1984ರಿಂದ 2018: ಭಾರತ ಮತ್ತು ಲಂಕಾ ನಡುವಿನ ಎಲ್ಲಾ ಏಷ್ಯಾಕಪ್ ಪಂದ್ಯಗಳ ಫಲಿತಾಂಶಗಳ ಪಟ್ಟಿ

ಇದೇ ತಿಂಗಳ 27ರಿಂದ ಪ್ರತಿಷ್ಠಿತ ಏಷ್ಯಾಕಪ್‌ನ ಹದಿನೈದನೇ ಆವೃತ್ತಿ ಶುರುವಾಗಲಿದ್ದು, ಪ್ರಥಮ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಗೆಲ್ಲುವ ತಂಡಗಳು ಎನಿಸಿಕೊಂಡಿರುವುದು ಕೇವಲ ಭಾರತ ಹಾಗೂ ಪಾಕಿಸ್ತಾನ ಮಾತ್ರ. ದಾಸುನ್ ಶನಕ ನಾಯಕತ್ವದ ಶ್ರೀಲಂಕಾ ಈ ಬಾರಿ ಏಷ್ಯಾಕಪ್ ಟೂರ್ನಿಯನ್ನು ಎತ್ತಿಹಿಡಿಯಲಿದೆ ಎಂದು ಯಾರೊಬ್ಬರೂ ಸಹ ಭವಿಷ್ಯ ನುಡಿಯುತ್ತಿಲ್ಲ ಎನ್ನಬಹುದು. ಹೌದು, ಶ್ರೀಲಂಕಾ ತಂಡದ ಮೇಲೆ ಯಾರಿಗೂ ಸಹ ಈಗ ಈ ಹಿಂದೆ ಇದ್ದ ದೊಡ್ಡ ಮಟ್ಟದ ವಿಶ್ವಾಸವಿಲ್ಲ ಎಂದೇ ಹೇಳಬಹುದು.
ಆದರೆ, ಶ್ರೀಲಂಕಾ ತಂಡ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಅಪಾಯಕಾರಿ ತಂಡ ಎಂಬ ಹೆಸರನ್ನು ಮಾಡಿತ್ತು. ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಫೈನಲ್ ಪ್ರವೇಶಿಸಿರುವ ತಂಡ ಎಂಬ ಹೆಸರನ್ನು ಮಾಡಿದೆ ಶ್ರೀಲಂಕಾ. ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ರನ್, ಅತಿಹೆಚ್ಚು ಶತಕ ಹಾಗೂ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರು ಇದೇ ಶ್ರೀಲಂಕಾ ತಂಡದವರಾಗಿದ್ದಾರೆ. ಹೀಗೆ ಇಂದು ಮಂಕಾಗಿದ್ದರೂ ಸಹ ಏಷ್ಯಾಕಪ್ ಇತಿಹಾಸದಲ್ಲಿ ತನ್ನದೇ ಆದ ದಾಖಲೆಗಳನ್ನು ನಿರ್ಮಿಸಿರುವ ಶ್ರೀಲಂಕಾ ಟೀಮ್ ಇಂಡಿಯಾಗೆ ಸರಿಯಾದ ಪೈಪೋಟಿ ನೀಡಿದ ತಂಡ ಎನಿಸಿಕೊಂಡಿದೆ.
ಹೌದು, ಏಷ್ಯಾಕಪ್ ಇತಿಹಾಸದಲ್ಲಿ ಶ್ರೀಲಂಕಾ ಭಾರತಕ್ಕೆ ಪಕ್ಕಾ ಪೈಪೋಟಿ ನೀಡಿದ್ದು, ಉಭಯ ತಂಡಗಳ ಮುಖಾಮುಖಿ ಪಂದ್ಯಗಳಲ್ಲಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಎಲ್ಲಾ ಪಂದ್ಯಗಳ ಫಲಿತಾಂಶದ ಪಟ್ಟಿ ಈ ಕೆಳಕಂಡಂತಿದೆ.

ಭಾರತ ಮತ್ತು ಶ್ರೀಲಂಕಾ ಏಷ್ಯಾಕಪ್ ಮುಖಾಮುಖಿಯ ಪಂದ್ಯಗಳ ಫಲಿತಾಂಶ
1984 ಭಾರತ 10 ವಿಕೆಟ್‌ಗಳಿಂದ ಗೆದ್ದಿತ್ತು
1988 ಶ್ರೀಲಂಕಾ 17 ರನ್‌ಗಳಿಂದ ಗೆದ್ದಿತು
1988 ಭಾರತ 6 ವಿಕೆಟ್‌ಗಳಿಂದ ಗೆದ್ದಿತು
1990 ಶ್ರೀಲಂಕಾ 36 ರನ್‌ಗಳಿಂದ ಗೆದ್ದಿತು
1990 ಭಾರತ 7 ವಿಕೆಟ್‌ಗಳಿಂದ ಗೆದ್ದಿತು
1995 ಭಾರತ 8 ವಿಕೆಟ್‌ಗಳಿಂದ ಗೆದ್ದಿತ್ತು
1995 ಭಾರತ 8 ವಿಕೆಟ್‌ಗಳಿಂದ ಗೆದ್ದಿತ್ತು
1997 ಶ್ರೀಲಂಕಾ 6 ವಿಕೆಟ್‌ಗಳಿಂದ ಗೆದ್ದಿತು
1997 ಶ್ರೀಲಂಕಾ 8 ವಿಕೆಟ್‌ಗಳಿಂದ ಗೆದ್ದಿತು
2000 ಶ್ರೀಲಂಕಾ 71 ರನ್‌ಗಳಿಂದ ಗೆದ್ದಿತು
2004 ಶ್ರೀಲಂಕಾ 12 ರನ್‌ಗಳಿಂದ ಗೆದ್ದಿತು
2004 ಭಾರತ 4 ರನ್‌ಗಳಿಂದ ಗೆದ್ದಿತ್ತು
2004 ಶ್ರೀಲಂಕಾ 25 ರನ್‌ಗಳಿಂದ ಗೆದ್ದಿತು
2008ರಲ್ಲಿ ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು
2008 ಶ್ರೀಲಂಕಾ 100 ರನ್‌ಗಳಿಂದ ಗೆದ್ದಿತ್ತು
2010 ಶ್ರೀಲಂಕಾ 7 ವಿಕೆಟ್‌ಗಳಿಂದ ಗೆದ್ದಿತ್ತು
2010ರಲ್ಲಿ ಭಾರತ 81 ರನ್‌ಗಳಿಂದ ಗೆದ್ದಿತ್ತು
2012ರಲ್ಲಿ ಭಾರತ 50 ರನ್‌ಗಳಿಂದ ಗೆದ್ದಿತ್ತು
2014 ಶ್ರೀಲಂಕಾ 2 ವಿಕೆಟ್‌ಗಳಿಂದ ಗೆದ್ದಿತ್ತು
2016ರಲ್ಲಿ ಭಾರತ 5 ವಿಕೆಟ್‌ಗಳಿಂದ ಗೆದ್ದಿತ್ತು

ಮುಖಾಮುಖಿಯ ಫಲಿತಾಂಶ
ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 20 ಏಷ್ಯಾಕಪ್ ಮುಖಾಮುಖಿ ಪಂದ್ಯಗಳು ಜರುಗಿದ್ದು, ಈ ಪೈಕಿ ಭಾರತ 10 ಪಂದ್ಯಗಳಲ್ಲಿ ಗೆದ್ದಿದ್ದರೆ, ಶ್ರೀಲಂಕಾ 10 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಉಭಯ ತಂಡಗಳು ಏಷ್ಯಾಕಪ್ ಮುಖಾಮುಖಿಯಲ್ಲಿ ಸಮಬಲ ಸಾಧಿಸಿವೆ.

ಟೂರ್ನಿಗೆ ಪ್ರಕಟವಾಗಿರುವ ತಂಡಗಳು
ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಭಾರತ ಮತ್ತು ಶ್ರೀಲಂಕಾ ತಂಡಗಳ ಸ್ಕ್ವಾಡ್
ಶ್ರೀಲಂಕಾ: ದಸುನ್ ಶನಕ - ನಾಯಕ, ದನುಷ್ಕ ಗುಣತಿಲಕ, ಪಾತುಮ್ ನಿಸ್ಸಂಕ, ಕುಸಲ್ ಮೆಂಡಿಸ್ - ವಿಕೆಟ್ ಕೀಪರ್/ಬ್ಯಾಟ್ಸ್‌ಮನ್, ಚರಿತ್ ಅಸಲಂಕಾ - ಉಪನಾಯಕ, ಭಾನುಕ ರಾಜಪಕ್ಸೆ - ವಿಕೆಟ್ ಕೀಪರ್/ಬ್ಯಾಟ್ಸ್‌ಮನ್, ಅಶೇನ್ ಬಂಡಾರ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ವನಿಂದು ಹಸರಂಗ, ವಂದರ್ ಹಸರಂಗ ಜಯವಿಕ್ರಮ, ಚಾಮಿಕ ಕರುಣಾರತ್ನೆ, ದಿಲ್ಶನ್ ಮಧುಶಂಕ, ಮಥೀಶ ಪತಿರಣ, ನುವಾನಿಡು ಫೆರ್ನಾಂಡೊ, ದುಷ್ಮಂತ ಚಮೀರ, ದಿನೇಶ್ ಚಂಡಿಮಲ್ - ವಿಕೆಟ್ ಕೀಪರ್/ಬ್ಯಾಟ್ಸ್‌ಮನ್
ಭಾರತ:ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications