
ಹಾಂಗ್‌ಕಾಂಗ್ ಗೆದ್ದ ಪಂದ್ಯಗಳ ವಿವರ
ಏಷ್ಯಾಕಪ್ ಕ್ವಾಲಿಫೈಯರ್ ಸುತ್ತಿನಲ್ಲಿ ಹಾಂಗ್‌ಕಾಂಗ್ ಕಣಕ್ಕಿಳಿದ ಪಂದ್ಯಗಳ ದಿನಾಂಕ ಹಾಗೂ ಅವುಗಳ ಫಲಿತಾಂಶದ ವಿವರ ಈ ಕೆಳಕಂಡಂತಿದೆ.
ಪಂದ್ಯ 1: ಆಗಸ್ಟ್ 20ರ ಶನಿವಾರದಂದು ಅಲ್ ಅಮೆರಾತ್‌ನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಹಾಂಗ್‌ಕಾಂಗ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿ ಎದುರಾಳಿ ಸಿಂಗಾಪುರ್ ತಂಡಕ್ಕೆ 149 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಸಿಂಗಾಪುರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು. ಪರಿಣಾಮವಾಗಿ ಹಾಂಗ್‌ಕಾಂಗ್ 8 ರನ್‌ಗಳ ಜಯವನ್ನು ಸಾಧಿಸಿತ್ತು.
ಪಂದ್ಯ 2: ಆಗಸ್ಟ್ 23ರ ಮಂಗಳವಾರದಂದು ನಡೆದ ತನ್ನ ಎರಡನೇ ಪಂದ್ಯದಲ್ಲಿ ಕುವೈತ್ ತಂಡವನ್ನು ಹಾಂಗ್‌ಕಾಂಗ್ ಎದುರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಕುವೈತ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿ ಹಾಂಗ್‌ಕಾಂಗ್ ತಂಡಕ್ಕೆ 152 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತಿದ ಹಾಂಗ್‌ಕಾಂಗ್ 17.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿ 8 ವಿಕೆಟ್‌ಗಳ ಗೆಲುವನ್ನು ಕಂಡು ತನ್ನ ಎರಡನೇ ಜಯವನ್ನು ಸಾಧಿಸಿತು.
ಪಂದ್ಯ 3: ಆಗಸ್ಟ್ 24ರ ಬುಧವಾರದಂದು ನಡೆದ ತನ್ನ ಮೂರನೇ ಪಂದ್ಯದಲ್ಲಿ ಯುಎಇ ತಂಡವನ್ನು ಹಾಂಗ್‌ಕಾಂಗ್ ಎದುರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲ್‌ಔಟ್ ಆಗಿ ಹಾಂಗ್‌ಕಾಂಗ್ ತಂಡಕ್ಕೆ 148 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಹಾಂಗ್‌ಕಾಂಗ್ 19 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿ ವಿಕೆಟ್‌ಗಳ ಗೆಲುವನ್ನು ಕಂಡು ಹ್ಯಾಟ್ರಿಕ್ ಜಯವನ್ನು ಸಾಧಿಸಿ ಏಷ್ಯಾಕಪ್ ಟೂರ್ನಿಯಲ್ಲಿ ಆಡಲು ಅರ್ಹತೆಯನ್ನು ಗಿಟ್ಟಿಸಿಕೊಂಡಿತು.

ಹಾಂಗ್‌ಕಾಂಗ್ ಅರ್ಹತೆ ಪಡೆದ ನಂತರ ಏಷ್ಯಾಕಪ್ ಗುಂಪುಗಳು ಹೇಗಿವೆ?
ಹಾಂಗ್‌ಕಾಂಗ್ ಏಷ್ಯಾಕಪ್ ಟೂರ್ನಿಯನ್ನಾಡಲು ಅರ್ಹತೆ ಗಿಟ್ಟಿಸಿಕೊಂಡ ನಂತರ ಗುಂಪುಗಳು ಹೀಗಿವೆ:
ಗುಂಪು ಎ: ಭಾರತ, ಪಾಕಿಸ್ತಾನ, ಹಾಂಗ್‌ಕಾಂಗ್
ಗುಂಪು ಬಿ: ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾ

ಹಾಂಗ್‌ಕಾಂಗ್ ತಂಡ ಮತ್ತು ಕ್ವಾಲಿಫೈಯರ್ ಸುತ್ತಿನ ಅಂಕಪಟ್ಟಿ
ಹಾಂಗ್‌ಕಾಂಗ್ ತಂಡ: ಯಾಸಿಮ್ ಮುರ್ತಾಜಾ, ನಿಜಾಕತ್ ಖಾನ್ (ನಾಯಕ), ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ, ವಾಜಿದ್ ಶಾ, ಅಫ್ತಾಬ್ ಹುಸೇನ್, ಅಫ್ತಾಬ್ ಹುಸೇನ್, ಅಫ್ತಾಬ್ ಹುಸೇನ್, ತ್ರಿವೇದಿ, ಅತೀಕ್ ಇಕ್ಬಾಲ್
ಕ್ವಾಲಿಫೈಯರ್ ಸುತ್ತಿನ ಅಂಕಪಟ್ಟಿ:
ಹಾಂಗ್‌ಕಾಂಗ್: ಆಡಿದ ಪಂದ್ಯಗಳು 3, ಗೆಲುವು 3
ಕುವೈತ್: ಆಡಿದ ಪಂದ್ಯಗಳು 3, ಗೆಲುವು 2, ಸೋಲು 1
ಯುಎಇ: ಆಡಿದ ಪಂದ್ಯಗಳು 3, ಗೆಲುವು 1, ಸೋಲು 2
ಸಿಂಗಾಪುರ್: ಆಡಿದ ಪಂದ್ಯಗಳು 3, ಸೋಲು 3


Click it and Unblock the Notifications












