Asia Cup 2022: ಗಾಯಗೊಂಡ ಭಾರತ ಆಟಗಾರ ಟೂರ್ನಿಯಿಂದ ಹೊರಕ್ಕೆ; ಬದಲಿ ಆಟಗಾರನ ಆಯ್ಕೆ!

ಸದ್ಯ ಇದೇ ವಾರಾಂತ್ಯದಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿದು ಭಾಗವಹಿಸಲು ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗಿದ್ದ ಬಹುತೇಕ ಆಟಗಾರರು ಈಗಾಗಲೇ ದುಬೈ ತಲುಪಿದ್ದು ಅಭ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಈ ಹಿಂದೆಯೇ 15 ಆಟಗಾರರ ಟೀಂ ಇಂಡಿಯಾವನ್ನು ಪ್ರಕಟಿಸಿದ್ದ ಬಿಸಿಸಿಐ ಮೂವರು ಆಟಗಾರರನ್ನು ಮೀಸಲು ಆಟಗಾರರೆಂದು ಘೋಷಿಸಿತ್ತು.
ಇನ್ನು ತಂಡದ ಆಯ್ಕೆಯ ಸಂದರ್ಭದಲ್ಲಿ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಎನಿಸಿಕೊಂಡಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿದ್ದ ಕಾರಣ ಹಾಗೂ ಹರ್ಷಲ್ ಪಟೇಲ್ ಕೂಡ ಅಲಭ್ಯರಾಗಿದ್ದ ಕಾರಣ ಅವರನ್ನು ಬಿಟ್ಟು ಉಳಿದ ಆಟಗಾರರನ್ನು ಮುಖ್ಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇನ್ನು ತಂಡಕ್ಕೆ ಆಯ್ಕೆಯಾಗಿದ್ದ ಆಟಗಾರರು ಯಾರಾದರೂ ಗಾಯದ ಸಮಸ್ಯೆಗೊಳಗಾಗಿ ಟೂರ್ನಿಗೆ ಅಲಭ್ಯರಾದರೆ ಅವರ ಸ್ಥಾನ ತುಂಬಲು ಮೀಸಲು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಆಟಗಾರರು ಗಾಯಕ್ಕೊಳಗಾದಾಗ ತಂಡ ಸೇರಬೇಕಿದ್ದ ಮೀಸಲು ಆಟಗಾರನೇ ತಂಡದಿಂದ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ.
ಹೌದು, ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿದ್ದ ಟೀಮ್ ಇಂಡಿಯಾದಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದ ದೀಪಕ್ ಚಹರ್ ಅಭ್ಯಾಸದ ವೇಳೆ ಗಾಯಗೊಂಡ ಪರಿಣಾಮ ಟೂರ್ನಿಯಿಂದ ಹೊರಬಿದ್ದಿದ್ದು ಬದಲಿ ಆಟಗಾರನ ನೇಮಕವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕುಲ್‌ದೀಪ್ ಸೇನ್ ಆಯ್ಕೆ
ಗಾಯಗೊಂಡು ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ದೀಪಕ್ ಚಹರ್ ಬದಲಾಗಿ ಕುಲ್‌ದೀಪ್ ಸೇನ್ ಆಯ್ಕೆಯಾಗಿದ್ದು, ಟೀಮ್ ಇಂಡಿಯಾದ ಮೀಸಲು ಆಟಗಾರನಾಗಿರಲಿದ್ದಾರೆ. ಮೂಲತಃ ಮಧ್ಯಪ್ರದೇಶದವನಾಗಿರುವ ಈ ಬಲಗೈ ಮಧ್ಯಮ ವೇಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದು 7 ಪಂದ್ಯಗಳನ್ನಾಡಿ 8 ವಿಕೆಟ್ ಪಡೆದಿದ್ದರು.

ಅಂದು ಐಪಿಎಲ್, ಇಂದು ಏಷ್ಯಾಕಪ್
ಇನ್ನು ದೀಪಕ್ ಚಹರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸಂಪೂರ್ಣವಾಗಿ ಗಾಯದ ಸಮಸ್ಯೆಯಿಂದಾಗಿ ಕೈತಪ್ಪಿಸಿಕೊಂಡಿದ್ದರು. ಇದೀಗ ಇದೇ ವರ್ಷ ಮತ್ತೊಂದು ಪ್ರತಿಷ್ಠಿತ ಟೂರ್ನಿಯೊಂದನ್ನು ದೀಪಕ್ ಚಹರ್ ಗಾಯದ ಸಮಸ್ಯೆಯಿಂದಾಗಿ ತಪ್ಪಿಸಿಕೊಳ್ಳುತ್ತಿರುವ ಚಹರ್ ದುರದೃಷ್ಟ ಆಟಗಾರ ಎನ್ನುತ್ತಿದ್ದಾರೆ ನೆಟ್ಟಿಗರು.

ದೀಪಕ್ ಚಹರ್ ಹೊರಬಿದ್ದ ನಂತರ ಟೀಮ್ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ರವಿ ಬಿಷ್ಣೋಯ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್.
ಮೀಸಲು ಆಟಗಾರರು: ಶ್ರೇಯಸ್ ಐಯ್ಯರ್, ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಸೇನ್
ಏಷ್ಯಾಕಪ್ ವೇಳಾಪಟ್ಟಿ
27 ಆಗಸ್ಟ್: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್: ಭಾರತ ವರ್ಸಸ್ ಪಾಕಿಸ್ತಾನ (ದುಬೈ)
30 ಆಗಸ್ಟ್: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್: ಭಾರತ ವರ್ಸಸ್ ಹಾಂಗ್ ಕಾಂಗ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಹಾಂಗ್ ಕಾಂಗ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್ (ದುಬೈ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications