ಏಷ್ಯಾಕಪ್: ದುಬೈ ತಲುಪಿರುವ ಕೊಹ್ಲಿ, ರೋಹಿತ್; ಯಾವಾಗ ಬರಲಿದೆ ಕೆಎಲ್ ರಾಹುಲ್ ಪಡೆ?

ಇದೇ ತಿಂಗಳ 27ರಿಂದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಪ್ರಥಮ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಇತ್ತ ಕಳೆದ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಮ್ ಇಂಡಿಯಾ ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಆಗಸ್ಟ್ 28ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿದೆ.
ಇನ್ನು ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿದ್ದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದ ಆಟಗಾರರ ಪೈಕಿ ಕೆಲವರು ಇತ್ತೀಚಿಗಷ್ಟೆ ಜಿಂಬಾಬ್ವೆ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದರು ಹಾಗೂ ಇನ್ನೂ ಕೆಲ ಆಟಗಾರರು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದು ವಿಶ್ರಾಂತಿ ಪಡೆದುಕೊಂಡಿದ್ದರು. ಇನ್ನು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ರಿಷಭ್ ಪಂತ್ ಹಾಗೂ ಮುಂತಾದ ಆಟಗಾರರು ನಿನ್ನೆಯಷ್ಟೇ ( ಆಗಸ್ಟ್ 23 ) ದುಬೈಗೆ ಹಾರಿದ್ದು, ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಏಷ್ಯಾಕಪ್ ಆಡಬೇಕಾಗಿರುವ ಆಟಗಾರರು ಇಂದು ( ಆಗಸ್ಟ್ 24 ) ರಾತ್ರಿ ದುಬೈ ತಲುಪಲಿದ್ದಾರೆ.

ಜಿಂಬಾಬ್ವೆಯಿಂದ ಹಾರಲಿದೆ ಕೆಎಲ್ ರಾಹುಲ್ ಪಡೆ
ಜಿಂಬಾಬ್ವೆ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡಿದ್ದ ಕೆಎಲ್ ರಾಹುಲ್ ಪಡೆ ಇಂದು ರಾತ್ರಿ ದುಬೈಗೆ ಬಂದಿಳಿಯಲಿದೆ. ಕೆಎಲ್ ರಾಹುಲ್ ಜತೆ ಅಕ್ಷರ್ ಪಟೇಲ್, ಅವೇಶ್ ಖಾನ್ ಮತ್ತು ದೀಪಕ್ ಹೂಡಾ ಜಿಂಬಾಬ್ವೆಯಿಂದ ದುಬೈಗೆ ಹಾರಲಿದ್ದಾರೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್, ಅಕ್ಷರ್ ಪಟೇಲ್
ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ: ಕೆಎಲ್ ರಾಹುಲ್ (ನಾಯಕ). ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಅವೇಶ್ ಖಾನ್, ಪ್ರಸೀದ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.

ಏಷ್ಯಾಕಪ್ ವೇಳಾಪಟ್ಟಿ
27 ಆಗಸ್ಟ್: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್: ಭಾರತ ವರ್ಸಸ್ ಪಾಕಿಸ್ತಾನ (ದುಬೈ)
30 ಆಗಸ್ಟ್: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್ (ದುಬೈ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications