಹಿತ್ ಶರ್ಮಾ ತಮ್ಮ ವಿಶಿಷ್ಠ ನಾಯಕತ್ವದ ಗುಣಗಳಿಂದ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಈ ಮೂವರು ನಾಯಕರ ಬಗ್ಗೆ ಹಿರಿಯ ಸ್ಪಿನ್ ಬೌಲರ್ ಆರ್.ಅಶ್ವಿನ್ ತುಟಿ ಬಿಚ್ಚಿದ್ದಾರೆ.

ಅಶ್ವಿನ್ ಪ್ರಕಾರ ಯಾರು ಬೆಸ್ಟ್ ಕ್ಯಾಪ್ಟನ್?
ಕೇರಂ ಬೌಲ್ ಸ್ಪೇಷಲಿಸ್ಟ್ ಆರ್.ಅಶ್ವಿನ್ ಮೂವರೂ ನಾಯಕರ ಅಡಿಯಲ್ಲಿ ಆಡಿದ ಆಟಗಾರ. ಮೂವರು ನಾಯಕರಲ್ಲಿನ ನಾಯಕತ್ವದ ಗುಣಗಳ ಬಗ್ಗೆ ಅಶ್ವಿನ್ ಮಾತನಾಡಿದ್ದಾರೆ. ರೋಹಿತ್ ಶರ್ಮಾ ತಂಡದಲ್ಲಿ ಸಮತೋಲನ ತರಲು ಒತ್ತು ನೀಡುತ್ತಾರೆ. ಇನ್ನು ಕೊಹ್ಲಿ ಅವರ ತಂತ್ರಗಾರಿಕೆಗಿಂತಲೂ, ಎಂಎಸ್ ಧೋನಿ ರಣ ತಂತ್ರ ಹೆಣೆಯುವದರಲ್ಲಿ ನಿಸ್ಸೀಮರು ಎಂದು ತಿಳಿಸಿದ್ದಾರೆ.
ಅಶ್ವಿನ್ ಇತ್ತೀಚಿಗೆ ವಿಮಲ್ ಕುಮಾರ್ ಅವರಿಗೆ ಸಂದರ್ಶನವನ್ನು ನೀಡಿದರು. ಈ ಸಂದರ್ಶನದಲ್ಲಿ ಅವರು ರೋಹಿತ್ ಶರ್ಮಾ, ನಾಯಕತ್ವದ ಬಗ್ಗೆ ತಿಳಿಸಿದ್ದಾರೆ. ಮುಂಬೈಕರ ಯಾವಾಗಲೂ ತಂಡದ ವಾತಾವರಣ ತಿಳಿಯಾಗಿರಲು ಪ್ರಯತ್ನಿಸುತ್ತಾರೆ. ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ಅವರ ಶ್ರಮಿಸುತ್ತಾರೆ. ವಿರಾಟ್, ಧೋನಿ ಒಂದೊಂದು ವಿಭಾಗದಲ್ಲಿ ಬೆಸ್ಟ್. ರೋಹಿತ್ ತಂತ್ರಗಾರಿಕೆಯನ್ನು ಅರಿತುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ರೋಹಿತ್ ದೊಡ್ಡ ಸರಣಿಗೂ ಮೊದಲು ಏನೆಲ್ಲಾ ಪ್ಲ್ಯಾನ್ ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಾರೆ. ಇವರು ಸರಣಿ ಆರಂಭಕ್ಕೂ ಮುನ್ನವೇ ಅನಾಲಿಟಿಕ್ಸ್ ತಂಡದೊಂದಿಗೆ ಕೆಲಸ ಮಾಡುತ್ತಾರೆ. ಮಹತ್ವದ ಸರಣಿಗಳು ಬಂದಾಗ ರೋಹಿತ್, ಕೋಚ್ ಅವರೊಂದಿಗೆ ಅನಾಲಿಟಿಕ್ಸ್ ತಂಡದ ಜೊತೆ ಚರ್ಚಿಸುತ್ತಾರೆ. ಯಾವೆಲ್ಲಾ ಪ್ಲ್ಯಾನ್ ಮಾಡಿದರೆ ಯಶಸ್ಸು ಸಾಧಿಸಬಹುದು ಎಂಬುದರ ಬ್ಲ್ಯೂ ಪ್ರಿಂಟ್ ಸಿದ್ಧ ಪಡಿಸುತ್ತಾರೆ. ಅಲ್ಲದೆ ಪ್ರತಿ ಆಟಗಾರನಿಗೆ ನಿನ್ನ ಕೆಲಸ ನೀನು ಮಾಡಲು ಸೂಚಿಸುತ್ತಾರೆ ಎಂದು ಹೇಳಿದ್ದಾರೆ.

ಎರಡು ಟೆಸ್ಟ್ ಪಂದ್ಯಗಳ ಸರಣಿ
ಇದೇ ತಿಂಗಳು 19ರಿಂದ ಬಾಂಗ್ಲಾದೇಶ ವಿರುದ್ಧದ ಸರಣಿಗಳು ಆರಂಭವಾಗುತ್ತವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ ಬೌಲರ್ ಎದುರಾಳಿ ತಂಡವನ್ನು ಕಾಡಲು ಮೈದಾನಕ್ಕೆ ಪ್ರವೇಶಿಸಲಿದ್ದಾರೆ. ಸೆಪ್ಟೆಂಬರ್ 19ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ ಭಾರತ, ಬಾಂಗ್ಲಾದೇಶಗಳು ಎರಡು ಟೆಸ್ಟ್ ಆಡುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications