For Quick Alerts
ALLOW NOTIFICATIONS  
For Daily Alerts
 

IND vs ENG: ಬೆನ್‌ ಸ್ಟೋಕ್ಸ್‌ಗೆ ಬೆನ್ನು ಬಿದ್ದು ಕಾಟ ನೀಡಿರುವ ಅಶ್ವಿನ್

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯು ಗುರುವಾರ, ಜನವರಿ 25 ರಿಂದ ಪ್ರಾರಂಭವಾಗಲಿದೆ. ಭಾರತ ಪ್ರವಾಸಿ ಇಂಗ್ಲೆಂಡ್‌ಗೆ ಸುಲಭ ತನ್ನ ಸ್ಪಿನ್ ಅಸ್ತ್ರದ ಮೂಲಕ ಕಟ್ಟಿ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ. ಭಾರತದ ಪಿಚ್‌ಗಳಲ್ಲಿ ಆಂಗ್ಲ ಬ್ಯಾಟ್ಸ್‌ಮನ್‌ಗಳಿಗೆ ಸ್ಪಿನ್ನರ್‌ಗಳು ದೊಡ್ಡ ಸವಾಲಾಗಬಹುದು. ಸರಣಿಯ ಮೊದಲು, ಭಾರತೀಯ ಸ್ಪಿನ್ನರ್ ಆರ್ ಅಶ್ವಿನ್ ವಿರುದ್ಧ ಪ್ರವಾಸಿ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಅಂಕಿಅಂಶಗಳು ಕಳಪೆ ಆಗಿದ್ದು, ತಂಡದ ಚಿಂತೆಯನ್ನು ದ್ವಿಗುಣಗೊಳಿಸಿದೆ.

ಟೆಸ್ಟ್‌ನಲ್ಲಿ, ಆರ್ ಅಶ್ವಿನ್ ಬೆನ್ ಸ್ಟೋಕ್ಸ್‌ಗೆ ಅವರನ್ನು ಅಬ್ಬರಿಸಲು ಬಿಡುವುದಿಲ್ಲ. ಸ್ಪಿನ್‌ ಮಾಂತ್ರಿಕ ತನ್ನ ಶಿಸ್ತು ಬದ್ಧ ದಾಳಿಯಿಂದ ಬೆನ್ ಸ್ಟೋಕ್ಸ್‌ಗೆ ಕಾಟ ನೀಡಿದ್ದಾರೆ. ಅಶ್ವಿನ್ ಇದುವರೆಗೆ ಟೆಸ್ಟ್ ನಲ್ಲಿ ಒಟ್ಟು 11 ಬಾರಿ ಸ್ಟೋಕ್ಸ್ ರನ್ನು ಔಟ್ ಮಾಡಿದ್ದಾರೆ. ಈ ಅವಧಿಯಲ್ಲಿ, ಅಶ್ವಿನ್ ಸ್ಟೋಕ್ಸ್‌ಗೆ 570 ಎಸೆತಗಳನ್ನು ಎಸೆದಿದ್ದು, ಇದರಲ್ಲಿ ಆಂಗ್ಲ ತಂಡದ ನಾಯಕ 19.5 ಸರಾಸರಿಯಲ್ಲಿ 214 ರನ್ ಗಳಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಭಾರತೀಯ ಸ್ಪಿನ್ನರ್‌ಗಳು ಸ್ಟೋಕ್ಸ್‌ಗೆ ಕಂಟಕವಾಗಬಹುದು. ಇವರನ್ನು ಕಟ್ಟಿ ಹಾಕಿ ತಂಡಕ್ಕೆ ಮುನ್ನಡೆ ತಂದು ಕೊಡಲು ಅಶ್ವಿನ್‌ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Ashwin Unleashes Stunning Backdrop as Ben Stokes Takes Center Stage in Epic Showdown

500 ವಿಕೆಟ್‌ ಮೇಲೆ ಅಶ್ವಿನ್ ಕಣ್ಣು

ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 490 ವಿಕೆಟ್‌ಗಳನ್ನು ಪಡೆದಿದ್ದಾರೆ. 500ರ ಗಡಿ ಮುಟ್ಟಲು ಕೇವಲ 10 ವಿಕೆಟ್‌ಗಳ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಈ ಅಂಕಿ ಅಂಶವನ್ನು ಮುಟ್ಟಬಹುದು. 2011ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಅಶ್ವಿನ್ ಇಲ್ಲಿಯವರೆಗೆ 95 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಅಶ್ವಿನ್ ಬಾಲ್ ಹಾಗೂ ಬ್ಯಾಟ್‌ನಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ. 134 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಅವರು 26.83 ಸರಾಸರಿಯಲ್ಲಿ 5 ಶತಕ ಮತ್ತು 14 ಅರ್ಧ ಶತಕಗಳನ್ನು ಒಳಗೊಂಡಂತೆ 3193 ರನ್ ಗಳಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಗುರುವಾರ, ಜನವರಿ 25 ರಿಂದ ಆರಂಭವಾಗಲಿದೆ. ಇದಾದ ಬಳಿಕ ಎರಡನೇ ಟೆಸ್ಟ್ ವಿಶಾಖಪಟ್ಟಣದಲ್ಲಿ, ಮೂರನೇ ಟೆಸ್ಟ್ ರಾಜ್ ಕೋಟ್ ನಲ್ಲಿ, ನಾಲ್ಕನೇ ಟೆಸ್ಟ್ ರಾಂಚಿಯಲ್ಲಿ ಮತ್ತು ಐದನೇ ಟೆಸ್ಟ್ ಧರ್ಮಶಾಲಾದಲ್ಲಿ ನಡೆಯಲಿದೆ. ಜನವರಿಯಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಾರ್ಚ್ ನಲ್ಲಿ ನಡೆಯಲಿದೆ.

Story first published: Wednesday, January 24, 2024, 23:12 [IST]
Other articles published on Jan 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+