Asia Cup 2023: ಏಷ್ಯಾಕಪ್‌ನಲ್ಲಿ ಆಡುತ್ತಿರುವ ಹಿರಿಯ ಮತ್ತು ಕಿರಿಯ ಆಟಗಾರರು ಯಾರು ಗೊತ್ತಾ?
ಏಷ್ಯಾಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತ ತಂಡ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಭಾರತೀಯ ಆಟಗಾರರ ಸರಾಸರಿ ವಯಸ್ಸು 29 ವರ್ಷಗಳು.
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಹಿರಿಯಾ ಆಟಗಾರ ಎಂಬ ಹೆಗ್ಗಳಿಕೆಯನ್ನು ನಾಯಕ ರೋಹಿತ್ ಶರ್ಮಾ (36 ವರ್ಷ 113 ದಿನ) ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಇತರ ತಂಡಗಳ ಪೈಕಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ (36 ವರ್ಷ 141 ದಿನ) ಮಾತ್ರ ರೋಹಿತ್‌ಗಿಂತ ಹಿರಿಯರು. ನೇಪಾಳದ ಗುಲ್ಶನ್ ಝಾ 16ನೇ ಏಷ್ಯಾಕಪ್ನಲ್ಲಿ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ.

ಟೀಮ್ ಇಂಡಿಯಾದ 7 ಆಟಗಾರರ ವಯಸ್ಸು 30
ಟೀಮ್ ಇಂಡಿಯಾದ 7 ಆಟಗಾರರ ವಯಸ್ಸು 30 ದಾಟಿದೆ. ರೋಹಿತ್ ಹೊರತಾಗಿ, ವಿರಾಟ್ ಕೊಹ್ಲಿ (34 ವರ್ಷ), ರವೀಂದ್ರ ಜಡೇಜಾ (34 ವರ್ಷ), ಸೂರ್ಯಕುಮಾರ್ ಯಾದವ್ (32 ವರ್ಷ), ಮೊಹಮ್ಮದ್ ಶಮಿ (32 ವರ್ಷ), ಕೆಎಲ್ ರಾಹುಲ್ (31 ವರ್ಷ) ಮತ್ತು ಶಾರ್ದೂಲ್ ಠಾಕೂರ್ (31 ವರ್ಷ) 30 ವರ್ಷಕ್ಕಿಂತ ಹೆಚ್ಚು ಆಗಿದೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ತಿಲಕ್ ವರ್ಮಾ ಪಡೆದಿದ್ದಾರೆ. ಇವರಿಗೆ ಈಗ ಕೇವಲ 20 ವರ್ಷ.
ಟೀಮ್ ಇಂಡಿಯಾ ಮುಂಬರುವ ವಿಶ್ವಕಪ್‌ನ ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಸಮಿತಿ ಅನುಭವಿ ಆಟಗಾರರಿಗೆ ಮಣೆ ಹಾಕಿದೆ. ಭಾರತ ತಂಡದಲ್ಲಿ ಯುವ ಆಲ್ರೌಂಡರ್ ಗಳು ಇಲ್ಲದೇ ಇರುವುದು ನಿಜಕ್ಕೂ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಆಲ್ ರೌಂಡರ್ ಗಳಲ್ಲಿ ರವೀಂದ್ರ ಜಡೇಜಾ ಅವರ ವಯಸ್ಸು ಹೆಚ್ಚು. ಜಡ್ಡು 34ರ ವಯಸ್ಸಿನಲ್ಲೂ ಯುವಕರು ನಾಚುವಂತೆ ಆಡುತ್ತಾರೆ. ಉಳಿದಂತೆ ಅಕ್ಷರ್ ಪಟೇಲ್ 29 ಹಾಗೂ ಕುಲ್ದೀಪ್ ಯಾದವ್ 28 ವರ್ಷದವರಾಗಿದ್ದಾರೆ. ಯುವ ಹಾಗೂ ಅನುಭವಿಗಳ ತಂಡವನ್ನು ಕಟ್ಟುವಲ್ಲಿ ಶ್ರಮಿಸಿರುವ ಆಯ್ಕೆ ಸಮಿತಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ.
ಪಾಕಿಸ್ತಾನ ತಂಡದ ಆಟಗಾರರ ವಯಸ್ಸು
ಪಾಕಿಸ್ತಾನ ತಂಡದ ಸರಾಸರಿ ವಯಸ್ಸು 26 ವರ್ಷಗಳು. ತಂಡದ 4 ಆಟಗಾರರು 30 ವರ್ಷ ದಾಟಿದ್ದಾರೆ. ಇದರಲ್ಲಿ ಫಖಾರ್ ಜಮಾನ್ (33), ಇಫ್ತಿಕರ್ ಅಹ್ಮದ್ (32), ತೈಬ್ ತಾಹಿರ್ (30) ಮತ್ತು ಮೊಹಮ್ಮದ್ ರಿಜ್ವಾನ್ (31) 30 ವರ್ಷ ದಾಟಿದ್ದಾರೆ. ಪಾಕಿಸ್ತಾನದಲ್ಲಿರುವ ಎಲ್ಲಾ ಬೌಲರ್ ಗಳು ಮತ್ತು ಆಲ್ರೌಂಡರ್ ಗಳು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದೇ ವಿಶೇಷ.
ಸರಾಸರಿ ವಯಸ್ಸಿನ ಪ್ರಕಾರ ಬಾಂಗ್ಲಾದೇಶ ಮೂರನೇ ಸ್ಥಾನದಲ್ಲಿದೆ. ತಂಡದ ಸರಾಸರಿ ವಯಸ್ಸು 26 ವರ್ಷಗಳು. ನಾಯಕ ಶಕೀಬ್ ಅಲ್ ಹಸನ್ ಏಷ್ಯಾಕಪ್‌ನ ಪ್ರಸಕ್ತ ಋತುವಿನಲ್ಲಿ ಅತ್ಯಂತ ಹಿರಿಯ ಆಟಗಾರ. ಅವರಿಗೆ 36 ವರ್ಷ, ಶೋರಿಫುಲ್ ಇಸ್ಲಾಂ (22 ವರ್ಷ) ತಂಡದ ಅತ್ಯಂತ ಕಿರಿಯ ಆಟಗಾರ. ತಂಡದ ಇಬ್ಬರು ಆಟಗಾರರು 30 ವರ್ಷ ದಾಟಿದ್ದಾರೆ.
ನೇಪಾಳ, ಮೊದಲ ಬಾರಿಗೆ ಏಷ್ಯಾ ಕಪ್‌ನಲ್ಲಿ ಭಾಗವಹಿಸಿದ್ದು, ಪ್ರಸಕ್ತ ಋತುವಿನ ಟೂರ್ನಿಯಲ್ಲಿ ಅತ್ಯಂತ ಕಿರಿಯ ತಂಡವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications