Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನೇಪಾಳ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಪುಡಿಗಟ್ಟಿದ 4 ದೊಡ್ಡ ದಾಖಲೆಗಳು ಇದು!!

ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನೇಪಾಳ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಮಳೆಯಿಂದಾಗಿ ಅಡ್ಡಿಯುಂಟಾಗಿದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಆರಂಭಿಕ ಜೊತೆಗಾರ ಶುಬ್ಮನ್ ಗಿಲ್ ಜೊತೆಗೆ ಸೇರಿ ಒಂದೂ ವಿಕೆಟ್ ಕಳೆದುಕೊಳ್ಳದೆ ಪಂದ್ಯ ಗೆಲ್ಲಿಸಿದರು.

ವೈಭವಯುತ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ 39 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದ್ದರು. ಒಟ್ಟಾರೆ 59 ಎಸೆತ ಎದುರಿಸಿದ ಅವರು 5 ಸಿಕ್ಸರ್ 6 ಬೌಂಡರಿ ನೆರವಿನಿಂದ 74 ರನ್‌ಗಳನ್ನು ಚಚ್ಚಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಾಕ್ಕು ಬೃಹತ್ ದಾಖಲೆಗಳನ್ನು ಮುರಿದಿದ್ದಾರೆ. ಆ ದಾಖಲೆಗಳು ಯಾವುದು? ಆ ಬಗ್ಗೆ ಮಾಹಿತಿ ಇಲ್ಲಿದೆ.

Asia cup 2023: 4 important Records are broken by Rohit Sharma in Match Against Nepal

ಭಾರತೀಯ ಆಟಗಾರರ ಪೈಕಿ ಅತಿ ಹೆಚ್ಚು ಸಿಕ್ಸರ್

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪ್ರಮುಖ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಒಟ್ಟಾರೆ ಏಕದಿನ ಮಾದರಿಯಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ಸಿಕಸರ್ ಬಾರಿಸಿರುವ ದಾಖಲೆಯನ್ನು ರೋಹಿತ್ ಶರ್ಮಾ ಈಗಾಗಲೇ ಹೊಂದಿದ್ದಾರೆ. ಶನಿವಾರ ನಡೆದ ಪಂದ್ಯದ ಮೂಲಕ ಶ್ರೀಲಂಕಾ ನೆಲದಲ್ಲಿಯೂ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ಭಾರತೀಯ

ರೋಹಿತ್ ಶರ್ಮಾ ನೇಪಾಳದ ವಿರುದ್ಧ ಭರ್ಜರಿ ಅರ್ಧ ಶತಕ ಸಿಡಿಸುವ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ರೋಹಿತ್ ಯಾವಾಗಲೂ ಸ್ಥಿರವಾದ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಇದು ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಅವರ 49ನೇ ಅರ್ಧ ಶತಕ.

ಆರಂಭಿಕನಾಗಿ 250 ಸಿಕ್ಸರ್ ಸಿಡಿಸಿ ಎಲೀಟ್ ಪಟ್ಟಿಗೆ ಸೇರ್ಪಡೆ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ ರೋಹಿತ್ ಶರ್ಮಾ ಆರಂಭಿಕನಾಗಿ 250 ಸಿಕ್ಸರ್‌ಗಳನ್ನು ಸಿಡಿಸಿದ್ದು ಈ ದಾಖಲೆ ಮಾಡಿದ ಕೇವಲ ಮೂರನೇ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸಾಧನೆ ಮಾಡಿದ ಆಟಗಾರರ ಪಟ್ಟಿಗೆ ರೋಹಿತ್ ಸೇರಿಕೊಂಡಿದ್ದಾರೆ.

30 ಬಾರಿ 5ಕ್ಕೂ ಅಧಿಕ ಸಿಕ್ಸರ್

ನೇಪಾಳದ ವಿರುದ್ಧ 5 ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ ವೃತ್ತಿ ಜೀವನದಲ್ಲಿ 30ನೇ ಬಾರಿ 5ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅವರಷ್ಟು ಸಲೀಸಾಗಿ ಸಿಕ್ಸರ ಬಾರಿಸುವ ಮತ್ತೊಬ್ಬ ಕ್ರಿಕೆಟಿಗ ಈವರೆಗೆ ಬಂದಿಲ್ಲ ಎನ್ನುವುದನ್ನು ಟೀಮ್ ಇಂಡಿಯಾ ನಾಯಕ ಸಾರಿದ್ದಾರೆ.

Story first published: Tuesday, September 5, 2023, 15:21 [IST]
Other articles published on Sep 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+