ಏಷ್ಯಾಕಪ್‌ಗೆ ಆರನೇ ತಂಡವಾಗಿ ಹಾಂಗ್‌ಕಾಂಗ್ ಆಯ್ಕೆಯಾದ ನಂತರ ಟೂರ್ನಿಯ ವೇಳಾಪಟ್ಟಿ ಹೇಗಿದೆ?
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಇದೇ ತಿಂಗಳ 27ರಿಂದ ಆರಂಭವಾಗಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ. ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಭಾಗವಹಿಸುತ್ತಿದ್ದು, ಆರನೇ ತಂಡವು ಕ್ವಾಲಿಫಯರ್ ಸುತ್ತಿನಲ್ಲಿ ಗೆದ್ದು ಆಯ್ಕೆಯಾಗಬೇಕಿತ್ತು. ಕ್ವಾಲಿಫಯರ್ ಸುತ್ತು ಆಗಸ್ಟ್ 20ರಿಂದ 24ರವರೆಗೆ ನಡೆದಿದ್ದು, ಈ ಸುತ್ತಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್, ಹಾಂಗ್ ಕಾಂಗ್, ಕುವೈತ್ ಹಾಗೂ ಸಿಂಗಾಪುರ್ ತಂಡಗಳು ಭಾಗವಹಿಸಿದ್ದವು.
ಈ ನಾಲ್ಕೂ ತಂಡಗಳೂ ಸಹ ತಲಾ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದವು ಹಾಗೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳಲಿರುವ ತಂಡಕ್ಕೆ ಏಷ್ಯಾಕಪ್‌ಗೆ ಅರ್ಹತೆ ಪಡೆದುಕೊಳ್ಳುವ ಅವಕಾಶವಿತ್ತು. ಹೀಗೆ ಈ ಕ್ವಾಲಿಫಯರ್ ಸುತ್ತಿನಲ್ಲಿ ಆಡಿದ 3 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಹಾಂಗ್ ಕಾಂಗ್ ಏಷ್ಯಾಕಪ್ ಪ್ರವೇಶಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.
ಹೀಗೆ ಏಷ್ಯಾಕಪ್ ಪ್ರವೇಶಿಸಿರುವ ಹಾಂಗ್ ಕಾಂಗ್ ಎ ಗುಂಪನ್ನು ಸೇರಿದ್ದು, ಏಷ್ಯಾಕಪ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಜತೆ ಹಣಾಹಣಿ ನಡೆಸಲಿದೆ. ಇನ್ನು ಏಷ್ಯಾಕಪ್ ಎ ಗುಂಪಿಗೆ ಇದೀಗ ನೂತನ ಸದಸ್ಯನ ಆಗಮನವಾಗಿದ್ದು ವೇಳಾಪಟ್ಟಿ ಸಂಪೂರ್ಣವಾಗಿದೆ. ಹಾಗಿದ್ದರೆ ಹಾಂಗ್ ಕಾಂಗ್ ಅರ್ಹತೆ ಗಿಟ್ಟಿಸಿಕೊಂಡ ನಂತರ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಅಂಕಪಟ್ಟಿ ಹೇಗಿದೆ ಮತ್ತು ಭಾರತ ಹಾಗೂ ಹಾಂಗ್ ಕಾಂಗ್ ತಂಡಗಳು ಯಾವಾಗ ಮುಖಾಮುಖಿಯಾಗಲಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಏಷ್ಯಾಕಪ್ ವೇಳಾಪಟ್ಟಿ
27 ಆಗಸ್ಟ್: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್: ಭಾರತ ವರ್ಸಸ್ ಪಾಕಿಸ್ತಾನ (ದುಬೈ)
30 ಆಗಸ್ಟ್: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್: ಭಾರತ ವರ್ಸಸ್ ಹಾಂಗ್ ಕಾಂಗ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಹಾಂಗ್ ಕಾಂಗ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್ (ದುಬೈ)

ಗುಂಪುಗಳು ಹೀಗಿವೆ
ಗುಂಪು ಎ: ಭಾರತ, ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್
ಗುಂಪು ಬಿ: ಅಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ

ಹಾಂಗ್ ಕಾಂಗ್ ತಂಡ
ಯಾಸಿಮ್ ಮುರ್ತಾಜಾ, ನಿಜಾಕತ್ ಖಾನ್ (ನಾಯಕ), ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ ( ವಿಕೆಟ್ ಕೀಪರ್ ), ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ, ವಾಜಿದ್ ಶಾ, ಅಫ್ತಾಬ್ ಹುಸೇನ್, ಧನಂಜಯ್ ರಾವ್, ಧನಂಜಯ್ ರಾವ್ , ಅಹಾನ್ ತ್ರಿವೇದಿ, ಅತೀಕ್ ಇಕ್ಬಾಲ್
ಕ್ವಾಲಿಫಯರ್ ಸುತ್ತು ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ಅಂಕಪಟ್ಟಿ ಹೀಗಿದೆ:
ಹಾಂಗ್‌ಕಾಂಗ್: ಆಡಿದ ಪಂದ್ಯಗಳು 3 , ಗೆಲುವು 3
ಕುವೈತ್: ಆಡಿದ ಪಂದ್ಯಗಳು 3, ಗೆಲುವು 2, ಸೋಲು 1
ಯುಎಇ: ಆಡಿದ ಪಂದ್ಯಗಳು 3, ಗೆಲುವು 1, ಸೋಲು 2
ಸಿಂಗಾಪುರ್: ಆಡಿದ ಪಂದ್ಯಗಳು 3, ಸೋಲು 3
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications