IND vs PAK: ಅರ್ಷ್‌ದೀಪ್ ಕ್ಯಾಚ್ ಬಿಟ್ಟಿದ್ದಕ್ಕೆ ಮೈದಾನದಲ್ಲೇ ರೋಹಿತ್ ಆಕ್ರೋಶ; ವಿಡಿಯೋ ವೈರಲ್

ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಎರಡನೇ ಮುಖಾಮುಖಿಯ ಪಂದ್ಯ ನಿನ್ನೆಯಷ್ಟೇ ( ಸೆಪ್ಟೆಂಬರ್ 4 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಿತು. ಉಭಯ ತಂಡಗಳ ನಡುವಿನ ಸೂಪರ್ 4 ಹಂತದ ಈ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 182 ರನ್‌ಗಳ ಗುರಿಯನ್ನು ನೀಡಿತ್ತು.
ಅತ್ತ ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ 5 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿತು. ಹೀಗೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಬೃಹತ್ ಮೊತ್ತ ರನ್ ಕಲೆಹಾಕಿದ್ದರ ಹೊರತಾಗಿಯೂ ತಂಡದ ಕಳಪೆ ಬೌಲಿಂಗ್ ಪ್ರದರ್ಶನದ ಕಾರಣದಿಂದಾಗಿ ಸೋಲನ್ನು ಅನುಭವಿಸಿತು. ಅಂತಿಮ 3 ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಿದ್ದರೆ ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲುವ ಅವಕಾಶವಿದ್ದರೂ ಸಹ ಕೆಲ ತಪ್ಪುಗಳಿಂದ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು.
ಈ ತಪ್ಪುಗಳ ಪೈಕಿ 18ನೇ ಓವರ್‌ನ ಮೂರನೇ ಎಸೆತದಲ್ಲಿ ಅರ್ಷ್ ದೀಪ್ ಸಿಂಗ್ ಆಸಿಫ್ ಅಲಿ ಅವರ ಕ್ಯಾಚ್ ಬಿಟ್ಟದ್ದು ಕೂಡ ಒಂದು. ಹೀಗೆ ಒತ್ತಡದ ಸಂದರ್ಭದಲ್ಲಿ ಅರ್ಶ್ ದೀಪ್ ಸಿಂಗ್ ಕ್ಯಾಚ್ ಬಿಟ್ಟದ್ದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ಕ್ಯಾಚ್ ಬಿಟ್ಟದ್ದರಿಂದಲೇ ಪಂದ್ಯ ತಿರುವು ಪಡೆದುಕೊಂಡಿತು ಹಾಗೂ ಪಾಕಿಸ್ತಾನ ಗೆಲುವನ್ನು ಸಾಧಿಸಿತು ಎಂಬ ಅಭಿಪ್ರಾಯಗಳನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಕೇವಲ ನೆಟ್ಟಿಗರು ಮಾತ್ರವಲ್ಲದೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಅರ್ಷದೀಪ್ ಸಿಂಗ್ ಕ್ಯಾಚ್ ಬಿಟ್ಟಾಗ ಮೈದಾನದಲ್ಲೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
— Guess Karo (KuchNahiUkhada) September 5, 2022
ವಿಡಿಯೋ ವೈರಲ್
ಅರ್ಷ್ ದೀಪ್ ಸಿಂಗ್ ಕ್ಯಾಚ್ ಬಿಟ್ಟ ಕೂಡಲೇ ರೋಹಿತ್ ಶರ್ಮಾ ಮೈದಾನದಲ್ಲಿಯೇ ಕೋಪದಿಂದ ಕಿರುಚುತ್ತಾ ತಮ್ಮ ಆಕ್ರೋಶವನ್ನು ಹೊರ ಹಾಕಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ರೋಹಿತ್ ಶರ್ಮಾ ಪ್ರತಿಕ್ರಿಯೆ ಸರಿಯಾಗಿಯೇ ಇದೆ ಎಂದು ರೋಹಿತ್ ಶರ್ಮಾ ಬ್ಯಾಟ್ ಬೀಸುತ್ತಿದ್ದರೆ, ರೋಹಿತ್ ಅವರ ಈ ಪ್ರತಿಕ್ರಿಯೆಗೆ ಟೀಕೆಗಳು ವ್ಯಕ್ತವಾಗಿವೆ.

ಅರ್ಷ್ ದೀಪ್ ಪರ ಕೊಹ್ಲಿ ಬ್ಯಾಟಿಂಗ್
ಇನ್ನು ಅರ್ಶ್ ದೀಪ್ ಸಿಂಗ್ ಕ್ಯಾಚ್ ಬಿಟ್ಟದ್ದರ ಕುರಿತು ಹಾಗೂ ಇದಕ್ಕೆ ವ್ಯಕ್ತವಾಗುತ್ತಿರುವ ಟೀಕೆಗಳ ಕುರಿತು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಒತ್ತಡದ ಪಂದ್ಯಗಳಲ್ಲಿ ಈ ರೀತಿಯ ತಪ್ಪುಗಳು ನಡೆಯುವುದು ಸಹಜ, ತಂಡದಲ್ಲಿ ಉತ್ತಮ ವಾತಾವರಣವಿದ್ದು, ಆಟಗಾರರಿಗೆ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದಿದ್ದಾರೆ.

ರೋಹಿತ್ ನಡೆಗೆ ಮಿಶ್ರ ಪ್ರತಿಕ್ರಿಯೆ
ಕ್ಯಾಚ್ ಬಿಟ್ಟ ಅರ್ಷದೀಪ್ ಸಿಂಗ್ ವಿರುದ್ಧ ರೋಹಿತ್ ಶರ್ಮಾ ವ್ಯಕ್ತಪಡಿಸಿರುವ ಆಕ್ರೋಶದ ವೈರಲ್ ವಿಡಿಯೋ ಕಂಡ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ನಾಯಕನಾದ ರೋಹಿತ್ ಶರ್ಮಾ ಈ ರೀತಿ ಆಟಗಾರರ ವಿರುದ್ಧ ಮೈದಾನದಲ್ಲಿ ಆಕ್ರೋಶ ವ್ಯಕ್ತ ಪಡಿಸದೇ ತಾಳ್ಮೆಯಿಂದ ವರ್ತಿಸಬೇಕು ಎಂದು ಟೀಕಿಸಿದ್ದರೆ, ಇನ್ನೂ ಕೆಲವರು ರೋಹಿತ್ ಶರ್ಮಾ ಯಾವ ರೀತಿ ಮೈದಾನದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದರೋ ಅದೇ ರೀತಿ ನಮ್ಮ ಮನಸ್ಥಿತಿಯೂ ಕೂಡ ಇತ್ತು, ಹೀಗಾಗಿ ರೋಹಿತ್ ನಡೆದುಕೊಂಡ ರೀತಿ ಸರಿಯಾಗಿಯೇ ಇದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications