Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

38ನೇ ವರ್ಷದಲ್ಲಿ ಯುವಕರೇ ನಾಚಿಸುವಂತಹ ಫೀಲ್ಡಿಂಗ್‌, ಅದ್ಭುತ ಬೌಲಿಂಗ್

ಮುಂಬೈನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್‌ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ಗೆಲುವಿನ ನೋವನ್ನು ಮರೆಯುವ ಪ್ಲ್ಯಾನ್‌ ಟೀಮ್ ಇಂಡಿಯಾದ್ದಾಗಿದೆ. ಈ ನಿಟ್ಟಿನಲ್ಲಿ ರೋಹಿತ್ ಪಡೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆಯನ್ನು ದಾಖಲಿಸಿದ್ದ, ಆತಿಥೇಯ ತಂಡ ನ್ಯೂಜಿಲೆಂಡ್ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಹೊಸ್ತಿಲಲ್ಲಿ ನಿಂತಿದೆ.

ಟೀಮ್ ಇಂಡಿಯಾದ ಸಂಘಟಿತ ಆಟ ಈ ವೇಳೆ ಕಂಡು ಬಂದಿತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಮಿಂಚಿದರು. ಇಷ್ಟೇ ಅಲ್ಲದೆ ಬೌಲಿಂಗ್‌ನಲ್ಲೂ ಆಟಗಾರರು ಸ್ಥಿರ ಪ್ರದರ್ಶನ ನೀಡಿದರು. ಇದೇ ಪಂದ್ಯದಲ್ಲಿ ಅಶ್ವಿನ್‌, ಅಮೋಘ ಫೀಲ್ಡಿಂಗ್‌ ಮಾಡಿ ಎಲ್ಲರ ಗಮನ ಸೆಳೆದರು.

Ashwin s Fielding and Bowling Masterclass Boosts India in Third Test

ವಯಸ್ಸು ಒಂದು ನಂಬರ್ ಅಷ್ಟೇ..

ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಅವರನ್ನು ಔಟ್ ಮಾಡಲು ಹಿಂದೆ ಓಡಿದ ಅಶ್ವಿನ್ ಅದ್ಭುತ ಕ್ಯಾಚ್ ಪಡೆದರು. ಈ ವಿಡಿಯೋವನ್ನು ಬಿಸಿಸಿಐ ಸಹ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನ್ಯೂಜಿಲೆಂಡ್‌ನ ಎರಡನೇ ಇನ್ನಿಂಗ್ಸ್‌ನ 28 ನೇ ಓವರ್ ಅನ್ನು ಬೌಲಿಂಗ್ ಮಾಡಿದರು. ಡೆರಿಲ್ ಮಿಚೆಲ್ ಈ ಓವರ್‌ನ ಐದನೇ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಮುಂದಾದರು.

ಚೆಂಡು ತಮ್ಮ ಬಳಿಯೇ ಬರುತ್ತಿರುವುದನ್ನು ಗಮನಿಸಿದ ಅಶ್ವಿನ್‌ ಕಾರ್ಯ ಪ್ರವೃತ್ತರಾದರು. ಮಿಡ್‌ ಆಫ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ಅಶ್ವಿನ್ ಚೆಂಡಿನ ಹಿಂದೆ ಓಡಲು ಆರಂಭಿಸಿ ಅದ್ಭುತ ಕ್ಯಾಚ್ ಪಡೆದರು. ಒಂದು ಕ್ಷಣವೂ ಅಶ್ವಿನ್‌ ಕಣ್ಣುಗಳು ಚೆಂಡಿನಿಂದ ದೂರ ಸರಿಯಲಿಲ್ಲ. ಅಶ್ವಿನ್ ಕ್ಯಾಚ್ ಹಿಡಿದ ನಂತರ, ಇಡೀ ತಂಡ ಸಂತಸ ಪಟ್ಟಿತು. ನಾಯಕ ರೋಹಿತ್ ಕುಣಿದು ಕುಪ್ಪಳಿಸಿದರು.

ರಚಿನ್‌ ರವೀಂದ್ರಗೆ ಭರ್ಜರಿ ಸೆಟಪ್‌

ಇನ್ನು ಇದೇ ಪಂದ್ಯದಲ್ಲಿ ಅಶ್ವಿನ್ ತಮ್ಮ ಬೌಲಿಂಗ್‌ನಿಂದಲೂ ಕಮಾಲ್‌ ಮಾಡಿದರು. ಬೆಂಗಳೂರು ಟೆಸ್ಟ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ರಚಿನ್ ರವೀಂದ್ರ ಅವರಿಗೆ ಖೆಡ್ಡಾ ತೋಡಿದರು. ಅಶ್ವಿನ್‌ ಎಸೆತದಲ್ಲಿ ರಚಿನ್‌ ಕ್ರೀಸ್‌ ನಿಂದ ಹೊರಗೆ ಬಂದು ಬಿಗ್ ಹಿಟ್‌ಗೆ ಮುಂದಾದರು. ಆದರೆ ಚೆಂಡು ಬಿದ್ದು ಚೆಂಡು ವೇಗವಾಗಿ ಹೊರಕ್ಕೆ ತಿರುಗಿತು. ವಿಕೆಟ್ ಕೀಪರ್ ರಿಷಭ್ ಪಂತ್ ಚೆಂಡನ್ನು ಹಿಡಿದು, ಬೆಲ್ಸ್‌ ಹಾರಿಸಿದರು.

ರಚಿನ್ ರವೀಂದ್ರ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು. ಅವರನ್ನು ವಾಷಿಂಗ್ಟನ್ ಸುಂದರ್ ಬೌಲ್ಡ್ ಮಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 4 ರನ್ ಗಳಿಸಿ ಔಟಾದರು.

ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 171 ರನ್‌ಗಳಿಗೆ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿದೆ. ವಿಲ್ ಯಂಗ್ 100 ಎಸೆತಗಳಲ್ಲಿ 51 ರನ್ ಗಳಿಸಿದರು. ನ್ಯೂಜಿಲೆಂಡ್ ಕೇವಲ 143 ರನ್‌ಗಳ ಮುನ್ನಡೆ ಸಾಧಿಸಿದೆ.

Story first published: Saturday, November 2, 2024, 18:30 [IST]
Other articles published on Nov 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+