Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023: ಭಾರತ ಚಾಂಪಿಯನ್ ಆದ ಮೇಲೆ ಇನ್ನೊಂದೂ ನಿಜವಾಯಿತು..

ಟೀಮ್ ಇಂಡಿಯಾ ಎಂದರೆ ಸಾಕು ಸಾಲು ಸಾಲು ಸ್ಟಾರ್ ಬ್ಯಾಟರ್ ಗಳು ಕಣ್ಣು ಮುಂದೆ ಬರುತ್ತಾರೆ. ಹೀಗಂದ ಮಾತ್ರಕ್ಕೆ ಟೀಮ್ ಇಂಡಿಯಾದಲ್ಲಿ ವಿಶ್ವ ಪ್ರಸಿದ್ಧ ಬೌಲರ್ ಗಳು ಇರಲಿಲ್ಲ ಎಂದು ಅಲ್ಲ. ಆದರೆ ವಿಶ್ವದಲ್ಲಿ ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ಕ್ಷಮತೆ ಇಂದಲೇ ಗುರುತಿಸಿಕೊಂಡಿತ್ತು.

ಆದರೆ, ಈಗ ಕಾಲ ಬದಲಾಗಿದೆ. ನಾವು ಬರೀ ಬ್ಯಾಟಿಂಗ್ ಅಷ್ಟೇ ಅಲ್ಲ ಬೌಲಿಂಗ್ ನಲ್ಲೂ ವಿಶ್ವದ ಶ್ರೇಷ್ಠ ಆಟಗಾರರನ್ನು ಹೊಂದಿದ್ದೇವೆ ಎಂಬುದನ್ನು ಟೀಮ್ ಇಂಡಿಯಾ ಮತ್ತೊಮ್ಮೆ ಸಾರಿ ಹೇಳಿದೆ. Yes.. ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ.

Asia Cup 2023: After Team India Performance, Proved That Bowling Department Is Also Strong

ಟೀಮ್ ಇಂಡಿಯಾದಲ್ಲಿ ಸ್ಟಾರ್ ಬ್ಯಾಟರ್ ಗಳ ತಂಡವೇ ಇದೆ. ತಂಡಕ್ಕೆ ಅಗತ್ಯ ಬಿದ್ದಾಗ ಸ್ಟಾರ್ ಬೌಲರ್ ಗಳು ಭರ್ಜರಿ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾದ ಬ್ಯಾಟರ್ ಗಳ ಪಕ್ಕದಲ್ಲಿ ಅವರ ಆಟದ ಶೈಲಿ ಇರುತ್ತದೆ.

ಉದಾಹರಣೆಗೆ ಚೇಸ್ ಮಾಡುವಾಗಲೇ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಪರ ಬೆಸ್ಟ್ ಬ್ಯಾಟರ್ ಆಗಿದ್ದರಿಂದಲೇ ಅವರನ್ನು ಚೇಸಿಂಗ್ ಸ್ಟಾರ್ ಎಂದೇ ಕರೆಯುತ್ತಾರೆ. ಇನ್ನು ಮುಗಿಲೆತ್ತರದ ಸಿಕ್ಸರ್ ಹಾಗೂ ನಿಗ್ ಇನಿಂಗ್ಸ್ ಕಟ್ಟುವ ರೋಹಿತ್ ಶರ್ಮಾಗೆ ಹಿಟ್ ಮ್ಯಾನ್ ಎಂಬ ಬಿರಿದು ಇದೆ.

1
10-2023

ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಬಾರಿಸಿದ ಯುವರಾಜ್ ಸಿಂಗ್ ಗೆ ಸಿಕ್ಸರ್ ಕಿಂಗ್ ಎಂದೇ ಕರೆಯುತ್ತಾರೆ. ಹೀಗೆ ಬೌಲರ್ ಗಳನ್ನು ಸಹ ಅವರ ಪ್ರದರ್ಶನದ ಆಧಾರದ ಮೇಲೆ ಅಭಿಮಾನಿಗಳು ಗುರುತಿಸಿದ್ದಾರೆ. ಟೀಮ್ ಇಂಡಿಯಾ ತನ್ನ ಹಳೆಯ ಪಟ್ಟಿಯನ್ನು ಕಳಚಿಕೊಳ್ಳಲು ಸದ್ಯ ರೆಡಿ ಇದೆ.

ವಿಶ್ವದ ಸ್ಟಾರ್ ಬೌಲರ್ ಗಳು ಸಹ ನಮ್ಮದೇ ತಂಡದಲ್ಲಿದ್ದಾರೆ
ನಮ್ಮ ಬಳಿ ಬರೀ ಸ್ಟಾರ್ ಬ್ಯಾಟರ್ ಗಳ ಗೊಂಚಲು ಅಲ್ಲ, ವಿಶ್ವದ ಸ್ಟಾರ್ ಬೌಲರ್ ಗಳು ಸಹ ನಮ್ಮದೇ ತಂಡದಲ್ಲಿದ್ದಾರೆ ಎಂದು ಟೀಮ್ ಇಂಡಿಯಾ ಸಾರಿ ಸಾರಿ ಹೇಳಿದೆ. ಟೀಮ್ ಇಂಡಿಯಾದಲ್ಲಿ ಸದ್ಯ ಭಿನ್ನ ವಿಭಿನ್ನ ವೇಗಿಗಳು ಇದ್ದಾರೆ. ಯಾರ್ಕರ್ ನ್ನು ಸಲೀಸಾಗಿ ಹಾಕಬಲ್ಲ ವೇಗಿ ಜಸ್ಪ್ರಿತ್ ಬುಮ್ರಾ. ದಾಳಿಯಲ್ಲಿ ಹಲವು ವೇರಿಯೆಷನ್ ಹೊಂದಿರುವ ಮೊಹಮ್ಮದ್ ಸಿರಾಜ್.

ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ನಡುಕ
ಸ್ವಿಂಗ್ ಬೌಲಿಂಗ್ ಮೂಲಕವೇ ಎದುರಾಳಿಗಳನ್ನು ಕಟ್ಟಿಹಾಕುವ ಮೊಹಮ್ಮದ್ ಶಮಿ. ಈ ಮೂವರು ವೇಗಿಗಳಿಗೆ ಮಿಡ್ಲ್ ಓವರ್ ನಲ್ಲಿ ಸಾಥ್ ನೀಡಲು ಹಾರ್ದಿಕ್ ಪಾಂಡ್ಯ ಸಹ ತಂಡದ ಭಾಗವಾಗಿದ್ದಾರೆ. ಈ ವೇಗಿಗಳು ಯಾವುದೇ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.

ಫ್ಲ್ಯಾಟ್ ವಿಕೆಟ್ ಇರಲಿ, ಬೌನ್ಸಿ ಟ್ರ್ಯಾಕ್ ಇರಲಿ ಈ ಸ್ಟಾರ್ ಬೌಲರ್ ಗಳ ಕೈಯಲ್ಲಿ ಚೆಂಡನ್ನು ನೀಡಿದರೆ, ಇವರು ಹೇಳಿದಂತೆ ಚೆಂಡು ಮಾತು ಕೇಳಲು ಆರಂಭಿಸುತ್ತದೆ. ಹೀಗಾಗಿಯೇ ಟೀಮ್ ಇಂಡಿಯಾ ಸದ್ಯ ಬಲಾಢ್ಯ ತಂಡಗಳಲ್ಲಿ ಒಂದಾಗಿದೆ. ಟೀಮ್ ಇಂಡಿಯಾ ಭಾನುವಾರ ನೀಡಿದ ಪ್ರದರ್ಶನವನ್ನು ನೋಡಿದರೆ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಮ್ ಇಂಡಿಯಾ ಗೆಲುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿವೆ.

Story first published: Monday, September 18, 2023, 9:29 [IST]
Other articles published on Sep 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+