ಏಷ್ಯಾ ಕಪ್ 2022: ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಪಾಕ್ ದಿಗ್ಗಜ ಇನ್ಜಮಾಮ್ ಹೇಳಿದ್ದಿಷ್ಟು!

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತಿದೆ. ಫಾರ್ಮ್ ಕೊರತೆಯಿಂದ ವಿರಾಮ ಪಡೆದು ಬಂದ ವಿರಾಟ್ ಕೊಹ್ಲಿ ಏಷ್ಯಾ ಕಪ್ ಮೂಲ ಕಮ್‌ಬ್ಯಾಕ್ ಮಾಡಿದ್ದು ಈ ಪಂದ್ಯದಲ್ಲಿ 34 ಎಸೆತಗಳಲ್ಲಿ ಕೊಹ್ಲಿ 3 ರನ್‌ಗಳನ್ನು ಗಳಿಸಿದ್ದರು. ಈ ಬಗ್ಗೆ ಮಾತನಾಡಿದ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಆತ್ಮವಿಶ್ವಾಸದಲ್ಲಿದ್ದಂತೆ ಕಂಡು ಬರಲಿಲ್ಲ ಎಂದಿದ್ದಾರೆ.
ಪಾಕಿಸ್ತಾನದ ವಿರುದ್ಧ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಬಹುತೇಕರ ಕಣ್ಣು ವಿರಾಟ್ ಕೊಹ್ಲಿ ಮೇಲೆ ನೆಟ್ಟಿತ್ತು. ಫಾರ್ಮ್ ಕೊರತೆಯ ಕಾರಣದಿಂದಾಗಿ ಕೊಹ್ಲಿ ವಿಶ್ರಾಂತಿ ಪಡೆದು ಕಮ್‌ಬ್ಯಾಕ್ ಮಾಡಿದ್ದರು. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 76 ರನ್‌ಗಳನ್ನು ಮಾತ್ರವೇ ಗಳಿಸಿದ್ದರು. 20ಕ್ಕಿಂತ ಹೆಚ್ಚು ರನ್‌ಗಳನ್ನು ಒಂದು ಬಾರಿಯೂ ಗಳಿಸಲು ಸಾಧ್ಯವಾಗಿರಲಿಲ್ಲ. ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಎರಡನೇ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡ ಕಾರಣ ಮೂರನೇ ಕ್ರಮಾಂಕದಲ್ಇ ಕಣಕ್ಕಿಳಿದರೂ ಹೊಸ ಚೆಂಡನ್ನು ಎದುರಿಸಿದ ಕೊಹ್ಲಿ ಎಚ್ಚರಿಕೆಯಿಂದ ಆಡುವ ಮೂಲಕ ತಂಡ ಕುಸಿತಕ್ಕೊಳಗಾಗದಂತೆ ಮಾಡುವಲ್ಲಿ ಯಶಸ್ವಿಯಾದರು.

ಕೊಹ್ಲಿ ಮೇಲೆ ಹೆಚ್ಚಿನ ಒತ್ತಡವಿದೆ
ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಮಾತನಾಡಿದ್ದು "ವಿರಾಟ್ ಕೊಹ್ಲಿ ಮೇಲೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ಒತ್ತಡವಿತ್ತು. ಸಾಮಾನ್ಯವಾಗಿ ಸೆಟ್ ಆಗಿರವಂತಾ ಆಟಗಾರನನ್ನು ವಿಕೆಟ್ ಪಡೆಯುವುದು ಸುಲಭವಿಲ್ಲ. ಆದರೆ ನನಗೆ ಅಚ್ಚರೊಇಯಾದ ಸಂಗತಿಯೆಂದರೆ ಕೊಹ್ಲಿ ಸೆಟ್ ಆಗಿದ್ದರೂ ಕೂಡ ಕ್ರೀಸ್‌ನಲ್ಲಿ ಆತ್ಮವಿಶ್ವಾಸದಿಂದ ಕಾಣಿಸಲಿಲ್ಲ" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಭಾರತದ ಮಧ್ಯಮ ಕ್ರಮಾಂಕದ ಬಗ್ಗೆ ಹೊಗಳಿದ ಇನ್ಜಿ
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬಲವನ್ನು ಪಾಕಿಸ್ತಾನದ ಮಾಜಿ ನಾಯಕ ಶ್ಲಾಘಿಸಿದ್ದಾರೆ. "ಭಾರತದ ರ್ಮಧ್ಯಮ ಕ್ರಮಾಂಕ ಹಾಗೂ ಕೆಳ ಮಧ್ಯಮ ಕ್ರಮಾಂಕ ಬಹಳ ಬಲಿಷ್ಠವಾಗಿದೆ. ಉಳಿದೆಲ್ಲಾ ತಂಡಗಳಿಗಿಂತ ಭಾರತ ಭಿನ್ನ ಎನಿಸಿಕೊಳ್ಳುವುದು ಈ ಕಾರಣದಿಂದಾಗಿಯೇ. ಆದರೆ ನನಗೆ ಅಚ್ಚರಿಯಾಗಿದ್ದು ರಿಷಭ್ ಪಂತ್‌ಗೆ ಬೆಂಚ್ ಕಾಯುವಂತೆ ಮಾಡಿದ ನಿರ್ಧಾರ. ಪಂತ್, ಪಾಂಡ್ಯ ಹಾಗೂ ಜಡೇಜಾ ಅವರ ಸಂಯೋಜನೆ ಅತ್ಯಂತ ಅಪಾಯಕಾರಿ. ಒಂದು ಓವರ್‌ನಲ್ಲಿ 11 ರನ್‌ಗಳನ್ನು ಈ ಪಿಚ್‌ನಲ್ಲಿ ಬೆನ್ನಟ್ಟುವುದು ಅತ್ಯಂತ ಸವಾಲಿನ ಕೆಲಸ. ಆದರೆ ಅದನ್ನು ಭಾರತದ ಕೆಲ ಕ್ರಮಾಂಕ ಉತ್ತಮವಾಗಿ ನಿಭಾಯಿಸಿತು" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಪಾಕಿಸ್ತಾನದ ತಂಡದಲ್ಲಿರುವ ಹುಳುಕು ವಿವರಿಸಿದ ಇನ್ಜಮಾಮ್
ಇನ್ನು ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಯ ಬಗ್ಗೆ ಬೊಟ್ಟು ಮಾಡಿದ್ದಾರೆ. "ಪಾಕಿಸ್ತಾನದ ಆಯ್ಕೆ ಸಮಿತಿ ಹಾಗೂ ಮ್ಯಾನೇಜ್‌ಮೆಂಟ್ ಮಧ್ಯಮ ಕ್ರಮಾಂಕದ ವಿಚಾರವಾಗಿ ಏನಾದರೂ ಕ್ರಮವನ್ನು ತೆಗೆದುಕೊಳ್ಳಬೇಕಿದೆ. ಮೂರನೇ ಕ್ರಮಾಂಕದಲ್ಲಿ ಫಾಕರ್ ಜಮಾನ್ ವಿಕೆಟ್ ಕಳೆದುಕೊಂಡ ಬಳಿಕ ತಂಡ ಕುಸಿಯಲು ಆರಂಭಿಸುತ್ತದೆ. ನಾಲ್ಕನೇ ಹಾಗೂ ಐದನೇ ಕ್ರಮಾಂಕಕ್ಕೆ ಸೂಕ್ತವಾದ ಹಾಗೂ ಬ್ಯಾಟರ್‌ನನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಆಸಿಫ್ ಅಲಿ ಹಾಗೂ ಕುಶ್ದಿಲ್ ಕೆಳ ಮಧ್ಯಮ ಕ್ರಮಾಂಕಕ್ಕೆ ಸೂಕ್ತವೆನಿಸುತ್ತಾರೆ" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಮೊದಲ ಪಂದ್ಯದಲ್ಲಿ ಭಾರತಕ್ಕೆ ಗೆಲುವು
ಪಾಕಿಸ್ತಾನದ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 35 ರನ್ ಗಳಿಸಿದರು. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮೊದಲ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡಾಗ ರೋಹಿತ್ ಶರ್ಮಾ ಜೊತೆಗೂಡಿ ನಿರ್ಣಾಯಕ ಆಟವನ್ನು ಪ್ರದರ್ಶಿಸಿದರು. ಆದರೆ ನಾಯಕ ರೋಹಿತ್ ಶರ್ಮಾ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಆಟಗಾರರಿಂದ ಅದ್ಭುತ ಪ್ರದರ್ಶನ ಬಂದಿದ್ದು ತಂಡ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications