ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇತಿಹಾಸ : ಧೋನಿ ರುಂಡ ಹಿಡಿದ ಬಾಂಗ್ಲಾ ಹುಲಿಗಳು ಇಲಿಗಳಾಗಿದ್ದು!

ಬೆಂಗಳೂರು, ಸೆಪ್ಟೆಂಬರ್ 23: ಏಷ್ಯಾಕಪ್ ಇತಿಹಾಸದಲ್ಲೇ ಕಹಿ ಘಟನೆಯಾಗಿ ಉಳಿದಿದ್ದು, ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡ ಪಂದ್ಯಾವಳಿಗಳು ಎನ್ನಬಹುದು. ಫೈನಲ್ ಹಂತ ತಲುಪಿದ್ದ ಬಾಂಗ್ಲಾದೇಶ, ಅನಗತ್ಯವಾಗಿ ಎಂಎಸ್ ಧೋನಿ ಪಡೆಯನ್ನು ಅಸಹ್ಯವಾಗಿ ಕೆಣಕ್ಕಿದ್ದು ಎಲ್ಲೆಡೆಯಿಂದ ವ್ಯಾಪಕ ಟೀಕೆಗೊಳಗಾಯಿತು.

ಫೈನಲ್ ಗೂ ಮುನ್ನ ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ ಕೈಯಲ್ಲಿ ಧೋನಿ ರುಂಡವನ್ನು ಹಿಡಿದಂತೆ ಚಿತ್ರಿಸಿದ್ದವರಿಗೆ ಭಾರತೀಯ ಅಭಿಮಾನಿಗಳು ತಕ್ಕ ಉತ್ತರವನ್ನೇ ನೀಡಿದ್ದಾರೆ. ಧೋನಿ ಪಡೆ ಸುದ್ದಿಗೆ ಬಂದರೆ ನಿಮಗೆ ಯಾವ ಗತಿಯಾಗುತ್ತದೆ ಎಂದು ಸಾರಿದ್ದರು.

ಪಂದ್ಯದ ನಂತರ ಮಾತನಾಡಿದ ಶಾಸ್ತ್ರಿ ನಾವು ಎಂದಿನಂತೆ ಕ್ರಿಕೆಟ್ ಆಡಿದೆವು. ಯಾರೋ ಮಾಡಿದ್ದ ಕೆಟ್ಟ ಕೆಲಸ ನಮಗೆ ಮತ್ತಷ್ಟು ಸ್ಫೂರ್ತಿ ನೀಡಿತು ಎಂದು ಹೇಳಿದ್ದನ್ನು ಮರೆಯುವಂತಿಲ್ಲ.

ಬಾಂಗ್ಲಾಗೆ ಸರಿಯಾಗಿ ಚಳಿ ಬಿಡಿಸಿದರು

ಬಾಂಗ್ಲಾಗೆ ಸರಿಯಾಗಿ ಚಳಿ ಬಿಡಿಸಿದರು

ಮಳೆಯಿಂದ 15 ಓವರ್ ಗೆ ಇಳಿದ ಪಂದ್ಯವನ್ನು ಭಾರತ ಅನಾಯಾಸವಾಗಿ ಚೇಸ್ ಮಾಡಿತು. ನಾಯಕ ಎಂಎಸ್ ಧೋನಿ ಕೊನೆಯಲ್ಲಿ ಆರ್ಭಟಿಸಿದ ಬಗೆ ಬಾಂಗ್ಲಾದೇಶಿಗರನ್ನು ಬೆಚ್ಚಿ ಬೀಳಿಸಿತು. ಕೇವಲ ಆರು ಚೆಂಡುಗಳಲ್ಲಿ 20 ರನ್ ಗಳಿಸಿದ ಮಹೇಂದ್ರ ಸಿಂಗ್ ಧೋನಿ ಬಾಂಗ್ಲಾಗೆ ಸರಿಯಾಗಿ ಚಳಿ ಬಿಡಿಸಿದರು.

ಬಾಂಗ್ಲಾದೇಶದ ಬೌಲರ್ ಗಳ ದುಃಸ್ಥಿತಿ

ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಆರ್ಭಟಕ್ಕೆ ಬಾಂಗ್ಲಾದೇಶದ ಬೌಲರ್ ಗಳ ದುಃಸ್ಥಿತಿ.

ನಿರೀಕ್ಷೆ ಹಾಗೂ ರಿಯಾಲಿಟಿ ಏನು

ನಿರೀಕ್ಷೆ ಹಾಗೂ ರಿಯಾಲಿಟಿ ಏನು ಎಂಬುದು ತಿಳಿಯಿರಿ.ಧೋನಿ ರುಂಡವನ್ನು ಕೈಯಲ್ಲಿ ಹಿಡಿದ ತಸ್ಕಿನ್ ಅವರ ಚಿತ್ರ ಅದು ಬರೀ ನಿರೀಕ್ಷೆ. ನಿಜವಾಗಿ ಅವರ ಕೈಯಲ್ಲಿ ಹಿಡಿದಿದ್ದು ಮೀನು ಎಂದು ಪತ್ರಕರ್ತೆ ನೈಲಾ ಟ್ವೀಟ್ ಮಾಡಿದ್ದರು.

ಜಡೇಜ ಅವರ ಪರೋಡಿ ಅಕೌಂಟ್

ಜಡೇಜ ಅವರ ಪರೋಡಿ ಅಕೌಂಟ್ ಸರ್ ರವೀಂದ್ರ ಜಡೇಜ ಅವರು ಟ್ವೀಟ್ ಮಾಡಿ ಧೋನಿ ಅವ್ರ ಕೈಯಲ್ಲಿ ತಸ್ಕಿನ್ ರುಂಡ ಇರುವ ಚಿತ್ರವನ್ನು ಹಾಕಲಾಗಿತ್ತು.

ಪಂದ್ಯದ ನಂತರ ಏನಾಯಿತು ಗೊತ್ತಲ್ಲ

ಫೈನಲ್ ಪಂದ್ಯಕ್ಕೂ ಮುನ್ನ ಹಾಗೂ ಫೈನಲ್ ಪಂದ್ಯಕ್ಕೂ ನಂತರ ಏನಾಯಿತು ಎಂಬುದನ್ನು ನೋಡಿ ಎಂದು ಚಿತ್ರ ಹಾಕಲಾಗಿದೆ.

Story first published: Sunday, September 23, 2018, 10:46 [IST]
Other articles published on Sep 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X