ಭಾರತದ ಆ ಕ್ರಿಕೆಟಿಗನೆಂದರೆ ಟೀಮ್ ಇಂಡಿಯಾದಲ್ಲೂ ಯಾರಿಗೂ ಇಷ್ಟವಿಲ್ಲ ಎಂದ ಅಫ್ರಿದಿ!

ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿಯೂ ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿ ನಿನ್ನೆಯಷ್ಟೇ ( ಆಗಸ್ಟ್ 28 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಿದ್ದು, ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ 5 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿದೆ.
ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಈ ಹಣಾಹಣಿಗೂ ಮುನ್ನ ಹಲವಾರು ಮಾಜಿ ಕ್ರಿಕೆಟಿಗರು ಪಂದ್ಯದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಪಂದ್ಯದ ಕುರಿತು ಚರ್ಚೆ ನಡೆಸಲು ಉಭಯ ತಂಡಗಳ ಕೆಲ ಮಾಜಿ ಕ್ರಿಕೆಟಿಗರನ್ನು ಸುದ್ದಿ ವಾಹಿನಿಗಳು ಸಂಪರ್ಕಿಸಿ ಸಂದರ್ಶನ ನಡೆಸಿದ್ದವು. ಅದೇ ರೀತಿ ಪಾಕಿಸ್ತಾನದ ಸುದ್ದಿ ವಾಹಿನಿಯೊಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಸಂದರ್ಶನವನ್ನು ಮಾಡಿತ್ತು. ಈ ಸಂದರ್ಶನದಲ್ಲಿ ಟೀಮ್ ಇಂಡಿಯಾ ವಿರುದ್ಧದ ಹಳೆ ಪಂದ್ಯಗಳ ಮೆಲುಕು ಹಾಕಿದ ಶಾಹಿದ್ ಅಫ್ರಿದಿ ಎರಡೂ ತಂಡಗಳ ಆಟಗಾರರ ನಡುವೆ ಮೈದಾನದಲ್ಲಿ ನಡೆದ ಮಾತಿನ ಚಕಮಕಿಗಳ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರೊಬ್ಬರ ಕುರಿತು ಶಾಹಿದ್ ಅಫ್ರಿದಿ ಮಾತನಾಡಿ ಆತನನ್ನು ಕಂಡರೆ ಟೀಮ್ ಇಂಡಿಯಾದಲ್ಲಿಯೂ ಸಹ ಯಾರಿಗೂ ಆಗುವುದಿಲ್ಲ ಎಂದು ಹೇಳಿಕೆಯನ್ನು ನೀಡಿ ವಿವಾದವನ್ನು ಎಬ್ಬಿಸಿದ್ದಾರೆ. ಸದ್ಯ ಶಾಹಿದ್ ಅಫ್ರಿದಿ ಅವರ ಈ ಹೇಳಿಕೆ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಫ್ರಿದಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗೌತಮ್ ಗಂಭೀರ್ ಬಗ್ಗೆ ನಾಲಿಗೆ ಹರಿಬಿಟ್ಟ ಅಫ್ರಿದಿ
"ನಾನು ಯಾವುದೇ ಭಾರತೀಯ ಆಟಗಾರರೊಂದಿಗೆ ಜಗಳವಾಡಿದಂತಿಲ್ಲ. ಹೌದು, ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಗೌತಮ್ ಗಂಭೀರ್ ಜೊತೆ ಕೆಲ ವಾಗ್ವಾದಗಳು ನಡೆಯುತ್ತಿರುತ್ತವೆ. ಮತ್ತು ಗೌತಮ್ ಭಾರತೀಯ ತಂಡದಲ್ಲಿ ಯಾರೂ ಇಷ್ಟಪಡದ ಒಂದು ರೀತಿಯ ಪಾತ್ರ ಎಂದು ನಾನು ಭಾವಿಸುತ್ತೇನೆ" ಎಂದು ಮಾತನಾಡಿರುವ ಶಾಹಿದ್ ಅಫ್ರಿದಿ ಗಂಭೀರ್ ಅವರನ್ನು ಕಂಡರೆ ಟೀಮ್ ಇಂಡಿಯಾದಲ್ಲಿಯೇ ಯಾರಿಗೂ ಇಷ್ಟವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈದಾನದಲ್ಲಿ ಕಿತ್ತಾಡಿದ್ದ ಗಂಭೀರ್-ಅಫ್ರಿದಿ
ಶಾಹಿದ್ ಅಫ್ರಿದಿ ಹಾಗೂ ಗೌತಮ್ ಗಂಭೀರ್ ಇಬ್ಬರೂ ಸಹ ಹಾವು ಮುಂಗುಸಿ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಗಳವಾಡಿದ್ದ ಹಲವು ಉದಾಹರಣೆಗಳಿವೆ. ಇನ್ನು ಈ ಇಬ್ಬರೂ ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಮೈದಾನದಲ್ಲಿಯೂ ಸಹ ಪರಸ್ಪರ ಜಗಳವಾಡಿದ್ದರು. 2007ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸವನ್ನು ಕೈಗೊಂಡು ಏಕದಿನ ಸರಣಿಯನ್ನು ಆಡುತ್ತಿದ್ದಾಗ ಕಾನ್‌ಪುರ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ವೇಳೆ ಗೌತಮ್ ಗಂಭೀರ್ ಹಾಗೂ ಶಾಹಿದ್ ಅಫ್ರಿದಿ ನಡುವೆ ಮೈದಾನದಲ್ಲೇ ವಾಗ್ವಾದ ನಡೆದಿತ್ತು. ಅಂದು ಶುರುವಾದ ಈ ಇಬ್ಬರ ನಡುವಿನ ಕಿತ್ತಾಟ ಇಂದಿಗೂ ಸಹ ಮುಂದುವರೆಯುತ್ತಲೇ ಇದೆ.

ಅಫ್ರಿದಿ ಹೇಳಿಕೆಯನ್ನು ಒಪ್ಪದ ಭಾರತೀಯರು
ಇನ್ನು ಅಫ್ರಿದಿ ಅವರ ಈ ವಿವಾದಾತ್ಮಕ ಹೇಳಿಕೆಗೆ ಸ್ಪಂದಿಸಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಗೌತಮ್ ಗಂಭೀರ್ ಪರ ಬ್ಯಾಟ್ ಬೀಸಿದ್ದಾರೆ. ಗೌತಮ್ ಗಂಭೀರ್ ವಿಶ್ವಕಪ್ ಹೀರೊ, ಅವರ ಮೇಲೆ ಟೀಮ್ ಇಂಡಿಯಾದ ಪರ ಆಡಿರುವ ಎಲ್ಲಾ ಆಟಗಾರರಿಗೂ ಗೌರವವಿದೆ, ನೀವು ಹೇಳಿದ ರೀತಿ ಅವರನ್ನು ಕಂಡರೆ ಯಾರಿಗೂ ಇಷ್ಟವಿಲ್ಲದಿದ್ದರೆ ಅಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ಗಂಭೀರ್ ಅವರಿಗೆ ಲಭಿಸುತ್ತಿರಲಿಲ್ಲ, ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುತ್ತಿರಲಿಲ್ಲ ಹಾಗೂ ಐಪಿಎಲ್‌ನಲ್ಲಿ ನಾಯಕನಾಗಲೂ ಸಹ ಆಗುತ್ತಿರಲಿಲ್ಲ ಎಂದು ಅಫ್ರಿದಿಗೆ ಭಾರತ ಕ್ರಿಕೆಟ್ ಪ್ರೇಮಿಗಳು ತಿರುಗೇಟು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications