Asia Cup: ನಾಯಕ ರೋಹಿತ್ ಶರ್ಮಾ ಅಲ್ಲ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಕನ್ನಡಿಗ ರಾಹುಲ್!

ನಾಳೆಯಿಂದ ( ಆಗಸ್ಟ್ 27 ) ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಯು ಎ ಇಯಲ್ಲಿ ಆರಂಭವಾಗುತ್ತಿದೆ. ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಬಿ ಗುಂಪಿನ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಗಳು ಮುಖಾಮುಖಿಯಾಗುತ್ತಿವೆ. ಇನ್ನು ಟೂರ್ನಿಯ ಎರಡನೇ ದಿನದಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಎ ಗುಂಪಿನ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಟ ನಡೆಸಲಿವೆ.
ಟೂರ್ನಿಯ ಮೇಲೆ ಅತೀ ದೊಡ್ಡ ನಿರೀಕ್ಷೆ ಹಾಗೂ ಟೂರ್ನಿ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಲು ಕಾರಣವಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಈ ಹಣಾಹಣಿಯಲ್ಲಿ ಯಾವ ಆಟಗಾರರು ಕಣಕ್ಕಿಳಿಯಬಹುದು ಹಾಗೂ ಯಾವ ಆಟಗಾರರು ಅವಕಾಶ ಸಿಗದೇ ಬೆಂಚ್ ಕಾಯಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿವೆ. ಅತ್ತ ಟೀಮ್ ಇಂಡಿಯಾ ಪಾಳೆಯದಲ್ಲಿಯೂ ಸಹ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯುವ ಆಡುವ ಬಳಗ ಯಾವ ರೀತಿ ಇರಬೇಕು ಎಂಬುದರ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗಳು ಜರುಗುತ್ತಿದ್ದು ಸದ್ಯ ಟೀಮ್ ಇಂಡಿಯಾ ಅಭಿಮಾನಿ ಬಳಗದ ಚಿತ್ತ ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಆಡುವ ಬಳಗದತ್ತ ಇದೆ.
ಇನ್ನು ಟೂರ್ನಿ ಆರಂಭಕ್ಕೂ ಮುನ್ನ ವಿವಿಧ ತಂಡಗಳ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದು ಟೂರ್ನಿಗಾಗಿ ತಾವು ರೂಪಿಸಿರುವ ಯೋಜನೆಗಳು ಹಾಗೂ ತಂಡದ ಕುರಿತಾಗಿ ಕೆಲ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. ಟೂರ್ನಿ ನಾಳೆ ಆರಂಭವಾಗುತ್ತಿರುವುದರಿಂದ ಇಂದು ( ಆಗಸ್ಟ್ 26 ) ಸಂಜೆ 7 ಗಂಟೆಗೆ ಪತ್ರಿಕಾ ಗೋಷ್ಠಿ ನಡೆಯಲಿದ್ದು ಟೀಮ್ ಇಂಡಿಯಾ ಪರ ಉಪನಾಯಕ ಕೆಎಲ್ ರಾಹುಲ್ ಈ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡು ಪತ್ರಕರ್ತರು ಕೇಳಲಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಿದ್ದಾರೆ.

ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಅವರಿಂದ ಪತ್ರಿಕಾಗೋಷ್ಠಿ
ಸದ್ಯ ಹೊರಬಿದ್ದಿರುವ ಮಾಹಿತಿ ಪ್ರಕಾರ ನಾಯಕ ರೋಹಿತ್ ಶರ್ಮಾ ಬದಲಾಗಿ ಉಪನಾಯಕ ಕೆಎಲ್ ರಾಹುಲ್ ಅವರು ಇಂದು ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಕೆಎಲ್ ರಾಹುಲ್ ಟೀಮ್ ಇಂಡಿಯಾದ ಕೆಲ ಯೋಜನೆಗಳು ಹಾಗೂ ಆಡುವ ಬಳಗದ ಕುರಿತಾಗಿ ಮಾಹಿತಿ ನೀಡುವ ನಿರೀಕ್ಷೆಯಿದೆ. ರಾಹುಲ್ ಈ ಪತ್ರಿಕಾಗೋಷ್ಠಿಯನ್ನು ಮುಗಿಸಿದ ನಂತರ ಟೀಮ್ ಇಂಡಿಯಾ ಆಟಗಾರರು ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸಗಳನ್ನು ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಟೀಮ್ ಇಂಡಿಯಾ ಆಡುವ ಬಳಗ ರಚಿಸುವುದೇ ದೊಡ್ಡ ತಲೆನೋವು
ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಯಾವ ಆಟಗಾರರಿಗೆ ಸ್ಥಾನ ನೀಡಬೇಕು ಎಂಬುದು ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಂಡದಲ್ಲಿ ರಿಷಭ್ ಪಂತ್, ದಿನೇಶ್ ಕಾರ್ತಿಕ್ ಹಾಗೂ ದೀಪಕ್ ಹೂಡಾ ಈ ಮೂವರಲ್ಲಿ ಇಬ್ಬರಿಗೆ ಮಾತ್ರ ಆಡುವ ಅವಕಾಶ ನೀಡಲು ಸಾಧ್ಯವಿದ್ದು, ಈ ಮೂವರ ಪೈಕಿ ಯಾರಿಗೆ ರೋಹಿತ್ ಶರ್ಮಾ ಬಳಗದಲ್ಲಿ ಸ್ಥಾನ ಲಭಿಸಲಿದೆ ಎಂಬುದು ಇದೀಗ ಪ್ರಶ್ನಾರ್ಥಕವಾಗಿದೆ ಹಾಗೂ ಈ ಆಯ್ಕೆಯನ್ನು ಮಾಡುವುದು ತಂಡದ ನಾಯಕ ಮತ್ತು ಕೋಚ್‌ಗೆ ತಲೆನೋವಾಗಿ ಪರಿಣಮಿಸಿದೆ.

ಟೀಮ್ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್, ಅಕ್ಷರ್ ಪಟೇಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications