ಏಷ್ಯಾ ಕಪ್ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ಸಂಭಾವ್ಯ ತಂಡ

ದುಬೈ, ಸೆಪ್ಟೆಂಬರ್ 17: ವಿರಾಟ್ ಕೊಹ್ಲಿ ಇಲ್ಲದೆ ಏಷ್ಯಾ ಕಪ್ ಆಡಲು ಬಂದಿರುವ ಹಾಲಿ ಚಾಂಪಿಯನ್ ಟೀಂ ಇಂಡಿಯನ್ ಗೆ ಆಡುವ XI ಆಯ್ಕೆ ವಿಷಯದಲ್ಲಿ ಯಾರಿಗೆ ಮಣೆ ಹಾಕಲಾಗುತ್ತದೆ ಕಾದು ನೋಡಬೇಕಿದೆ.
ರೋಹಿತ್ ಶರ್ಮ ನೇತೃತ್ವದ ಭಾರತ ತಂಡವು ಸೆಪ್ಟೆಂಬರ್ 18ರಂದು ಏಷ್ಯಾ ಕಪ್ 2018ರ ಮೊದಲ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು ಎದುರಿಸಲಿದೆ. ಹಾಂಗ್ ಕಾಂಗ್ ವಿರುದ್ಧ ಗೆಲುವು ಕಷ್ಟವಲ್ಲದಿದ್ದರೂ, ಮರು ದಿನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಬೇಕಿದೆ.
ಹಾಂಕಾಂಗ್ ವಿರುದ್ಧ ಪಾಕಿಸ್ತಾನ ಗೆದ್ದ ಗೆಲುವಿಗಿಂತಲೂ ಉತ್ತಮ ಸರಾಸರಿಯಲ್ಲಿ ಗೆಲುವು ಸಾಧಿಸುವುದೇ ಭಾರತದ ಗುರಿ ಆಗಿರಲಿದೆ.
ಇಂಗ್ಲೆಂಡ್ ಸರಣಿಯಲ್ಲಿ ಉತ್ತಮವಾಗಿ ಆಡದ ಆಟಗಾರರಿಗೆ ಈ ಸರಣಿ ತಮ್ಮ ಸ್ಥಾನ ಉಳಿಸಿಕೊಳ್ಳಲು ವೇದಿಕೆಯಾಗಲಿದೆ.
ಭಾರತದ ಆಡುವ ಹನ್ನೊಂದರ ಆಯ್ಕೆಯಲ್ಲಿ ಮಧ್ಯಮ ಕ್ರಮಾಂಕ ಹಾಗೂ ಬೌಲರ್ ಗಳ ಆಯ್ಕೆ ತಲೆನೋವಾಗಲಿದೆ. ಹಿರಿಯ ಅನುಭವಿಗಳ ಜತೆಗೆ ಯುವ ಆಟಗಾರರಿಗೆ ಮಣೆ ಹಾಕಬಹುದು.

ಹೊಸ ವೇಗಿಗೆ ಅವಕಾಶ ಸಿಗಬಹುದು
ತಂಡದಲ್ಲಿ ಐದು ಮಂದಿ ವೇಗದ ಬೌಲರ್ ಗಳಿದ್ದು, ಆಡುವ ಹನ್ನೊಂದು ಮಂದಿ ಆಯ್ಕೆ ಕಠಿಣವಾಗಲಿದೆ. ಹಾಂಗ್ ಕಾಂಗ್ ವಿರುದ್ಧದ ಪಂದ್ಯಕ್ಕೆ ಅನನುಭವಿ ಯುವ ವೇಗಿಯೊಬ್ಬರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಹೀಗಾಗಿ ಬೂಮ್ರಾ ಬದಲಿಗೆ ಶಾರ್ದೂಲ್ ಠಾಕೂರ್ ಅಥವಾ ಖಲೀಲ್ ಅಹ್ಮದ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು.
ಗಾಯಾಳುವಾಗಿ ಚೇತರಿಸಿಕೊಂಡಿರುವ ಭುವನೇಶ್ವರ್ ಕುಮಾರ್ ಅವರು ವೇಗದ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಜತೆಗೆ ಹಾರ್ದಿಕ್ ಪಾಂಡ್ಯ ಕೂಡಾ ಸಾಥ್ ನೀಡಲಿದ್ದಾರೆ.

ಸ್ಪಿನ್ನರ್ಸ್ ಯಾರು ಯಾರು
ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ನಡುವೆ ಪೈಪೋಟಿ ಇದ್ದರೂ ಇಬ್ಬರಿಗೆ ಅವಕಾಶ ಸಿಗಲಿದೆ. ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಬಲದಿಂದ ತಂಡಕ್ಕೆ ಸೇರಬಹುದು ಯಜುವೇಂದ್ರ ಚಾಹಲ್ ಆಯ್ಕೆ ಖಚಿತ. ಕುಲದೀಪ್ ಅವರನ್ನು ಪಾಕಿಸ್ತಾನ ಪಂದ್ಯಕ್ಕೆ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕೇದಾರ್ ಜಾಧವ್ ಆಡಿದರೆ ಅವರು ಕೂಡಾ ಸ್ಪಿನ್ ಮಾಡುತ್ತಾರೆ ಎಂಬ ಲೆಕ್ಕಾಚಾರ.

ವಿಕೆಟ್ ಕೀಪರ್ /ಆಲ್ ರೌಂಡರ್ಸ್
ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ ಆಡುವುದು ಖಚಿತ. ಆಲ್ ರೌಂಡರ್ ಸ್ಥಾನಕ್ಕಾಗಿ ಹಾರ್ದಿಕ್ ಪಾಂಡ್ಯ ಹಾಗೂ ಕೇದಾರ್ ಜಾಧವ್ ನಡುವೆ ಪೈಪೋಟಿ ಕಂಡು ಬಂದರೂ ಇಬ್ಬರಿಗೂ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ನಾಲ್ಕನೆ ಕ್ರಮಾಂಕದಲ್ಲಿ ಧೋನಿ ಆಡಲು ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ಮಧ್ಯಮ ಕ್ರಮಾಂಕದ ಮೇಲೆ ಕಣ್ಣು
ಕೊಹ್ಲಿ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಅವರು ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇಂಗ್ಲೆಂಡ್ ಪ್ರವಾಸ ಮಿಸ್ ಮಾಡಿಕೊಂಡಿದ್ದ ಅಂಬಟಿ ರಾಯುಡು ಅವರು ನಾಲ್ಕು ಅಥವಾ ಐದನೆ ಸ್ಥಾನದಲ್ಲಿ ಆಡಲಿದ್ದಾರೆ. ಕೇದಾರ್ ಜಾಧವ್ ಹಾಗೂ ಮನೀಶ್ ಪಾಂಡೆ ನಡುವೆ ಪೈಪೋಟಿ ಇದ್ದು, ಯಾರು 6ನೇ ಕ್ರಮಾಂಕದಲ್ಲಿ ಆಡುತ್ತಾರೆ ಕಾದು ನೋಡಬೇಕಿದೆ.

ಆರಂಭಿಕ ಆಟಗಾರರು
ವಿಶ್ವಕಪ್ ದೃಷ್ಟಿಯಿಂದ ಆರಂಭಿಕ ಆಟಗಾರರನ್ನು ಬದಲಿಸದಿರಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅವರು ಏಷ್ಯಾಕಪ್ ಹಾಗೂ ಮುಂದಿನ ಕೆಲವು ಟೂರ್ನಮೆಂಟ್ ಗಳಲ್ಲಿ ಓಪನರ್ಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications