ಗಾಯಾಳು ಗುಣತಿಲಕ ಬದಲಿಗೆ ತಂಡ ಸೇರಿದ ಜಯಸೂರ್ಯ

ಕೊಲಂಬೋ, ಸೆಪ್ಟೆಂಬರ್ 14: ಶ್ರೀಲಂಕಾ ತಂಡದ ಟೆಸ್ಟ್ ನಾಯಕ ದಿನೇಶ್ ಚಾಂಡಿಮಾಲ್ ಅವರು ಗಾಯಗೊಂಡು, ಏಷ್ಯಾ ಕಪ್ 2018ರ ಟೂರ್ನಮೆಂಟ್ ನಿಂದ ಹೊರಗುಳಿದ ಸುದ್ದಿ ತಿಳಿದಿರಬಹುದು.
ಈ ಸುದ್ದಿ ಬೆನ್ನಲ್ಲೇ ಮತ್ತೊಬ್ಬ ಆಟಗಾರ ಕೂಡಾ ಗಾಯಾಳು ಪಟ್ಟಿಗೆ ಸೇರಿದ್ದಾರೆ. ಆರಂಭಿಕ ಆಟಗಾರ ಧನುಷ್ಕ ಗುಣತಿಲಕ ಕೂಡಾ ಗಾಯಾಳುಗಳ ಪಟ್ಟಿ ಸೇರಿದ್ದಾರೆ. ಗುಣತಿಲಕ ಬದಲಿಗೆ ಶೆಹಾನ್ ಜಯಸೂರ್ಯ ಅವರು ತಂಡ ಸೇರಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.
ತಂಡಕ್ಕೆ ಆಯ್ಕೆಯಾಗಿ ದುಬೈಗೆ ತೆರಳಿದ್ದ 27 ವರ್ಷ ವಯಸ್ಸಿನ ಧನುಷ್ಕ ಗುಣತಿಲಕ ಅವರು ಬೆನ್ನುನೋವಿನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಬದಲಿಗೆ ಎಡಗೈ ಬ್ಯಾಟ್ಸ್ ಮನ್ ಶೆಹಾನ್ ಜಯಸೂರ್ಯ ಅವರು ತಂಡ ಸೇರಲಿದ್ದಾರೆ.
ಶ್ರೀಲಂಕಾದ ಟೆಸ್ಟ್ ತಂಡ ನಾಯಕ 28 ವರ್ಷ ವಯಸ್ಸಿನ ದಿನೇಶ್ ಚಾಂಡಿಮಾಲ್ ಅವರು ಇತ್ತೀಚೆಗೆ ಶ್ರೀಲಂಕಾದ ದೇಶಿ ಪಂದ್ಯಾವಳಿಯೊಂದರಲ್ಲಿ ಆಡುವಾಗ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಗಾಯದಿಂದ ಗುಣಮುಖರಾಗಿಲ್ಲ ಎಂದು ಶ್ರೀಲಂಕಾದ ಕ್ರಿಕೆಟ್ ಸಮಿತಿ ಪ್ರಕಟಿಸಿತ್ತು.
ಪರಿಷ್ಕೃತ ಶ್ರೀಲಂಕಾ ತಂಡ: ಏಂಜೆಲೋ ಮ್ಯಾಥ್ಯೂಸ್ (ನಾಯಕ), ಕುಸಲ್ ಪೆರೆರಾ, ಕುಸಲ್ ಮೆಂಡಿಸ್, ಉಪುಲ್ ತರಂಗಾ, ನಿರೋಶನ್ ಡಿಕ್ ವೆಲ್ಲಾ,ಶೆಹಾನ್ ಜಯಸೂರ್ಯ, ಥಿಸರಾ ಪೆರೆರಾ, ದಸುನ್ ಶನಕ, ಧನಂಜಯ ಡಿ ಸಿಲ್ವಾ, ಅಕಿಲ ಧನಂಜಯ, ದುಲ್ರುವಾನ್ ಪೆರೆರಾ, ಅಮಿಲಾ ಅಪೊನ್ಸೊ, ಕಸುನ್ ರಂಜಿತಾ, ಸುರಂಗಾ ಲಕ್ಮಲ್, ದುಷ್ಮಂತಾ ಚಮೀರಾ, ಲಸಿತ್ ಮಾಲಿಂಗಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications