For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ ಕ್ರಿಕೆಟ್ ನಿಮಗೆ ಗೊತ್ತಿರದ ರೋಚಕ ಸಂಗತಿಗಳು

Asia Cup 2018: History Interesting that you don t know

ಬೆಂಗಳೂರು, ಸೆಪ್ಟೆಂಬರ್ 14: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಂಗಳದಲ್ಲಿ ಏಷ್ಯಾಕಪ್ ಟೂರ್ನಮೆಂಟ್ ಮತ್ತೊಮ್ಮೆ ಆಯೋಜನೆಗೊಂಡಿದೆ. 14ನೇ ಏಷ್ಯಾಕಪ್ ನ ಮೊದಲ ಪಂದ್ಯ ಸೆಪ್ಟೆಂಬ15ರಂದು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ನಡೆಯಲಿದೆ.

ಮೊದಲ ಏಷ್ಯಾ ಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 1983-84ರಲ್ಲಿ ಜರುಗಿತ್ತು. ಆರಂಭಿಕ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ಕಪ್ ಎತ್ತಿ ಸಂಭ್ರಮಿಸಿತ್ತು.

ದ್ವೆವಾರ್ಷಿಕ ಟೂರ್ನಮೆಂಟ್ ನಲ್ಲಿ ಏಷ್ಯಾದ ದಿಗ್ಗಜ ತಂಡಗಳಾದ ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ಪ್ರಾಬಲ್ಯ ಮೆರೆಯುತ್ತಾ ಬಂದಿವೆ. 50 ಓವರ್ ಗಳ ಮಾದರಿ ಅಲ್ಲದೆ 2016ರಲಿ ಟ್ವೆಂಟಿ20 ಮಾದರಿಯಲ್ಲೂ ಏಷ್ಯಾಕಪ್ ಟೂರ್ನಮೆಂಟ್ ಆಯೋಜನೆಗೊಂಡಿತ್ತು. ಬಾಂಗ್ಲಾದೇಶದಲ್ಲೂ 2012, 2014 ರ ನಂತರ ಸತತವಾಗಿ ಮೂರನೇ ಬಾರಿಗೆ 2016ರಲ್ಲಿ ಏಷ್ಯಾಕಪ್ ಆಯೋಜಿಸಲಾಗಿತ್ತು.

Asia Cup 2018: History Interesting that you don t know

ಈ ಬಾರಿ ಪಾಲ್ಗೊಂಡಿರುವ ತಂಡಗಳು: ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಹಾಂಗ್ ಕಾಂಗ್.

ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡ ತಂಡಗಳು: ಹಾಂಗ್ ಕಾಂಗ್, ನೇಪಾಳ, ಯುಎಇ, ಒಮಾನ್, ಮಲೇಷಿಯಾ ಹಾಗೂ ಸಿಂಗಪುರ.

ಹಾಂಗ್ ಕಾಂಗ್ ಅಧಿಕೃತವಾಗಿ ಒಡಿಐ ಸ್ಥಾನಮಾನ ಸಿಗದಿದ್ದರೂ, ಈ ಟೂರ್ನಮೆಂಟ್ ಗೆ ಅರ್ಹತೆ ಪಡೆಯುವ ಮೂಲಕ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಲಿದೆ.

ಏಷ್ಯಾಕಪ್ ಇತಿಹಾಸ ಹಾಗೂ ಟೂರ್ನಮೆಂಟ್ ಬಗ್ಗೆ ಕುತೂಹಲಕಾರಿ ಸಂಗತಿಗಳು:

* ಮೊದಲ ಏಷ್ಯಾ ಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 1983-84ರಲ್ಲಿ ಜರುಗಿತ್ತು. ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ಸ್ಪರ್ಧಿಸಿದ್ದವು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜನೆ(ಎಸಿಸಿ)ಯ ಆರಂಭಿಕ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಸುನೀಲ್ ಗವಾಸ್ಕರ್ ನೇತೃತ್ವದ ಭಾರತದ ತಂಡವು ಕಪ್ ಎತ್ತಿ ಸಂಭ್ರಮಿಸಿತ್ತು.

* 1986ರಲ್ಲಿ ನಡೆದ ಎರಡನೇ ಏಷ್ಯಾಕಪ್ ನಲ್ಲಿ ಭಾರತ ಪಾಲ್ಗೊಂಡಿರಲಿಲ್ಲ. ಶ್ರೀಲಂಕಾ, ಪಾಕಿಸ್ತಾನ ಹಾಗು ಬಾಂಗ್ಲಾದೇಶ ಆಡಿದ್ದವು. ಪಾಕಿಸ್ತಾನವನ್ನು ಫೈನಲ್ ನಲ್ಲಿ ಸೋಲಿಸಿದ ಶ್ರೀಲಂಕಾ ತನ್ನ ನೆಲದಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ಎತ್ತಿತ್ತು.
* 1988ರಲ್ಲಿ ಬಾಂಗ್ಲಾದೇಶದಲ್ಲಿ ಮೂರನೇ ಏಷ್ಯಾಕಪ್ ಆಯೋಜನೆಗೊಂಡಿತ್ತು. ಶ್ರೀಲಂಕಾವನ್ನು ಫೈನಲ್ ನಲ್ಲಿ ಸೋಲಿಸಿದ ಭಾರತವು ಎರಡನೇ ಬಾರಿ ಏಷ್ಯನ್ ಚಾಂಪಿಯನ್ ಆಗಿತ್ತು.

Asia Cup 2018: History Interesting that you don t know

* 1998ರಲ್ಲಿ ಪಾಕಿಸ್ತಾನ ವಿರುದ್ಧ ಢಾಕಾದಲ್ಲಿ ನಡೆದ ಫೈನಲ್ ನಲ್ಲಿ ಭಾರತ ಗೆಲುವು ಸಾಧಿಸಿ, ಕಪ್ ಎತ್ತಿತ್ತು. ಭಾರತದ ಪರ ಆಫ್ ಸ್ಪಿನ್ನರ್ ಅರ್ಷದ್ 21 ರನ್ನಿತ್ತು 5 ವಿಕೆಟ್ ಪಡೆದರು. ಇದು ಏಷ್ಯಾ ಕಪ್ ನಲ್ಲಿ ಮೊಟ್ಟ ಮೊದಲ ಐದು ವಿಕೆಟ್ ಸಾಧನೆಯಾಗಿದೆ.

* 1990 ರಲ್ಲಿ ಭಾರತದಲ್ಲಿ ನಡೆದ ಏಷ್ಯಾಕಪ್ ನಲ್ಲಿ ಪಾಕಿಸ್ತಾನ ಪಾಲ್ಗೊಂಡಿರಲಿಲ್ಲ. ಫೈನಲ್ ನಲ್ಲಿ ಶ್ರೀಲಂಕಾವನ್ನು ಸೋಲಿಸಿ, ಏಷ್ಯಾಕಪ್ ಅನ್ನು ತನ್ನಲ್ಲೇ ಭಾರತ ಉಳಿಸಿಕೊಂಡಿತು.

* 1993ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿ ವಿವಾದ ಹಾಗೂ ರಾಜಕೀಯ ಕಾರಣಗಳಿಂದಾಗಿ ಪೂರ್ತಿ ಟೂರ್ನಮೆಂಟ್ ರದ್ದು ಮಾಡಲಾಯಿತು.

* 1997ರಲ್ಲಿ ಶ್ರೀಲಂಕಾದಲ್ಲಿ ನಡೆದ ಟೂರ್ನಮೆಂಟ್ ನ ಫೈನಲ್ ನಲ್ಲಿ ಭಾರತವನ್ನು ಸೋಲಿಸಿದ ಶ್ರೀಲಂಕಾ ಮತ್ತೊಮ್ಮೆ ಕಪ್ ಎತ್ತಿತ್ತು.

Asia Cup 2018: History Interesting that you don t know

* 2000ರಲ್ಲಿ ಮೊಟ್ಟ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್ ತಲುಪುವಲ್ಲಿ ಭಾರತ ವಿಫಲವಾಯಿತು. ಬಾಂಗ್ಲಾದೇಶದಲ್ಲಿ ನಡೆದ ಟೂರ್ನಮೆಂಟ್ ನಲ್ಲಿ ಶ್ರೀಲಂಕಾವನ್ನು ಮಣಿಸಿದ ಪಾಕಿಸ್ತಾನವು ಏಷ್ಯನ್ ಚಾಂಪಿಯನ್ ಆಗಿತ್ತು.

* 2004ರಲ್ಲಿ ಮೊಟ್ಟಮೊದಲ ಬಾರಿಗೆ ಗ್ರೂಪ್ ಸ್ಟೇಜ್, ಸೂಪರ್ ಫೋರ್ಸ್, ಫೈನಲ್ ಮಾದರಿಯಲ್ಲಿ ಟೂರ್ನಮೆಂಟ್ ಆಯೋಜಿಸಲಾಯಿತು. ಹಾಂಗ್ ಕಾಂಗ್ ಹಾಗೂ ಯುಎಇ ಕೂಡಾ ಪಾಲ್ಗೊಂಡಿದ್ದವು. ಭಾರತವನ್ನು ಸೋಲಿಸಿದ ಶ್ರೀಲಂಕಾ ಕಪ್ ಗೆದ್ದುಕೊಂಡಿತು.

Asia Cup 2018: History Interesting that you don t know

* 2008ರಲ್ಲಿ ಪಾಕಿಸ್ತಾನದಲ್ಲಿ ನಡೆದ ಟೂರ್ನೆಮೆಂಟ್ ನಲ್ಲಿ ಭಾರತ ಫೈನಲ್ ತಲುಪಿತು. ಆದರೆ, ಶ್ರೀಲಂಕಾ ತಂಡ ಅಂತಿಮ ನಗೆ ಬೀರಿತು. ಶ್ರೀಲಂಕಾದ ಸ್ಪಿನರ್ ಅಂಜತಾ ಮೆಂಡಿಸ್ 6/13 ಗಳಿಸಿದರು. ಇದು ಟೂರ್ನಮೆಂಟ್ ನ ಇತಿಹಾಸದಲ್ಲೇ ಶ್ರೇಷ್ಠ ಪ್ರದರ್ಶನವಾಗಿದೆ.

* 2010ರ ಏಷ್ಯಾಕಪ್ ನಲ್ಲಿ ಟೆಸ್ಟ್ ಆಡುವ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ಮಾತ್ರ ಪಾಲ್ಗೊಂಡಿದ್ದವು. ಶ್ರೀಲಂಕಾವನ್ನು ಮಣಿಸಿ ಭಾರತ ಮತ್ತೊಮ್ಮೆ ಕಪ್ ತನ್ನದಾಗಿಸಿಕೊಂಡಿತು.

* 2010ರಲ್ಲಿ ಬಾಂಗ್ಲಾದೇಶ ವಿರುದ್ಧ 2.5 ಓವರ್ ಗಳಲ್ಲಿ 6/4 ಗಳಿಸಿದ ವೀರೇಂದ್ರ ಸೆಹ್ವಾಗ್ ಅವರು ಏಷ್ಯಾಕಪ್ ಇತಿಹಾಸದಲ್ಲಿ ಶ್ರೇಷ್ಠ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

Asia Cup 2018: History Interesting that you don t know

* 2012ರ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 2 ರನ್ ಗಳಿಂದ ರೋಚಕವಾಗಿ ಸೋಲಿಸಿದ ಪಾಕಿಸ್ತಾನವು ಎರಡನೇ ಬಾರಿಗೆ ಕಪ್ ಎತ್ತಿತ್ತು.

* 2012 ರ ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ ಚೆಚ್ಚಿದ 183ರನ್ ಗಳ ನೆರವಿನಿಂದ ಪಾಕಿಸ್ತಾನ ನೀಡಿದ್ದ 330ರನ್ ಗಳ ಬೃಹತ್ ಮೊತವನ್ನು ಭಾರತ ಚೇಸ್ ಮಾಡಿತ್ತು. ಈ ಪಂದ್ಯದಲ್ಲಿ ಆಟಗಾರರ ನಡುವೆ ಮಾತಿನ ಚಕಮಕಿ ಕೂಡಾ ನಡೆದಿತ್ತು.

* 2014ರಲ್ಲಿ ಮೊಟ್ಟಮೊದಲ ಬಾರಿಗೆ ಅಫ್ಘಾನಿಸ್ತಾನವು ಏಷ್ಯಾಕಪ್ ನಲ್ಲಿ ಪಾಲ್ಗೊಂಡಿತ್ತು. ಢಾಕಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಶ್ರೀಲಂಕಾವನ್ನು ಸೋಲಿಸಿದ ಪಾಕಿಸ್ತಾನ ಚಾಂಪಿಯನ್ ಆಗಿತ್ತು.

* 2015ರಲ್ಲಿ ಏಷ್ಯಾಕಪ್ ಟೂರ್ನಮೆಂಟ್ ಸ್ವರೂಪ ಬದಲಾಯಿಸಿದ ಐಸಿಸಿ. ಏಷ್ಯಾಕಪ್ ಟೂರ್ನೆಮೆಂಟ್ ಗಳನ್ನು ಒಡಿಐ ಹಾಗೂ ಟಿ20ಐ ಮಾದರಿಯಲ್ಲಿ ಎರಡು ವರ್ಷಕ್ಕೊಮ್ಮೆ ಬದಲಾಯಿಸಲು ನಿರ್ಧಾರ.

* 2016ರಲ್ಲಿ ಟ್ವೆಂಟಿ20 ಮಾದರಿಯಲ್ಲಿ ಮೊಟ್ಟಮೊದಲ ಬಾರಿಗೆ ಏಷ್ಯಾಕಪ್ ಟೂರ್ನಮೆಂಟ್ ಆಯೋಜನೆಗೊಂಡಿತ್ತು. ಢಾಕಾದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಭಾರತ ಕಪ್ ಗೆದ್ದಿತ್ತು.

* ಸನತ್ ಜಯಸೂರ್ಯ 1,220ರನ್ ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್ ಎನಿಸಿದ್ದಾರೆ.

* ಮುತ್ತಯ್ಯ ಮುರಳೀಧರನ್ ಏಷ್ಯಾಕಪ್ ನಲ್ಲಿ 30 ವಿಕೆಟ್ ಉರುಳಿಸಿದ್ದಾರೆ.

* ಏಷ್ಯಾಕಪ್ ಗಳನ್ನು ಭಾರತ 6, ಶ್ರೀಲಂಕಾ 5 ಹಾಗೂ ಪಾಕಿಸ್ತಾನ 2 ಬಾರಿ ಕಪ್ ಗೆದ್ದಿವೆ.

* ಮಹೇಂದ್ರ ಸಿಂಗ್ ಧೋನಿ ಶ್ರೇಷ್ಠ ಸರಾಸರಿ (95.16) ಹೊಂದಿದ್ದಾರೆ.

* ಏಷ್ಯಾಕಪ್ ನ ಏಕದಿನ ಮಾದರಿಯ ಯಾವೊಬ್ಬ ಆಟಗಾರ ಕೂಡಾ ಶೂನ್ಯ(0)ಕ್ಕೆ ಔಟಾಗಿಲ್ಲ. ಆದರೆ, ಟಿ20 ಮಾದರಿಯಲ್ಲಿ ಶ್ರೀಲಂಕಾದ ಆಟಗಾರರು 17, ಬಾಂಗ್ಲಾದೇಶದವರು 11 ಹಾಗೂ ಪಾಕಿಸ್ತಾನದವರು 9 ಬಾರಿ ಸೊನ್ನೆ ಸುತ್ತಿದ್ದಾರೆ.

Story first published: Saturday, September 15, 2018, 17:20 [IST]
Other articles published on Sep 15, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+