Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೌಲಿಂಗ್‌ ಶೈಲಿ ಬದಲಾಯಿಸಿ ಪ್ರೇಕ್ಷಕರ ಹುಬ್ಬೇರಿಸಿದ ಅಶ್ವಿನ್‌!: ವಿಡಿಯೊ

Ashwin stuns fans with unusual bowling action during TNPL

ಚೆನ್ನೈ, ಜುಲೈ 21: ಟೀಮ್‌ ಇಂಡಿಯಾದ ಸೀಮಿತ ಓವರ್‌ಗಳ ತಂಡದಿಂದ ಅವಕಾಶ ವಂಚಿತ ಅನುಭವಿ ಆಫ್‌ ಸ್ಪಿನ್ನರ್‌ ರವಿಂಚಂದ್ರನ್‌ ಅಶ್ವಿನ್‌ ಹಲವು ಬಾರಿ ತಮ್ಮ ಬೌಲಿಂಗ್‌ ಶೈಲಿಯಲ್ಲಿ ಬದಲಾವಣೆ ತರುವ ಮೂಲಕವೇ ಗಮನ ಸೆಳೆದಿದ್ದಾರೆ.

ಇದೀಗ ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎನ್‌ಪಿಎಲ್‌)ನಲ್ಲಿ ದಿಂಡಿಗಲ್‌ ಡ್ರ್ಯಾಗನ್ಸ್‌ ಪರ ಆಡುತ್ತಿರುವ ಅಶ್ವಿನ್‌, ಶನಿವಾರ ನಡೆದ ಚೆಪಾಕ್‌ ಸೂಪರ್‌ ಗಿಲ್ಲೀಸ್‌ ವಿರುದ್ಧದ ಪಂದ್ಯದಲ್ಲಿ ತಮ್ಮ ಬೌಲಿಂಗ್‌ ಶೈಲಿಯನ್ನು ಸಂಪೂರ್ಣ ಬದಲಾಯಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ್ದಾರೆ.

ಪಂದ್ಯದಲ್ಲಿ ಚೆಪಾಕ್‌ ತಂಡಕ್ಕೆ 2 ಎಸೆತಗಳಲ್ಲಿ 17 ರನ್‌ಗಳನ್ನು ಗಳಿಸಬೇಕಿತ್ತು. ಈ ಸಂದರ್ಭದಲ್ಲಿ ತಮ್ಮೊಳಗಿನ ನೂತನ ಅಸ್ತ್ರವನ್ನು ಪ್ರಯೋಗ ಮಾಡಿದ ಅಶ್ವಿನ್‌ ಈ ಮೂಲಕ ಬ್ಯಾಟ್ಸ್‌ಮನ್‌ಗೆ ಮಾತ್ರವಲ್ಲ ತಮ್ಮ ಅಭಿಮಾನಿಗಳಿಗೂ ಅಚ್ಚರಿ ತಂದೊಡ್ಡಿದ್ದಾರೆ.

ಭಾರತ ಟೆಸ್ಟ್‌ ತಂಡದ ಸ್ಟಾರ್‌ ಆಫ್‌ ಸ್ಪಿನ್ನರ್ ತಮ್ಮ ಬೌಲಿಂಗ್‌ ಶೈಲಿಯನ್ನು ಸಂಪೂರ್ಣವಾಗಿ ಪೂರೈಸದೇ ಚೆಂಡನ್ನು ಎಸೆದಿದ್ದರು. ಅದರಲ್ಲಿ ತಮ್ಮ ಎಡಗೈಯನ್ನು ಕಿಂಚಿತ್ತು ಅಲುಗಾಡದಂತೆ ಮತ್ತು ಎಡಗಾಲನ್ನು ಮುಂದಿಟ್ಟು ಚೆಂಡನ್ನು ಎಸೆಯದೆ ಬಲಗಾಲಿಟ್ಟು ಬೌಲಿಂಗ್‌ ಮಾಡಿದ್ದರು. ಇಂಥದ್ದೊಂದು ವಿಭಿನ್ನ ಹಾಗೂ ವಿಚಿತ್ರ ಬೌಲಿಂಗ್‌ ಶೈಲಿ ನಿಯಮಗಳ ಅನುಸಾರ ಅರಿಯೇ? ಈ ರೀತಿ ಬೌಲಿಂಗ್‌ ನಡೆಸುವುದನ್ನು ಅನುಮತಿಸಬೇಕೆ? ಎಂದೆಲ್ಲಾ ಇದೀಗ ಚರ್ಚೆ ಶುರುವಾಗಿದೆ.

ಈ ವಿಚಿತ್ರ ಎಸೆತದಲ್ಲಿ ಅಶ್ವಿನ್‌ಗೆ ಇನ್ನೇನು ವಿಕೆಟ್‌ ಲಭ್ಯವಾಗುವುದರಲ್ಲಿತ್ತು. ಇಂಥದ್ದೊಂದು ವಿಭಿನ್ನ ಎಸೆತದ ಎದುರು ಚೆಪಾಕ್‌ ತಂಡದ ಬ್ಯಾಟ್ಸ್‌ಮನ್‌ ಸ್ಟಂಪ್‌ಔಟ್‌ ಆಗುವುದರಲ್ಲಿ ಉಳಿದುಕೊಂಡರು. ಆನ್‌ಫೈಲ್ಡ್‌ ಅಂಪೈರ್‌ಗಳು ಕೂಡ ಈ ಎಸೆತ ಸರಿಯೋ ತಪ್ಪೋ ಎಂಬುದರ ಕುರಿತಾಗಿ ಚಕಾರ ತೆಗೆಯಲಿಲ್ಲ. ನಂತರದ ಎಸೆತದಲ್ಲಿ ಅಶ್ವಿನ್‌ ಭಾರತ ತಂಡದ ಆಲ್‌ರೌಂಡರ್‌ ಕೇದಾರ್‌ ಜಾಧವ್‌ ಅವರಂತೆ ಬೌಲಿಂಗ್‌ ನಡೆಸಿದ್ದರು. ಪಂದ್ಯದಲ್ಲಿ ದಿಂಡಿಗಲ್‌ ಡ್ರ್ಯಾಗನ್ಸ್‌ ತಂಡ 10 ರನ್‌ಗಳ ಜಯ ದಾಖಲಿಸಿತ್ತು.

ಇನ್ನು ಇದೇ ವರ್ಷದ ನಡೆದ 12ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲೂ ಅಶ್ವಿನ್‌ ಭಾರಿ ಸುದ್ದಿಯಾಗಿದ್ದರು. ರಾಜಸ್ಥಾನ್‌ ರಾಯಲ್ಸ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಅವರನ್ನು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಆರ್‌. ಅಶ್ವಿನ್‌ ತಮ್ಮ ಬೌಲಿಂಗ್‌ ವೇಳೆ ಶೈಲಿಯನ್ನು ಪೂರೈಸದೇ ಮಂಕಡಿಂಗ್‌ ಮೂಲಕ ರನ್‌ಔಟ್‌ ಮಾಡಿದ್ದರು. ಬೌಲರ್‌ ಚೆಂಡನ್ನು ಎಸೆಯುವ ಮುನ್ನ ನಾನ್‌ಸ್ಟ್ರೈಕ್‌ನಲ್ಲಿ ಕ್ರೀಸ್‌ನಿಂದ ಹೊರಗಿದ್ದ ಕಾರಣಕ್ಕೆ ಬಟ್ಲರ್ ರನ್‌ಔಟ್‌ ಆಗಿದ್ದರು. ಇದು ಕ್ರೀಡಾ ಸ್ಫೂರ್ತಿಯಲ್ಲ ಎಂದು ಹಲವುರು ಟೀಕಿಸಿದರೆ, ಅಶ್ವಿನ್‌ ನಿಯಮಗಳ ಪ್ರಕಾರವೇ ಬಟ್ಲರ್‌ ವಿಕೆಟ್‌ ಪಡೆದಿದ್ದಾರೆ ಎಂದು ಕೆಲವರ ಪರ ವಹಿಸಿಕೊಂಡಿದ್ದರು.

Story first published: Sunday, July 21, 2019, 14:11 [IST]
Other articles published on Jul 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+