ಆ ಒಂದು ವರ್ಷ ಏಷ್ಯಾಕಪ್ ಆಡಲೇ ಇಲ್ಲ ಟೀಮ್ ಇಂಡಿಯಾ; ಕಾರಣ ಶ್ರೀಲಂಕಾ!

1984ರಲ್ಲಿ ಆರಂಭವಾದ ಏಷ್ಯಾಕಪ್ ಟೂರ್ನಿ ಕಳೆದ 2018ರ ಆವೃತ್ತಿಯವರೆಗೂ ಒಟ್ಟು 14 ಬಾರಿ ನಡೆದಿದ್ದು, 13 ಬಾರಿ ಏಕದಿನ ಮಾದರಿಯಲ್ಲಿ ಹಾಗೂ 1 ಬಾರಿ ಟಿ ಟ್ವೆಂಟಿ ಮಾದರಿಯಲ್ಲಿ ಜರುಗಿದೆ. 2014ರ ಆವೃತ್ತಿಯವರೆಗೂ ಸಂಪೂರ್ಣವಾಗಿ ಏಕದಿನ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯನ್ನು ಏಕದಿನ ಹಾಗೂ ಟಿ ಟ್ವೆಂಟಿ ಮಾದರಿ ಎರಡರಲ್ಲೂ ನಡೆಸಬೇಕೆಂಬ ತೀರ್ಮಾನವನ್ನು 2015ರಲ್ಲಿ ನಡೆಸಿದ ಸಭೆಯಲ್ಲಿ ಏಷ್ಯಾಕಪ್ ಕೌನ್ಸಿಲ್ ಕೈಗೊಂಡಿತ್ತು.
ಹೀಗೆ ಏಷ್ಯಾಕಪ್‌ನ ಒಂದು ಆವೃತ್ತಿಯನ್ನು ಟಿ ಟ್ವೆಂಟಿ ಮಾದರಿಯಲ್ಲಿ ನಡೆಸಿದರೆ ಮತ್ತೊಂದು ಆವೃತ್ತಿಯನ್ನು ಏಕದಿನ ಮಾದರಿಯಲ್ಲಿ ನಡೆಸಬೇಕೆಂಬ ತೀರ್ಮಾನವನ್ನು ಕೈಗೊಂಡ ನಂತರ 2016ರ ಏಷ್ಯಾಕಪ್ ಆವೃತ್ತಿಯನ್ನು ಟಿ ಟ್ವೆಂಟಿ ಮಾದರಿಯಲ್ಲಿ ಹಾಗೂ 2018ರ ಏಷ್ಯಾಕಪ್ ಆವೃತ್ತಿಯನ್ನು ಏಕದಿನ ಮಾದರಿಯಲ್ಲಿ ನಡೆಸಲಾಗಿತ್ತು. ಹೀಗೆ ನಡೆದ ಈ ಎರಡೂ ಆವೃತ್ತಿಗಳಲ್ಲಿಯೂ ಚಾಂಪಿಯನ್ ಆಗಿ ಹೊರಹೊಮ್ಮಿದ ಟೀಮ್ ಇಂಡಿಯಾ ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಮಾದರಿಯಲ್ಲೂ ಏಷ್ಯಾಕಪ್ ಗೆದ್ದಿರುವ ಏಕೈಕ ತಂಡ ಎನಿಸಿಕೊಂಡಿದೆ.
ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿ ಕೂಡ ಟಿ ಟ್ವೆಂಟಿ ಮಾದರಿಯಲ್ಲೇ ನಡೆಯಲಿದ್ದು, ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಭಾಗವಹಿಸಲು ಯುಎಇಗೆ ಪ್ರಯಾಣ ಕೈಗೊಂಡಿದೆ. ಇನ್ನು ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಈ ಆವೃತ್ತಿಯಲ್ಲಿಯೂ ಸಹ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡು ಹ್ಯಾಟ್ರಿಕ್ ಗೆಲುವನ್ನು ಸಾಧಿಸುವತ್ತ ಚಿತ್ತ ನೆಟ್ಟಿದೆ. ಒಟ್ಟಾರೆ 7 ಬಾರಿ ಏಷ್ಯಾಕಪ್ ಇತಿಹಾಸದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಟೀಮ್ ಇಂಡಿಯಾ ಅತಿಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ತಂಡ ಎಂಬ ಖ್ಯಾತಿಯನ್ನೂ ಸಹ ಪಡೆದುಕೊಂಡಿದೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಟೀಮ್ ಇಂಡಿಯಾ ಒಂದು ಬಾರಿ ಮಾತ್ರ ಏಷ್ಯಾಕಪ್ ಆವೃತ್ತಿಯನ್ನು ಆಡದೇ ಹಿಂದೆ ಸರಿದಿದ್ದ ಉದಾಹರಣೆ ಇದೆ. ಆ ಆವೃತ್ತಿ ಯಾವುದು ಹಾಗೂ ಆ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಯಾಕೆ ಭಾಗವಹಿಸಿರಲಿಲ್ಲ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಎರಡನೇ ಆವೃತ್ತಿಯ ಏಷ್ಯಾಕಪ್‌ಗೆ ಭಾರತ ಗೈರು
1984ರಲ್ಲಿ ಯುಎಇಯಲ್ಲಿ ನಡೆದಿದ್ದ ಮೊದಲ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಮ್ ಇಂಡಿಯಾ ನಂತರ ಶ್ರೀಲಂಕಾದಲ್ಲಿ ನಡೆದಿದ್ದ 1985/86ರ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯದೇ ಹಿಂದೆ ಸರಿದಿತ್ತು. ಆ ಬಾರಿಯ ಆವೃತ್ತಿ ಶ್ರೀಲಂಕಾದಲ್ಲಿ ನಡೆದಿದ್ದ ಕಾರಣ ಅಂದು ಬಿಸಿಸಿಐ ಹಾಗೂ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ನಡುವಿನ ಸಂಬಂಧ ಟೀಂ ಇಂಡಿಯಾ ಆ ಆವೃತ್ತಿಯಿಂದ ಹಿಂದೆ ಸರಿದಿತ್ತು. ಹೀಗಾಗಿ ಆ ಆವೃತ್ತಿಯಲ್ಲಿ ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಈ ಆವೃತ್ತಿಯಲ್ಲಿ ಶ್ರೀಲಂಕಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ನಂತರ ಹ್ಯಾಟ್ರಿಕ್ ಗೆಲುವು
ಚೊಚ್ಚಲ ಏಷ್ಯಾಕಪ್ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಮ್ ಇಂಡಿಯಾ ದ್ವಿತೀಯ ಆವೃತ್ತಿಗೆ ಗೈರಾಗಿತ್ತು. ಹಾಗೂ ನಂತರ ನಡೆದ ಮೂರು ಆವೃತ್ತಿಗಳಲ್ಲಿ ( 1988/89, 1990/91 ಹಾಗೂ 1994/95 ) ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಹ್ಯಾಟ್ರಿಕ್ ಜಯವನ್ನು ಸಾಧಿಸಿತ್ತು.

ಏಷ್ಯಾಕಪ್ ವಿಜೇತರ ಸಂಪೂರ್ಣ ಪಟ್ಟಿ
1984ರಿಂದ 2018ರವರೆಗೂ ನಡೆದಿರುವ ಒಟ್ಟು 14 ಏಷ್ಯಾಕಪ್ ಆವೃತ್ತಿಗಳ ಚಾಂಪಿಯನ್ ಮತ್ತು ರನ್ನರ್ ಅಪ್ ತಂಡಗಳ ಪಟ್ಟಿ
1984: ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್
1986 ಶ್ರೀಲಂಕಾ ಚಾಂಪಿಯನ್, ಪಾಕಿಸ್ತಾನ ರನ್ನರ್ ಅಪ್
1988 ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್
1990/91 ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್
1995 ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್
1997 ಶ್ರೀಲಂಕಾ ಚಾಂಪಿಯನ್, ಭಾರತ ರನ್ನರ್ ಅಪ್
2000 ಪಾಕಿಸ್ತಾನ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್
2004 ಶ್ರೀಲಂಕಾ ಚಾಂಪಿಯನ್, ಭಾರತ ರನ್ನರ್ ಅಪ್
2008 ಶ್ರೀಲಂಕಾ ಚಾಂಪಿಯನ್, ಭಾರತ ರನ್ನರ್ ಅಪ್
2010 ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್
2012 ಪಾಕಿಸ್ತಾನ ಚಾಂಪಿಯನ್, ಬಾಂಗ್ಲಾದೇಶ ರನ್ನರ್ ಅಪ್
2014 ಶ್ರೀಲಂಕಾ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್
2016 ಭಾರತ ಚಾಂಪಿಯನ್, ಬಾಂಗ್ಲಾದೇಶ ರನ್ನರ್ ಅಪ್
2018 ಭಾರತ ಚಾಂಪಿಯನ್, ಬಾಂಗ್ಲಾದೇಶ ರನ್ನರ್ ಅಪ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications