Asia Cup 2022: ಭಾರತದ ವಿರುದ್ಧದ ಪಂದ್ಯದಲ್ಲೂ ಕೋಡ್ ಸಿಗ್ನಲ್ ಬಳಸುತ್ತೇವೆ ಎಂದು ಶ್ರೀಲಂಕಾ ಕೋಚ್
ಏಷ್ಯಾಕಪ್ ಟೂರ್ನಿಯ ಆರಂಭದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಶ್ರೀಲಂಕಾ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಗುಂಪು ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋತ ಬಳಿಕ, ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಿತು, ಸೂಪರ್ 4 ಹಂತದ ಮೊದಲನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಸೇಡು ತೀರಿಸಿಕೊಂಡಿದೆ.
ಶ್ರೀಲಂಕಾ ಗೆದ್ದ ಎರಡೂ ಪಂದ್ಯಗಳ ವೇಳೆ ಟೀಂ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಕೋಡೆಡ್ ಸಿಗ್ನಲ್ ಮುಖಾಂತರ ಆಟಗಾರರಿಗೆ ನಿರ್ದೇಶನ ನೀಡಿದರು. ಕೋಡ್ ಸಿಗ್ನಲ್ ಮೂಲಕ ಸಲಹೆಗಳನ್ನು ಸ್ವೀಕರಿಸಿದ್ದು ಶ್ರೀಲಂಕಾ ಎರಡೂ ಪಂದ್ಯಗಳಲ್ಲಿ ಗೆಲ್ಲಲು ಸಹಕಾರಿಯಾಗಿದೆ. ಈಗ ಅದೇ ತಂತ್ರವನ್ನು ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲೂ ಬಳಸುವುದಾಗಿ ಶ್ರೀಲಂಕಾ ಕೋಚ್ ಕ್ರಿಸ್ ಸಿಲ್ವರ್ ವುಡ್ ಹೇಳಿದ್ದಾರೆ.
ಸೆಪ್ಟೆಂಬರ್ 6ರ ಮಂಗಳವಾರ ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಭಾರತ-ಶ್ರೀಲಂಕಾ ಪಂದ್ಯ ನಡೆಯಲಿದೆ. ಸೂಪರ್ 4 ಹಂತದ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ಅಫ್ಘಾನಿಸ್ತಾನದ ವಿರುದ್ಧ ಗೆಲವು ಸಾಧಿಸಿದ್ದು, ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದೆ. ಭಾರತಕ್ಕೆ ಶ್ರೀಲಂಕಾ ವಿರುದ್ಧ ಗೆಲುವು ಅನಿವಾರ್ಯವಾಗಿದೆ.

ಏನಿದು ಶ್ರೀಲಂಕಾದ ಕೋಡ್ ಸಿಗ್ನಲ್ ತಂತ್ರ?
ಬಾಂಗ್ಲಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ಜಯಗಳಿಸಿದ ಪಂದ್ಯದಲ್ಲಿ ಶ್ರೀಲಂಕಾ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಈ ಕೋಡ್ ಸಿಗ್ನಲ್ ಬಳಸಿ ಮೈದಾನದಲ್ಲಿನ ಆಟಗಾರರಿಗೆ ಸಂದೇಶ ನೀಡಿದ್ದರು.
ಶ್ರೀಲಂಕಾದ ಕೋಚ್ 2D, D5, A2, C4, D ಇತ್ಯಾದಿ ಕೋಡ್‌ಗಳನ್ನು ಬಳಸುತ್ತಿದ್ದಾರೆ. ಈ ಕೋಡ್ ಅರ್ಥವೇನೆಂದು ಯಾರಿಗೂ ತಿಳಿದಿಲ್ಲ. ಇದು ಶ್ರೀಲಂಕಾ ಆಟಗಾರರು ಮತ್ತು ಕೋಚ್‌ಗೆ ಮಾತ್ರ ಅರ್ಥವಾಗುತ್ತದೆ. ಆಟಗಾರರಿಗೆ ಮೈದಾನದಲ್ಲಿ ಆಟದ ಕಾರ್ಯತಂತ್ರ ಬದಲಾಯಿಸಲು ಕೋಡ್ ಮೂಲಕ ನಿರ್ದೇಶನ ನೀಡುತ್ತಿದ್ದಾರೆ ಎನ್ನಲಾಗುತ್ತದೆ.
ಏಷ್ಯಾ ಕಪ್: ಶ್ರೀಲಂಕಾ ವಿರುದ್ಧದ ಮಹತ್ವದ ಕದನಕ್ಕೆ ರೋಹಿತ್ ಪಡೆ ಸಜ್ಜು: ತಪ್ಪು ತಿದ್ದಿಕೊಳ್ಳುತ್ತಾ ಭಾರತ!

ಕೋಡ್ ಸಿಗ್ನಲ್ ಬಗ್ಗೆ ಹಲವರಿಂದ ಟೀಕೆ
ಸಿಲ್ವರ್‌ವುಡ್‌ನ ಕೋಡ್ ಸಿಗ್ನಲ್‌ಗಳ ವಿಧಾನವು ಅನೇಕ ಮುಖ್ಯ ತರಬೇತುದಾರರು ಮತ್ತು ತಂಡಕ್ಕೆ ಇಷ್ಟವಾಗುವುದಿಲ್ಲ. ಸಿಲ್ವರ್‌ವುಡ್ ಇಂಗ್ಲೆಂಡ್‌ನ ಮುಖ್ಯ ತರಬೇತುದಾರರಾಗಿದ್ದಾಗ ಇದೇ ರೀತಿಯ ಕೋಡ್ ಸಂಕೇತಗಳ ವಿಧಾನವನ್ನು ಬಳಸಿದ್ದರು. ಆ ಸಮಯದಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಸಿಲ್ವರ್‌ವುಡ್ ಕೋಡ್ ಸಿಗ್ನಲ್ ನೀಡುವ ಅಗತ್ಯವಿಲ್ಲ ಎಂದು ಟೀಕಿಸಿದ್ದರು.
ಅಫ್ಘಾನಿಸ್ತಾನದ ಮಾಜಿ ಮುಖ್ಯ ಕೋಚ್ ಲ್ಯಾನ್ಸ್ ಕ್ಲೂಸ್ನರ್ ಕೂಡ ಕೋಡ್ ಸಿಗ್ನಲ್‌ಗಳ ವ್ಯವಸ್ಥೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ. ನಿರ್ಣಯಗಳನ್ನು ತಂಡದ ನಾಯಕ ತೆಗೆದುಕೊಂಡರೆ ಸಾಕು ಎನ್ನುತ್ತಾರೆ.

ಕೋಡ್ ಸಿಗ್ನಲ್ ಸಮರ್ಥಿಸಿಕೊಂಡ ಶ್ರೀಲಂಕಾ ಕೋಚ್
ಶ್ರೀಲಂಕಾದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಕೋಡೆಡ್ ಸಿಗ್ನಲ್‌ಗಳ ಮೂಲಕ ಶ್ರೀಲಂಕಾದ ಆಟಗಾರರಿಗೆ ನಿರ್ದೇಶನಗಳನ್ನು ರವಾನಿಸುವ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
"ಆನ್ ಫೀಲ್ಡ್ ತಂಡಕ್ಕೆ ಮಾರ್ಗದರ್ಶನ ನೀಡುವುದು ತಪ್ಪೇನಲ್ಲ. ಹೌದು, ನಾವು ಕೋಡ್ ಸಿಗ್ನಲ್‌ಗಳನ್ನು ಬಳಸುತ್ತಿದ್ದೇವೆ. ಭಾರತದ ವಿರುದ್ಧದ ನಮ್ಮ ಮುಂದಿನ ಪಂದ್ಯದಲ್ಲೂ ಕೂಡ ನಾವು ಅದೇ ತಂತ್ರ ಬಳಸುತ್ತೇವೆ" ಎಂದು ಹೇಳಿದ್ದಾರೆ.

ಇದು ರಾಕೆಟ್ ವಿಜ್ಞಾನವಲ್ಲ ಎಂದ ಸಿಲ್ವರ್‌ವುಡ್
ಕೋಡ್ ಸಿಗ್ನಲ್ ಏನು ರಾಕೆಟ್ ಸೈನ್ಸ್ ಅಲ್ಲ ಎಂದಿರುವ ಶ್ರೀಲಂಕಾ ಕೋಚ್ ಕ್ರಿಸ್ ಸಿಲ್ವರ್‌ವುಡ್, ಮೈದಾನದಲ್ಲಿ ಶ್ರೀಲಂಕಾ ತಂಡದ ನಾಯಕನಿಗೆ ತೀರ್ಮಾನಗಳನ್ನು ತೆಗೆದುಕೊಳ್ಳಲು ಸುಲಭವಾಗುವಂತೆ ನೀಡುವ ಸಲಹೆಗಳು ಎಂದಿದ್ದಾರೆ. ಬಹಳಷ್ಟು ತಂಡಗಳು ಇದೇ ರೀತಿ ಸಲಹೆ ನೀಡುತ್ತವೆ, ಆದರೆ ನಾವು ಹೊಸ ವಿಧಾನವನ್ನು ಅನುಸರಿಸುತ್ತಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಸೂಪರ್-4 ಏಷ್ಯಾ ಕಪ್ ಹಣಾಹಣಿಯಲ್ಲಿ ಭಾರತ ತಂಡ ಫೇವರಿಟ್ ಆಗಿದೆ. ಆದರೆ ದಸುನ್ ಶನಕ ನೇತೃತ್ವದ ತಂಡವು ಕೋಡ್ ಸಿಗ್ನಲ್‌ಗಳನ್ನು ಭಾರತ ತಂಡ ಹೇಗೆ ಎದುರಿಸಲಿದೆ ಎನ್ನುವುದು ಮಂಗಳವಾರ ಪಂದ್ಯದಲ್ಲಿ ತಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications