IND vs PAK: ಸೂಪರ್ 4ನಲ್ಲಿ ಜಡೇಜಾ ಬದಲು ಈತನಿಗೆ ಸ್ಥಾನ ನೀಡಿದ್ರೆ ಭಾರತಕ್ಕೆ ಹಿನ್ನಡೆ ಖಚಿತ!

ಇಂದು ( ಸೆಪ್ಟೆಂಬರ್ 4 ) ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೂಪರ್ 4 ಸುತ್ತಿನ ಪಂದ್ಯ ಜರುಗಲಿದೆ. ಉಭಯ ತಂಡಗಳಿಗೂ ಇದು ಈ ಸುತ್ತಿನ ಪ್ರಥಮ ಪಂದ್ಯವಾಗಿದ್ದು, ಈ ಬಾರಿಯ ಏಷ್ಯಾಕಪ್ ಟೂರ್ನಿಯ ಪರಸ್ಪರ ದ್ವಿತೀಯ ಮುಖಾಮುಖಿಯಾಗಿದೆ. ಗ್ರೂಪ್ ಹಂತದಲ್ಲಿ ಇತ್ತಂಡಗಳು ಪ್ರಥಮ ಬಾರಿಗೆ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದಾಗ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 5 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿತ್ತು.
ಹೀಗಾಗಿ ಈ ಬಾರಿಯ ಮುಖಾಮುಖಿಯಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ರೋಹಿತ್ ಶರ್ಮಾ ಬಳಗಕ್ಕೆ ಸೋಲುಣಿಸಿ ಗ್ರೂಪ್ ಹಂತದಲ್ಲಿನ ಸೋಲಿನ ಪ್ರತೀಕಾರವನ್ನು ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ರೋಹಿತ್ ಶರ್ಮಾ ಪಡೆ ಲೀಗ್ ಹಂತದಲ್ಲಿನ ಪಂದ್ಯದ ರೀತಿಯೇ ಈ ಪಂದ್ಯದಲ್ಲಿಯೂ ಪಾಕ್ ತಂಡವನ್ನು ಕಟ್ಟಿಹಾಕುವ ಯೋಜನೆಯಲ್ಲಿದೆ.
ಇನ್ನು ಸೂಪರ್ 4 ಸುತ್ತು ಆರಂಭಗೊಳ್ಳುವ ಮುನ್ನವೇ ಪಾಕ್ ತಂಡದ ಬೌಲರ್ ಶಹನವಾಜ್ ದಹಾನಿ ಟೀಮ್ ಇಂಡಿಯಾ ವಿರುದ್ಧದ ಈ ಪಂದ್ಯಕ್ಕೆ ಅಲಭ್ಯರಾಗಿದ್ದರೆ, ಟೀಮ್ ಇಂಡಿಯಾದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಉಭಯ ತಂಡಗಳು ಈ ಇಬ್ಬರ ಬದಲಿ ಆಟಗಾರರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವಲ್ಲಿ ನಿರತವಾಗಿದ್ದು, ಟೀಮ್ ಇಂಡಿಯಾ ರವೀಂದ್ರ ಜಡೇಜಾ ಬದಲು ಯಾವ ಆಟಗಾರರನ್ನು ಆರಿಸಲಿದೆ ಎಂಬ ಕುತೂಹಲ ಮೂಡಿದೆ.

ಜಡೇಜಾ ಬದಲಿ ಸ್ಥಾನಕ್ಕೆ 3 ಆಯ್ಕೆಗಳು
ಏಷ್ಯಾ ಕಪ್ ಟೂರ್ನಿಯಿಂದ ರವಿಂದ್ರ ಜಡೇಜಾ ಹೊರಬಿದ್ದಿರುವ ಕಾರಣ ಜಡೇಜಾ ಬದಲಿ ಆಟಗಾರನಾಗಿ ಸೇರ್ಪಡೆಗೊಂಡಿರುವ ಅಕ್ಷರ್ ಪಟೇಲ್ ಜತೆಗೆ ರಿಷಭ್ ಪಂತ್ ಹಾಗೂ ದೀಪಕ್ ಹೂಡಾ ಈ ಮೂವರು ಜಡೇಜಾ ಸ್ಥಾನ ತುಂಬಲು ಅರ್ಹ ಆಟಗಾರರಾಗಿದ್ದಾರೆ. ಆದರೆ ಈ ಮೂವರಲ್ಲಿ ಕೇವಲ ಓರ್ವರಿಗೆ ಮಾತ್ರ ಸ್ಥಾನ ನೀಡಬಹುದಾಗಿದ್ದು, ಇದು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಜಡೇಜಾ ಬದಲು ಪಂತ್ ಆಯ್ಕೆ ಮಾಡಿದರೆ ಭಾರತಕ್ಕೆ ಹಿನ್ನಡೆ!
ಇನ್ನು ರವೀಂದ್ರ ಜಡೇಜಾ ಬದಲಾಗಿ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಿದರೆ ಟೀಮ್ ಇಂಡಿಯಾಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎನ್ನಬಹುದು. ಏಕೆಂದರೆ ರವೀಂದ್ರ ಜಡೇಜ ಆಲ್ ರೌಂಡರ್ ಆಟಗಾರನಾಗಿದ್ದು, ಆ ಸ್ಥಾನಕ್ಕೆ ಪಂತ್ ಅವರನ್ನು ಆಯ್ಕೆ ಮಾಡಿದರೆ ಕೇವಲ ಬ್ಯಾಟಿಂಗ್ ಜವಾಬ್ದಾರಿಯನ್ನು ಮಾತ್ರ ಪಂತ್ ನಿರ್ವಹಿಸಲಿದ್ದು, ಟೀಮ್ ಇಂಡಿಯಾಗೆ ಓರ್ವ ಬೌಲರ್ ಕೊರತೆ ಉಂಟಾಗಲಿದೆ. ಅದರಲ್ಲಿಯೂ ದುಬೈ ಕ್ರೀಡಾಂಗಣದ ಪಿಚ್ ಸ್ಪಿನ್ ಪಿಚ್ ಆಗಿರುವುದರಿಂದ ರವೀಂದ್ರ ಜಡೇಜಾ ರೀತಿಯ ಸ್ಪಿನ್ನರ್ ಸ್ಥಾನಕ್ಕೆ ಸ್ಪಿನ್ ಆಲ್ ರೌಂಡರ್ ಬೇಕಾಗಿದ್ದು, ಇದನ್ನು ಕಡೆಗಣಿಸಿ ರಿಷಭ್ ಪಂತ್ ಅವರಿಗೆ ಸ್ಥಾನ ನೀಡಿದರೆ ತಂಡಕ್ಕೆ ಹೊಡೆತ ಬೀಳಬಹುದು.

ಅಕ್ಷರ್ ಪಟೇಲ್ ಅತ್ಯುತ್ತಮ ಆಯ್ಕೆ
ಇನ್ನು ರಿಷಭ್ ಪಂತ್ ಅವರನ್ನು ಹೊರತುಪಡಿಸಿ ರವೀಂದ್ರ ಜಡೇಜಾ ಸ್ಥಾನಕ್ಕೆ ಲಭ್ಯವಿರುವ ಇಬ್ಬರು ಆಟಗಾರರೆಂದರೆ ಅದು ದೀಪಕ್ ಹೂಡ ಹಾಗೂ ಅಕ್ಷರ್ ಪಟೇಲ್. ಈ ಇಬ್ಬರೂ ಸಹ ಸ್ಪಿನ್ ಆಲ್ ರೌಂಡರ್ ಆಟಗಾರರಾಗಿದ್ದು, ಜಡೇಜಾ ಬದಲಾಗಿ ಈ ಪಂದ್ಯದಲ್ಲಿ ಕಣಕ್ಕಿಳಿಯಲು ಸರಿಯಾದ ಆಯ್ಕೆ ಎನ್ನಬಹುದು. ದೀಪಕ್ ಹೂಡಾ ಬಲಗೈ ಆಟಗಾರನಾಗಿರುವ ಕಾರಣ ಅಕ್ಷರ್ ಪಟೇಲ್ ರವೀಂದ್ರ ಜಡೇಜಾ ಸ್ಥಾನವನ್ನು ಬಹುತೇಕ ತುಂಬಬಲ್ಲ ಸರಿಯಾದ ಆಯ್ಕೆ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications