ಏಷ್ಯಾಕಪ್ ಟಿ20 ಮಾದರಿಯಲ್ಲಿ ಅತಿಹೆಚ್ಚು ಹಾಗೂ ಅತಿಕಡಿಮೆ ಮೊತ್ತ ಗಳಿಸಿರುವ ತಂಡಗಳಿವು

ಇದೇ ತಿಂಗಳ 27ರಿಂದ ಯುಎಇಯಲ್ಲಿ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಪ್ರಥಮ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಪ್ಘಾನಿಸ್ತಾನ ಮುಖಾಮುಖಿಯಾಗಲಿದ್ದು, ಇದು ಒಟ್ಟು ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಾಗಿದೆ ಹಾಗೂ ಎರಡನೇ ಟಿ ಟ್ವೆಂಟಿ ಮಾದರಿಯ ಏಷ್ಯಾಕಪ್ ಟೂರ್ನಿಯಾಗಿದೆ. 1984ರಲ್ಲಿ ಪ್ರಥಮ ಬಾರಿಗೆ ನಡೆದ ಏಷ್ಯಾಕಪ್ ಟೂರ್ನಿ 2014ರವರೆಗೂ ಏಕದಿನ ಮಾದರಿಯಲ್ಲಿಯೇ ನಡೆದಿತ್ತು. 2016ರ ಏಷ್ಯಾಕಪ್ ಟೂರ್ನಿಯನ್ನು ಮಾತ್ರ ಟಿ ಟ್ವೆಂಟಿ ಮಾದರಿಯಲ್ಲಿ ನಡೆಸುವ ಮೂಲಕ ಅದೇ ಮೊದಲ ಬಾರಿಗೆ ಟಿ ಟ್ವೆಂಟಿ ಮಾದರಿಯಲ್ಲಿ ಈ ಮಿನಿ ವಿಶ್ವಕಪ್ ಟೂರ್ನಿ ನಡೆದಿತ್ತು.
2015ರಲ್ಲಿ ವಿಶೇಷ ಸಭೆಯನ್ನು ನಡೆಸಿದ್ದ ಏಷ್ಯಾಕಪ್ ಕೌನ್ಸಿಲ್ ಏಷ್ಯಾಕಪ್ ಟೂರ್ನಿಯನ್ನು ಮುಂದಿನ ದಿನಗಳಲ್ಲಿ ಒಂದು ಆವೃತ್ತಿಯಲ್ಲಿ ಟಿ ಟ್ವೆಂಟಿ ಮಾದರಿಯಲ್ಲಿ ಹಾಗೂ ಒಂದು ಆವೃತ್ತಿಯಲ್ಲಿ ಏಕದಿನ ಆವೃತ್ತಿಯಲ್ಲಿ ನಡೆಯಲಿದೆ ಎಂಬ ನಿರ್ಧಾರವನ್ನು ಪ್ರಕಟಿಸಿತ್ತು. ಹೀಗಾಗಿಯೇ 2016ರ ಏಷ್ಯಾಕಪ್ ಆವೃತ್ತಿಯನ್ನು ಟಿ ಟ್ವೆಂಟಿ ಮಾದರಿಯಲ್ಲಿ, ನಂತರ ನಡೆದ 2018ರ ಏಷ್ಯಾಕಪ್ ಆವೃತ್ತಿಯನ್ನು ಏಕದಿನ ಮಾದರಿಯಲ್ಲಿ ಹಾಗೂ ಈ ಬಾರಿಯ ಆವೃತ್ತಿಯನ್ನು ಟಿ ಟ್ವೆಂಟಿ ಮಾದರಿಯಲ್ಲಿ ಏಷ್ಯಾಕಪ್ ಕೌನ್ಸಿಲ್ ಆಯೋಜಿಸಿದೆ.
ಇನ್ನು ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತ ಹಾಗೂ ಅತಿಕಡಿಮೆ ಮೊತ್ತ ಕಲೆಹಾಕಿದ ತಂಡಗಳನ್ನು ಹುಡುಕಿದರೆ, ಬಾಂಗ್ಲದೇಶದ ವಿರುದ್ಧ ಪಾಕಿಸ್ತಾನ ಕಲೆಹಾಕಿದ್ದ 385/7 ಅತಿಹೆಚ್ಚು ರನ್ ಮೊತ್ತ ಹಾಗೂ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ 87 ರನ್‌ಗಳಿಗೆ ಆಲ್ಔಟ್ ಆಗಿದ್ದು ಅತಿ ಕಡಿಮೆ ಮೊತ್ತವಾಗಿದೆ. ಇದು ಏಕದಿನ ಮಾದರಿಯಲ್ಲಿ ನಡೆದ ಏಷ್ಯಾಕಪ್ ಟೂರ್ನಿಗಳ ಅತಿಹೆಚ್ಚು ಮತ್ತು ಅರಿ ಕಡಿಮೆ ರನ್ ಮೊತ್ತವಾದರೆ, ಟಿ ಟ್ವೆಂಟಿ ಮಾದರಿಯ ಏಷ್ಯಾಕಪ್‌ನಲ್ಲಿ ದಾಖಲಾಗಿರುವ ಅತಿಹೆಚ್ಚು ಹಾಗೂ ಅತಿ ಕಡಿಮೆ ರನ್ ಮೊತ್ತ ಎಷ್ಟು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಅತಿ ಕಡಿಮೆ ರನ್
ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಮಾದರಿಯಲ್ಲಿ 2016ರಲ್ಲಿ ಮಾತ್ರ ನಡೆದಿದ್ದು, ಈ ಆವೃತ್ತಿಯಲ್ಲಿ ಮಾರ್ಚ್ 3ರಂದು ನಡೆದಿದ್ದ ಭಾರತ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ಯುಎಇ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 81 ರನ್ ಕಲೆಹಾಕಿತ್ತು. ಇದು ಏಷ್ಯಾಕಪ್ ಟಿ ಟ್ವೆಂಟಿ ಮಾದರಿಯಲ್ಲಿ ದಾಖಲಾದ ಅತಿ ಕಡಿಮೆ ತಂಡದ ಮೊತ್ತವಾಗಿದೆ.

ಅತಿಹೆಚ್ಚು ರನ್
2016ರ ಫೆಬ್ರವರಿ 19ರಂದು ಹಾಂಗ್‌ಕಾಂಗ್ ಮತ್ತು ಒಮನ್ ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ಒಮನ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತ್ತು. ಇದು ಏಷ್ಯಾಕಪ್ ಟಿ ಟ್ವೆಂಟಿ ಮಾದರಿ ಇತಿಹಾಸದಲ್ಲಿ ದಾಖಲಾದ ಅತಿ ಹೆಚ್ಚು ರನ್ ಮೊತ್ತವಾಗಿದೆ.

ಟಾಪ್ 5 ಕಡಿಮೆ ಮೊತ್ತಗಳು
ಏಷ್ಯಾಕಪ್ ಟಿ ಟ್ವೆಂಟಿ ಮಾದರಿಯಲ್ಲಿ ದಾಖಲಾದ ಅತಿ ಕೆಡಿಮೆ ರನ್ ಮೊತ್ತಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ.
ಯುಎಇ 81/9
ಯುಎಇ 82ಕ್ಕೆ ಆಲ್ ಔಟ್
ಪಾಕಿಸ್ತಾನ 83ಕ್ಕೆ ಆಲ್ ಔಟ್
ಒಮನ್ 101/8
ಹಾಂಗ್ ಕಾಂಗ್ 112ಕ್ಕೆ ಆಲ್ ಔಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications