For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ನಲ್ಲಿ ಮಿಂಚದ ಹೊರತು ಆತನಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ದೊರೆಯದು: ಇರ್ಫಾನ್ ಪಠಾಣ್

Asia Cup 2022: Irfan Pathan said Virat Kohli should find form in Asia cup

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟಿ20 ವಿಶ್ವಕಪ್‌ಗಿಂತಲೂ ಮುನ್ನ ನಡೆಯುವ ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಮಿಂಚಲೇ ಬೇಕಿದ್ದು ಅದ್ಭುತ ಪ್ರದರ್ಶನವನ್ನು ಅವರು ನೀಡಬೇಕಿದೆ. ಹಾಗಿದ್ದಾಗ ಮಾತ್ರವೇ ವಿರಾಟ್ ಕೊಹ್ಲಿ ವಿಶ್ವ ಕಪ್‌ನ ತಂಡದಲ್ಲಿ ಸ್ಥಾನವನ್ನು ಸಂಪಾದಿಸಬಹುದು. ಇಲ್ಲದಿದ್ದರೆ ಫಾರ್ಮ್‌ನಲ್ಲಿರುವ ಇತರ ಆಟಗಾರರಿಗೆ ಸ್ಥಾನವನ್ನು ನೀಡಬೇಕು ಎಂದಿದ್ದಾರೆ ಇರ್ಪಾನ್ ಪಠಾಣ್.

ಇನ್ನು ಇದೇ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಹೊಂದಿರುವ ಅದ್ಭುತ ದಾಖಲೆಯನ್ನು ಕೂಡ ಉಲ್ಲೇಖಿಸಿದ್ದು ಅದೇ ರೀತಿಯ ಪ್ರದರ್ಶನ ಈ ಬಾರಿಯ ವಿಶ್ವಕಪ್‌ನಲ್ಲಿಯೂ ಬರುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಮನಸ್ಥಿತಿಯ ಬಗ್ಗೆ ಕಳವಳವಿದೆ

ಮನಸ್ಥಿತಿಯ ಬಗ್ಗೆ ಕಳವಳವಿದೆ

ಇರ್ಫಾನ್ ಪಠಾಣ್ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಈ ಕಠಿಣ ಸಂದರ್ಭದಲ್ಲಿ ಹೊಂದಿರುವ ಮನಸ್ಥಿತಿಯ ಬಗ್ಗೆ ಆತಂಕವಿರುವುದಾಗಿ ಹೇಳಿಕೊಂಡಿದ್ದಾರೆ. "ವಿರಾಟ್ ಕೊಹ್ಲಿ ಅವರು ಯಾವ ರೀತಿಯಾಗಿ ಯೋಚಿಸುತ್ತಿರಬಹುದು ಎಂಬುದು ಕಳವಳಕಾರಿಯಾಗಿದೆ. ಆವರು ಆಟವನ್ನು ಆಡಲು ಬಂದ ಸಂದರ್ಭದಲ್ಲಿ ಯಾವ ರೀತಿಯ ಮನಸ್ಥಿತಿಯೊಂದಿಗೆ ಆಡಲಿದ್ದಾರೆ ಎಂಬುದು ಪ್ರಮುಖ ಸಂಗತಿಯಾಗಿರಲಿದೆ" ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾ ಕಪ್ ಬಹಳ ಮುಖ್ಯ

ಏಷ್ಯಾ ಕಪ್ ಬಹಳ ಮುಖ್ಯ

ಮುಂದುವರಿದು ಮಾತನಾಡಿದ ಇರ್ಫಾನ್ ಪಠಾಣ್ ಏಷ್ಯಾ ಕಪ್ ಟೂರ್ನಿ ಬಹಳ ಬಹಳ ಪ್ರಮುಖವಾಗಿದೆ ಎಂದಿದ್ದಾರೆ. "ನನ್ನ ಪ್ರಕಾರ ಏಷ್ಯಾ ಕಪ್ ಬಹಳ ಮಹತ್ವದ ಪಾತ್ರವಹಸಲಿದೆ. ಆದರೆ ವಿಶ್ವಕಪ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾರಣ ಪಿಚ್‌ಗಳು ಬಹಳ ಉತ್ತಮವಾಗಿದೆ. ಆಸ್ಟ್ರೇಲಿಯಾ ಪಿಚ್‌ನಲ್ಲಿ ವಿರಾಟ್ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದು ಉತ್ತಮ ದಾಖಲೆ ಹೊಂದಿದ್ದಾರೆ" ಎಂದು ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಇರ್ಫಾನ್ ಪಠಾಣ್ ಪ್ರತಿಕ್ರಿಯೆ ನೀಡಿದ್ದಾರೆ.

ಕೊಹ್ಲಿ ಫಾರ್ಮ್‌ನಲ್ಲಿರುವುದು ಭಾರತಗೆ ಮುಖ್ಯ

ಕೊಹ್ಲಿ ಫಾರ್ಮ್‌ನಲ್ಲಿರುವುದು ಭಾರತಗೆ ಮುಖ್ಯ

"ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಪ್ರದರ್ಶಿಸುವುದು ಭಾರತ ತಂಡಕ್ಕೆ ಅತ್ಯಂತ ಅಗತ್ಯವಾಗಿದೆ. ಅವರು ಏಷ್ಯಾ ಕಪ್‌ನಲ್ಲಿ ಅತ್ಯುತ್ತಮ ಫಾರ್ಮ್‌ ಪ್ರದರ್ಶಿಸುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿ ಹಾಗೂ ಭಾರತ ತಂಡಕ್ಕೆ ಇದು ಗೆಲ್ಲಲೇ ಬೇಕಾದ ಪರಿಸ್ಥಿತಿ" ಎಂದಿದ್ದಾರೆ ಇರ್ಫಾನ್ ಪಠಾಣ್. ಮುಂದುವರಿದು ಮಾತನಾಡಿದ ಅವರು ಒಂದು ವೇಳೆ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ವಿಫಲವಾದರೆ ಫಾರ್ಮ್‌ನಲ್ಲಿರುವ ಆಟಗಾರರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಭಾರತ ತಂಡದಲ್ಲಿ ಸಾಕಷ್ಟು ಆಯ್ಕೆಗಳಿವೆ

ಭಾರತ ತಂಡದಲ್ಲಿ ಸಾಕಷ್ಟು ಆಯ್ಕೆಗಳಿವೆ

ಏಷ್ಯಾ ಕಪ್‌ನಲ್ಲಿ ಫಾರ್ಮ್ ಕಂಡುಕೊಳ್ಳದಿದ್ದರೆ ಫಾರ್ಮ್‌ನಲ್ಲಿರುವ ಆಟಗಾರರಿಗೆ ಅವಕಾಶ ನಿಡಬೇಕು ಎಂದಿದ್ದಾರೆ ಇರ್ಫಾನ್ ಪಠಾಣ್. "ಭಾರತ ತಂಡದಲ್ಲಿ ಸಾಕಷ್ಟು ಆಯ್ಕೆಗಳಿದ್ದು ಅಲ್ಲಿರುವ ಆಯ್ಕೆಗಳನ್ನು ಪರಿಗಣಿಸುವ ಅಗತ್ಯವಿದೆ. ಯಾಕೆಂದರೆ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರರನ್ನು ವಿಶ್ವಕಪ್‌ಗೆ ಕಳುಹಿಸಬೇಕು. ವಿಶ್ವಕಪ್‌ನಂತಾ ವೇದಿಕೆಗೆ ಫಾರ್ಮ್ ಇಲ್ಲದೆ ಹೋಗಲು ಸಾಧ್ಯವಿಲ್ಲ. ವಿಶ್ವಕಪ್‌ನಲ್ಲಿ ಫಾರ್ಮ್ ಕಂಡುಕೊಳ್ಳಲು ಸಾಧ್ಯವಿಲ್ಲ" ಎಂದು ಮಾಜಿ ಆಲ್‌ರೌಂಡರ್ ಇರ್ಪಾಣ್ ಪಠಾಣ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Story first published: Monday, August 22, 2022, 17:31 [IST]
Other articles published on Aug 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+