ವಿರಾಟ್ ಕೊಹ್ಲಿಯ ಬದ್ಧತೆ ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ ಎಂದ ರಶೀದ್ ಖಾನ್

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ರಶೀದ್ ಖಾನ್ ಅದ್ಭುತ ಪ್ರತಿಭಾನ್ವಿತ ಆಟಗಾರ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ವಿಶ್ವಾದ್ಯಂತ ಲೀಗ್ ಕ್ರಿಕೆಟ್‌ಗಳಲ್ಲಿ ಭಾಗಿಯಾಗುತ್ತಿರುವ ರಶೀದ್ ಖಾನ್ ಐಪಿಎಲ್‌ನಲ್ಲಿಯೂ ಕಳೆದ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಅತ್ಯುತ್ತಮ ಆಟಗಾರರನ್ನು ಎದುರಿಸಿರುವ ಉತ್ತಮ ಅನುಭವ ಪಡೆದುಕೊಂಡಿದ್ದಾರೆ ಅಫ್ಘನ್‌ನ ಈ ಆಲ್‌ರೌಂಡರ್. ಈ ಬಾರಿ ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಎದುರಿಸುವಾಗಿ ಈ ಅನುಭವವನ್ನು ಬಳಸಿಕೊಂಡು ಭಾರತಕ್ಕೆ ಕಠಿಣ ಪೈಪೋಟಿ ನಿಡುವ ವಿಶ್ವಾಸದಲ್ಲಿದ್ದಾರೆ ರಶೀದ್ ಖಾನ್.
ಈ ಟೂರ್ನಿಯ ಆರಂಭಕ್ಕೂ ಮುನ್ನ ರಶೀದ್ ಖಾನ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು ಸಾಕಷ್ಟು ವಿಚಾರಗಳನ್ನು ಹಂಚಿಕೊಮಡಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ವಿಚಾರವಾಗಿಯೂ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಕೊಹ್ಲಿ ಫಾರ್ಮ್ ಕಳೆದುಕೊಂಡಂತೆ ಅನಿಸುತ್ತಿಲ್ಲ
ರಶೀದ್ ಖಾನ್ ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿಯ ವಿಚಾರವಾಗಿ ಇತ್ತೀಚಿನ ಚರ್ಚೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ವಿರಾಟ್ ಕೊಹ್ಲಿ ಅವರು ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಅವರು ಅದ್ಭುತವಾದ ಹೊಡೆತಗಳನ್ನು ಬಾರಿಸುತ್ತಿದ್ದಾರೆ. ಅವರ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದೆ. ಪ್ರತಿ ಬಾರಿಯೂ ಅವರು ಮೈದಾನಕ್ಕಿಳಿದಾಗಲೂ ಜಬರು ಅವರು ಶತಕವನ್ನೇ ಬಾರಿಸಬೇಕು ಎಂಬುದನ್ನು ನಿರೀಕ್ಷಿಸುತ್ತಿದ್ದಾರೆ. ಅವರ ಇತ್ತೀಚಿನ ಟೆಸ್ಟ್ ಪಂದ್ಯಗಳ ಇನ್ನಿಂಗ್ಸ್‌ಗಳನ್ನೇ ಗಮನಿಸಿದರೂ ಅವರು ಕಠಿಣ ಸಂದರ್ಭವನ್ನು ಎದುರಿಸುತ್ತಿದ್ದರೂ ಅವರ ಬ್ಯಾಟ್‌ನಿಂದ 50, 60 ಅಥವಾ 70 ರನ್‌ಗಳು ಬರುತ್ತಲೇ ಇದೆ. ಸಾಮಾನ್ಯ ಆಟಗಾರರು ಇಷ್ಟು ರನ್‌ಗಳಿಸಿದರೆ ಆತ ಫಾರ್ಮ್‌ನಲ್ಲಿದ್ದಾರೆ ಎನ್ನುತ್ತಿದ್ದರು. ಆದರೆ ವಿರಾಟ್ ಕೊಹ್ಲಿ ವಿಚಾರವಾಗಿ ನಿರೀಕ್ಷೆಗಳು ಬಹಳ ಹೆಚ್ಚಾಗಿದೆ" ಎಂದಿದ್ದಾರೆ ರಶೀದ್ ಖಾನ್.

ಐಪಿಎಲ್ ಸಮಯದಲ್ಲಿ ಸ್ಪೂರ್ತಿ ಪಡೆದುಕೊಂಡಿದ್ದೆ
ಮುಂದುವರಿದು ಮಾತನಾಡಿದ ರಶೀದ್ ಖಾನ್ ಐಪಿಎಲ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. "ಐಪಿಎಲ್ ಸಂದರ್ಭದಲ್ಲಿ ನಾನು ಅವರ ಜೊತೆಗೆ ಮಾತನಾಡಿದ್ದೆ. ಅವರು ಯಾವತ್ತಿಗೂ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ನನಗೆ ಅನಿಸಿಲ್ಲ. ಮ್ಯಾಚ್‌ಗೆ ಅವರು ಸಿದ್ಧವಾಗುತ್ತಿದ್ದ ರೀತಿಯಿಮದಾಗಿ ನಾವೆಲ್ಲಾ ಸ್ಪೂರ್ತಿ ಪಡೆಯುತ್ತಿದ್ದೆವು. ಆ ಸಂದರ್ಭದಲ್ಲಿ ನಾವು ಕೂಡ ಮತ್ತಷ್ಟು ನಮ್ಮ ಪ್ರಯತ್ನಗಳನ್ನು ನಡೆಸಬೇಕಿದೆ ಎಂದು ನಮ್ಮನ್ನು ನಾವೇ ಪ್ರೋತ್ಸಾಹಿಸಿಕೊಂಡೆವು" ಎಂದಿದ್ದಾರೆ ರಶೀದ್ ಖಾನ್.

ಅವರ ಅಭ್ಯಾಸವನ್ನು ಕಂಡು ದಂಗಾಗಿದ್ದೆ
ನಂತರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಕಠಿಣ ಪರಿಶ್ರಮವನ್ನು ವಹಿಸುತ್ತಿದ್ದ ವಿಚಾರವಾಗಿಯೂ ರಶೀದ್ ಖಾನ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ರೀತಿಯಿಂದಾಗಿ ತಾನು ದಿಗ್ಭ್ರಮೆಗೊಂಡಿದ್ದೆ ಎಂಬುದನ್ನು ಹೇಳಿದ್ದಾರೆ. "ಐಪಿಎಲ್‌ನಲ್ಲಿ ನಮ್ಮ ತಂಡ ಅವರ ತಂಡದ ವಿರುದ್ಧ ಆಡಬೇಕಿತ್ತು. ಅವರು ನೆಟ್ಸ್‌ನಲ್ಲಿ ಎಷ್ಟು ಸಮಯ ಕಾಲ ಕಳೆಯುತ್ತಾರೆ ಎಂಬುದನ್ನು ನಾನು ನೋಡುತ್ತಿದ್ದೆ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಅವರು ಎರಡುಗಂಟೆಗಳಿಗೂ ಅಧಿಕ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು. ಅದನ್ನು ಕಂಡು ನಾನು ದಂಗಾಗಿದ್ದೆ. ನಮ್ಮ ನೆಟ್ ಅಭ್ಯಾಸ ಮುಕ್ತಾಯವಾಗಿತ್ತು. ಆದರೆ ಅವರಿನ್ನೂ ಅಭ್ಯಾಸವನ್ನು ಮುಂದುವರಿಸಿದ್ದರು" ಎಂದು ವಿವರಿಸಿದ್ದಾರೆ ರಶೀದ್ ಖಾನ್.
ಅಫ್ಘಾನಿಸ್ತಾನ ತಂಡ ಏಷ್ಯಾ ಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಮೊಹಮ್ಮದ್ ನಬಿ ತಂಡವನ್ನು ಮುನ್ನಡೆಸಲಿದ್ದಾರೆ.
ಅಪ್ಘಾನಿಸ್ತಾನ ತಂಡ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಜದ್ರಾನ್, ಅಫ್ಸರ್ ಝಜೈ, ಅಜ್ಮತುಲ್ಲಾ ಒಮರ್ಝೈ, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ, ಹಶ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಇಬ್ರಾಹಿಂ ಜದ್ರಾನ್, ಕರೀಮ್ ಜನತ್, ಮುಜೀಬ್ ಉರ್ ರೆಹಮಾನ್, ನಜಿಬುಲ್ಲಾ ಝದ್ರಾನ್, ನವೀನ್ ಉಲ್ ಹಕ್, ನೂರ್ ಅಹ್ಮದ್, ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications