Asia Cup 2022: ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಯಾರು ಎಂದು ತಿಳಿಸಿದ ಕೊಹ್ಲಿ ಮತ್ತು ಬಾಬರ್ ಅಜಮ್

ನಿನ್ನೆಯಷ್ಟೇ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಬಹುನಿರೀಕ್ಷಿತ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದೆ. ಈ ಬೃಹತ್ ಹಣಾಹಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡದ ವಿರುದ್ಧ ಐದು ವಿಕೆಟ್‌ಗಳ ಗೆಲುವನ್ನು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇನ್ನು ಈ ಪಂದ್ಯದಲ್ಲಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ಇಬ್ಬರು ಬೆಸ್ಟ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಇಬ್ಬರ ಮುಖಾಮುಖಿಯಾದದ್ದು ವಿಶೇಷ ಕುತೂಹಲವನ್ನು ಹುಟ್ಟುಹಾಕಿತ್ತು ಹಾಗೂ ಇಬ್ಬರಲ್ಲಿ ಯಾರು ಹೆಚ್ಚು ರನ್ ಕಲೆಹಾಕಬಹುದು ಎಂಬ ಪ್ರಶ್ನೆ ಇತ್ತು.
ಪಂದ್ಯದಲ್ಲಿ ಬಾಬರ್ ಅಜಮ್ 9 ಎಸೆತಗಳಲ್ಲಿ 10 ರನ್ ಕಲೆಹಾಕಿದರೆ, ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 35 ರನ್ ಕಲೆಹಾಕಿದರು. ಈ ಮೂಲಕ ಬಾಬರ್ ಅಜಮ್ ಉತ್ತಮ ಪ್ರದರ್ಶನ ನೀಡದೇ ನಿರಾಸೆ ಮೂಡಿಸಿದರೆ, ವಿರಾಟ್ ಕೊಹ್ಲಿ ಬೃಹತ್ ಕಮ್‌ಬ್ಯಾಕ್ ಮಾಡುವಲ್ಲಿ ವಿಫಲರಾದರೂ ಸಹ 35 ರನ್ ಕಲೆಹಾಕಿ ತಂಡದ ಗೆಲುವಿನಲ್ಲಿ ಭಾಗಿಯಾದರು.
ಇನ್ನು ಪಂದ್ಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಮ್ ಈ ಮಹಾ ಪಂದ್ಯದ ಕುರಿತು ಸಂದರ್ಶನಗಳಲ್ಲಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಚರ್ಚೆಯಾಗುತ್ತಿರುವ ವಿಷಯದ ಬಗ್ಗೆ ಬಾಬರ್ ಅಜಮ್ ಹಾಗೂ ವಿರಾಟ್ ಕೊಹ್ಲಿಗೆ ಪ್ರಶ್ನೆಗಳು ಎದುರಾಗಿದ್ದವು. ವಿರಾಟ್ ಕೊಹ್ಲಿ ಬಾಬರ್ ಅಜಮ್ ಬಗ್ಗೆ ಮಾತನಾಡಿದ್ದರು ಹಾಗೂ ಬಾಬರ್ ಅಜಮ್ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಇಬ್ಬರೂ ಸಹ ಪ್ರಸ್ತುತ ಕ್ರಿಕೆಟ್ ಜಗತ್ತಿನ ಬೆಸ್ಟ್ ಬ್ಯಾಟ್ಸ್‌ಮನ್ ಯಾರು ಎಂಬುದನ್ನು ತಿಳಿಸಿದ್ದರು.

ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಂದಿದ್ದ ಬಾಬರ್
"ಜೀವನದಲ್ಲಿ ಯಾವುದೂ ಸುಲಭವಲ್ಲ. ಎಲ್ಲೆಲ್ಲೂ ಸವಾಲುಗಳಿವೆ. ನೀವು ಜೀವನದಲ್ಲಿ ವಿಷಯಗಳನ್ನು ಹೇಗೆ ಸಾಧಿಸುತ್ತೀರಿ ಮತ್ತು ನೀವು ಎದುರಿಸುತ್ತಿರುವ ಸವಾಲುಗಳನ್ನು ನೀವು ಹೇಗೆ ಜಯಿಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ವಿರಾಟ್ ಕೊಹ್ಲಿ ಇನ್ನೂ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು. ನೀವು ಅಂತಹ ಆಟಗಾರನ ವಿರುದ್ಧ ಹೇಗೆ ಸ್ಪರ್ಧಿಸುತ್ತೀರಿ ಮತ್ತು ಅದು ವಿಭಿನ್ನ ಪರಿಸ್ಥಿತಿಗಳಲ್ಲಿ ತುಂಬಾ ಮುಖ್ಯವಾಗಿದೆ," ಎಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಬ್ಲಾಕ್‌ಬಸ್ಟರ್ ಏಷ್ಯಾ ಕಪ್ ಪಂದ್ಯದ ಮುನ್ನಾದಿನದಂದು ಬಾಬರ್ ಅಜಂ ಹೇಳಿದರು. ಈ ಮೂಲಕ ಬಾಬರ್ ಅಜಮ್ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ತಿಳಿಸಿದ್ದರು.

ಬಾಬರ್ ಬೆಸ್ಟ್ ಎಂದಿದ್ದ ಕೊಹ್ಲಿ
ಪಂದ್ಯಕ್ಕೂ ಮುನ್ನ ನಡೆದ ಸಂದರ್ಶನದಲ್ಲಿ ವೇಳೆ ಬಾಬರ್ ಅಜಮ್ ವಿಚಾರ ಬಂದಾಗ ಮಾತನಾಡಿದ್ದ ವಿರಾಟ್ ಕೊಹ್ಲಿ ಬಾಬರ್ ಅಜಮ್ ಅವರನ್ನು ಮೊದಲು ಭೇಟಿಯಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಹಾಗೂ ಬಾಬರ್ ಅಜಮ್ ಬಹುಷಃ ಪ್ರಸ್ತುತ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ವಿರಾಟ್ ಕೊಹ್ಲಿ ಸ್ವತಃ ಹೇಳಿದ್ದರು. ಈ ಮೂಲಕ ವಿರಾಟ್ ಕೊಹ್ಲಿ ಬಾಬರ್ ಅಜಮ್ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ತಿಳಿಸಿದ್ದರು.

ಬಾಬರ್ ಕೊಂಡಾಡಿದ ವಿರಾಟ್ ಕೊಹ್ಲಿ
ಇನ್ನು ವಿರಾಟ್ ಕೊಹ್ಲಿ ಬಾಬರ್ ಅಜಮ್ ಅವರ ವ್ಯಕ್ತಿತ್ವವನ್ನು ಸಂದರ್ಶನದ ವೇಳೆ ಕೊಂಡಾಡಿದ್ದರು. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಭಾರತ ಮತ್ತು ಪಾಕ್ ಹಣಾಹಣಿ ವೇಳೆ ಮೊದಲ ಬಾರಿಗೆ ಬಾಬರ್ ಅಜಮ್ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದ ವಿರಾಟ್ ಕೊಹ್ಲಿ ಅಂದು ಬಾಬರ್ ಅಜಮ್ ಅವರಲ್ಲಿದ್ದ ವಿನಯತೆ ಹಾಗೂ ಅವರು ಅಂದು ನೀಡಿದ್ದ ಗೌರವ ಇಂದಿಗೂ ಸಹ ಹಾಗೆಯೇ ಇದೆ ಎಂದು ಬಾಬರ್ ಅಜಮ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications