ಆ ಒಬ್ಬ ಆಟಗಾರ ಇಲ್ಲದಿದ್ದರೆ ಭಾರತ ತಂಡ ಸಮತೋಲನ ಕಳೆದುಕೊಳ್ಳುತ್ತದೆ: ರವಿ ಶಾಸ್ತ್ರಿ

ಏಷ್ಯಾ ಕಪ್‌ನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಾಕಿಸ್ತಾನ ತಂಡ ಈಗಾಗಲೇ ದುಬೈಗೆ ತಲುಪಿದ್ದು ಈ ಟೂರ್ನಿಗೆ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಭಾರತ ತಂಡ ಕೂಡ ಈ ಟೂರ್ನಿಯಲ್ಲಿ ಭಾಗಿಯಾಗಲು ದುಬೈಗೆ ಹಾರಲು ಸಜ್ಜಾಗಿದ್ದು ಮುಂದಿನ ಶನಿವಾರದಿಂದ ಟೂರ್ನಿ ಆರಂಭವಾಗಲಿದೆ.
ಈ ಸಂದರ್ಭದಲ್ಲಿ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ತಂಡದ ಬಗ್ಗೆ ಕುತೂಹಲಕಾರಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷದ ವಿಶ್ವಕಪ್‌ನಲ್ಲಿ ಭಾರತ ತಮಡ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್‌ಅನ್ನು ಕಳೆದುಕೊಂಡಿತ್ತು. ಇದು ತಂಡಕ್ಕೆ ಹಿನ್ನಡೆಯುಂಟು ಮಾಡಿದ್ದು ನಿಜ ಎಂದಿದ್ದಾರೆ. ಗುಣಮಟ್ಟದ ವಿಚಾರಕ್ಕೆ ಬಂದರೆ ಆತನ ಸನಿಹಕ್ಕೂ ಯಾರೂ ಬರಲಾರರು ಎಂದಿದ್ದಾರೆ ರವಿ ಶಾಸ್ತ್ರಿ. ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿದ್ದರಾದರೂ ಫಿಟ್‌ನೆಸ್ ಕಾರಣದಿಂದಾಗಿ ಕೇವಲ ಪೂರ್ಣಪ್ರಮಾಣದ ಬ್ಯಾಟರ್ ಆಗಿ ಮಾತ್ರವೇ ಕಾಣಿಸಿಕೊಂಡಿದ್ದರು.
28ರ ಹರೆಯದ ಹಾರ್ದಿಕ್ ಪಾಂಡ್ಯ ಈ ವರ್ಷ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದು ಸಂಪೂರ್ಣ ಫಿಟ್‌ನೆಸ್‌ನೊಮದಿಗೆ ಅದ್ಭುತ ಪ್ರದರ್ಶನ ನಿಡುತ್ತಾ ಅಬ್ಬರಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಅಮೋಘ ಫಾರ್ಮ್ ಪ್ರದರ್ಶಿಸಿರುವ ಹಾರ್ದಿಕ್ ಪಾಂಡ್ಯ ಭಾರತ ತಂಡದ ಪರವಾಗಿ ಈ ಫಾರ್ಮ್ ಮುಂದುವರಿದ್ದಾರೆ. ಈ ಮೂಲಕ ಮುಂದಿನ ಒ್ರಮುಖ ಎರಡು ಟೂರ್ನಿಗಳಿಗೆ ಹಾರ್ದಿಕ್ ಸಂಪೂರ್ಣವಾಗಿ ಸಜ್ಜಾಗಿದ್ದಾರೆ.
ಆತನಿಂದಾಗು ತಂಡದಲ್ಲಿ ಸಮತೋಲನ: ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದ್ದಾರೆ ಮಾಜಿ ಕೋಚ್ ರವಿ ಶಾಸ್ತ್ರಿ. ಹಾರ್ದಿಕ್ ಒಆಂಡ್ಯ ಅವರೇನಾದರೂ ಭಾರತ ತಂಡದಿಂದ ಹೊರಗುಳಿದರೆ ತಂಡ ಸಮತೋಲನವನ್ನೇ ಕಳೆದುಕೊಳ್ಳುತ್ತದೆ. ಅವರು ಅಷ್ಟು ಪ್ರಮುಖವಾದ ಆಟಗಾರನಾಗಿದ್ದಾರೆ. ನೀವು ಹೆಚ್ಚುವರಿ ಬ್ಯಾಟರ್‌ನೊಂದಿಗೆ ಆಡಬೇಕಾ ಅಥವಾ ಹೆಚ್ಚುವರಿ ಬೌಲರ್‌ನೊಂದಿಗೆ ಕಣಕ್ಕಿಳಿಯಬೇಕಾ ಎಂಬ ಗೊಂದಲ ಮೂಡುತ್ತದೆ" ಎಂದು ವಿವರಿಸಿದ್ದಾರೆ ರವಿ ಶಾಸ್ತ್ರಿ.
ಕಳೆದ ವರ್ಷ ಅತನನ್ನು ಮಿಸ್ ಮಾಡಿಕೊಂಡೆವು: ಮುಂದುವರಿದು ಮಾತನಾಡಿದ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಅಸಾಧ್ಯವಾಗಿದ್ದ ಕಾರಣ ನಾವು ಆತನನ್ನು ಸಾಕಷ್ಟು ಮಿಸ್ ಮಾಡಿಕೊಂಡೆವು ಎಂದಿದ್ದಾರೆ. ಆ ಕ್ರಮಾಂಕದಲ್ಲಿ ಯಾರೂ ಕೂಡ ಆತನ ಗುಣಮಟ್ಟದ ಸನಿಹಕ್ಕೂ ಬರಲಾರರು ಎಂದಿದ್ದಾರೆ. ರವಿ ಶಾಸ್ತ್ರಿ ಕಳೆದ ವರ್ಷದ ವಿಶ್ವಕಪ್‌ನಲ್ಲಿ ಭಾರತ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications