"ವಿಶ್ವದರ್ಜೆಯ ಆಟವೆಂದರೆ ಇದು": ರೋಚಕ ಕದನದ ಬಗ್ಗೆ ಮೆಚ್ಚುಗೆ ಸೂಚಿಸಿದ ಮಾಜಿ ಕ್ರಿಕೆಟಿಗ

ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ತಂಡ ರೋಚಕ ಗೆಲುವು ಸಾಧಿಸಿದೆ. ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಮೇಲುಗೈ ಸಾಧಿಸಿದ ಶ್ರೀಲಂಕಾ ತಂಡ ಗೆಲುವು ಸಾಧಿಸಿದ್ದು ಮಾತ್ರವಲ್ಲದೆ ಎರಡನೇ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ನೀಡಿದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಹೇಲ ಜಯವರ್ಧನೆ ವಿಶ್ವದರ್ಜೆಯ ಆಟ ಇದು ಎಂದು ಕೊಂಡಾಡಿದ್ದಾರೆ. ಎರಡು ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಎರಡು ತಂಡಗಳು ಕೂಡ ಅಫ್ಘಾನಿಸ್ತಾನದ ವಿರುದ್ಧ ಸೋಲು ಅನುಭವಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಭರ್ಜರಿ ಪ್ರದರ್ಶನ ನೀಡಿದೆ. ಆದರೆ ಅಂತಿಮವಾಗಿ ಗೆಲುವಿನ ನಗು ಮಾತ್ರ ಶ್ರೀಲಂಕಾ ಪರವಾಗಿತ್ತು.

ಪಂದ್ಯಕ್ಕೂ ಮುನ್ನ ಕುತೂಹಲ ಕೆರಳಿಸಿದ್ದ ವಾಗ್ಬಾಣಗಳು
ಇನ್ನು ಈ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳ ಮಧ್ಯೆ ಶಬ್ದಗಳ ಸಮರವೇ ನಡೆದಿತ್ತು. ಬಾಂಗ್ಲಾದೇಶ ತಂಡ ವಿಶ್ವದರ್ಜೆಯ ಬೌಲರ್‌ಗಳನ್ನು ಹೊಂದಿಲ್ಲ ಎಂದು ಶ್ರೀಲಂಕಾ ನಾಯಕ ದಾಸುನ್ ಶನಕ ನೀಡಿರುವ ಹೇಳಿಕೆ ಬಾಂಗ್ಲಾದೇಶದ ಆಟಗಾರರನ್ನು ಕೆರಳಿಸಿತ್ತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದ ಕಡೆಯಿಂದಲೂ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿದ್ದವು. ಹೀಗಾಗಿ ಮೈದಾನದಲ್ಲಿ ಈ ಎರಡು ತಂಡಗಳ ನಡುವಿನ ಕದನ ಯಾವ ರೀತಿಯಾಗಿರಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಶ್ರೀಲಂಕಾ ತಂಡವೇ ಈ ಕದನದಲ್ಲಿ ಮೇಲುಗೈ ಸಾಧಿಸಿದೆ.

ಶಬ್ಬಾಷ್‌ಗಿರಿ ನೀಡಿದ ಜಯವರ್ದನೆ
ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ತಂಡ ನೀಡಿದ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಮಹೇಲ ಜಯವರ್ದನೆ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. "ಅದ್ಭುತವಾಗಿ ಆಡಿದ್ದೀರಿ ಹುಡುಗರೇ!! ಒತ್ತಡದ ಸಂದರ್ಭದಲ್ಲಿ ಗೆಲುವಿಗಾಗಿ ಅದ್ಭುತವಾಗಿ ತಿರುಗಿಬಿದ್ದಿದ್ದೀರಿ. ಇದೊಂದು ವಿಶ್ವದರ್ಜೆಯ ಪ್ರದರ್ಶನ ಎಂದು ಅಂಜಿಕೆಯಿಲ್ಲದೆ ಹೇಳಬಹುದು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಮಹೇಲ ಜಯವರ್ದನೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾ ಭರ್ಜರಿ ಪ್ರದರ್ಶನ
ಟಾಸ್ ಗೆದ್ದು ಬಾಂಗ್ಲಾದೇಶ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿದರು ಶ್ರೀಲಂಕಾ ನಾಯಕ ದಾಸುನ್ ಶನಕಾ. ಹೀಗಾಗಿ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ ತಂಡ ಉತ್ತಮ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಮೆಹಿದಿ ಹಸನ್, ಅಫಿಫ್ ಹುಸೈನ್ ಅವರ ಹೋರಾಟದ ಕಾರಣದಿಂದಾಗಿ ಬಾಂಗ್ಲಾದೇಶ ಉತ್ತಮ ಮೊತ್ತದ ಗುರಿ ನೀಡಲು ಸಾಧ್ಯವಾಯಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಬಾಂಗ್ಲಾದೇಶ 183 ರನ್‌ಗಳನ್ನು ಗಳಿಸಿತು.

ರೋಚಕ ಸೆಣೆಸಾಟ ನಡೆಸಿದ ಲಂಕಾ
ಇನ್ನು ಬಾಂಗ್ಲಾದೇಶ ನೀಡಿದ ಈ ದೊಡ್ಡ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ ಸ್ಪೋಟಕ ಪ್ರದರ್ಶನ ನೀಡಿದರು. ನಂತರ ಚರಿತ ಅಸಲಂಕಾ, ದನುಷ್ಕಾ ಗುಣತಿಲಕ, ಭಾನುಕಾ ರಾಜಪಕ್ಷ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು. ಆದರೆ ನಾಯಕ ದಾಸುನ್ ಶನಕ 45 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ನೆರವಾದರು. ಅಂತಿಮ ಹಂತದಲ್ಲಿ ಮತ್ತೆ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಸಿಲುಕಿತು ಶ್ರೀಲಂಕಾ. ಅಂತಿಮವಾಗಿ ಅಸಿತಾ ಫೆರ್ನಾಂಡೋ ಕೊನೆಯ ಓವರ್‌ನಲ್ಲಿ ಶ್ರೀಲಂಕಾ ತಂಡಕ್ಕೆ ಗೆಲುವು ಸಾರಿದರು.
ಶ್ರೀಲಂಕಾ ಪ್ಲೇಯಿಂಗ್ XI: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಾಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
ಬೆಂಚ್: ಅಶೇನ್ ಬಂಡಾರ, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮತೀಶ ಪತಿರಣ
ಬಾಂಗ್ಲಾದೇಶ ಪ್ಲೇಯಿಂಗ್ XI: ಸಬ್ಬಿರ್ ರೆಹಮಾನ್, ಮೊಸದ್ದೆಕ್ ಹೊಸೈನ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಜ್, ಅಫೀಫ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್
ಬೆಂಚ್: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹ್ಮದ್, ಪರ್ವೇಜ್ ಹುಸೇನ್ ಎಮನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications