For Quick Alerts
ALLOW NOTIFICATIONS  
For Daily Alerts
 

Asia Cup 2023: ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ 'ಈ ವಿಶ್ವದಾಖಲೆ' ಮುರಿದ ಬಾಬರ್ ಅಜಂ

ಬುಧವಾರ, ಸೆಪ್ಟೆಂಬರ್ 6ರಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್‌ನ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ 7 ವಿಕೆಟ್‌ಗಳ ಗೆಲುವು ಭರ್ಜರಿ ಸಾಧಿಸಿತು.

2023ರ ಏಷ್ಯಾ ಕಪ್‌ನ ಮೊದಲ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ ಪಾಕಿಸ್ತಾನ ನಾಯಕ ಬಾಬರ್ ಅಜಂ 22 ಎಸೆತಗಳಲ್ಲಿ 17 ರನ್ ಗಳಿಸಿ ಬಾಂಗ್ಲಾದೇಶ ತಂಡದ ವೇಗಿ ತಸ್ಕಿನ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು.

ಇದೇ ವೇಳೆ ಪಾಕಿಸ್ತಾನ ನಾಯಕ ಬಾಬರ್ ಅಜಂ ಬುಧವಾರದಂದು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ವಿಶ್ವದಾಖಲೆಯನ್ನು ಹಿಂದಿಕ್ಕಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.

asia-cup-2023


17 ರನ್ ಗಳಿಸಿದರೂ, ಬಲಗೈ ಬ್ಯಾಟರ್ ಬಾಬರ್ ಅಜಂ ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ 2000 ರನ್‌ಗಳನ್ನು ತಲುಪಲು ಸಹಾಯ ಮಾಡಿತು. ಬಾಬರ್ ಅಜಂ ಕೇವಲ 31 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ, ವಿರಾಟ್ ಕೊಹ್ಲಿ ಅವರ 36 ಇನ್ನಿಂಗ್ಸ್‌ಗಳ ದಾಖಲೆಯನ್ನು ಅಳಿಸಿಹಾಕಿದರು.

ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 41 ಇನ್ನಿಂಗ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಲೆಜೆಂಡ್ ಮೈಕೆಲ್ ಕ್ಲಾರ್ಕ್ 46 ಇನ್ನಿಂಗ್ಸ್‌ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್‌ಗಳ ಗೆಲುವು
ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದ ಕುರಿತು ಮಾತನಾಡುವುದಾದರೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ತಂಡದ ಅಗ್ರಕ್ರಮಾಂಕ ಪಾಕಿಸ್ತಾನದ ಬೌಲಿಂಗ್ ದಾಳಿಗೆ ಸಿಲುಕಿ ಪತರುಗುಟ್ಟಿತು.

ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಪಾಕಿಸ್ತಾನ ತಂಡದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದರು. ಹ್ಯಾರಿಸ್ ರೌಫ್ 19 ರನ್‌ಗೆ 4 ವಿಕೆಟ್ ಮತ್ತು ನಸೀಮ್ ಶಾ 34 ರನ್‌ಗೆ 3 ವಿಕೆಟ್‌ಗಳ ಅಂಕಿಅಂಶ ಪಡೆದರು.

ಅಂತಿಮವಾಗಿ ಪಾಕಿಸ್ತಾನದ ಬೌಲರ್‌ಗಳು ಬಾಂಗ್ಲಾದೇಶ ತಂಡವನ್ನು 38.4 ಓವರ್‌ಗಳಲ್ಲಿ 193 ರನ್‌ಗಳಿಗೆ ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಿದರು.

ಏತನ್ಮಧ್ಯೆ, ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ 57 ಎಸೆತಗಳಲ್ಲಿ 53 ರನ್ ಗಳಿಸಿದರೆ, ವಿಕೆಟ್ ಕೀಪರ್-ಬ್ಯಾಟರ್ ಮುಶ್ಫಿಕರ್ ರಹೀಂ ಕೂಡ 64 ರನ್ ಬಾರಿಸಿದರು. ಈ ಜೋಡಿ 5 ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿದರು. ಉಳಿದ ಯಾವುದೇ ಬಾಂಗ್ಲಾದೇಶ ಬ್ಯಾಟರ್‌ಗಳು ಪಾಕಿಸ್ತಾನದ ವೇಗದ ದಾಳಿಯನ್ನು ಪ್ರತಿರೋಧ ತೋರಲಿಲ್ಲ.

194 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು. ಇಮಾಮ್-ಉಲ್-ಹಕ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಅತ್ಯುತ್ತಮ ಬ್ಯಾಟಿಂಗ್‌ನೊಂದಿಗೆ ಬಾಬರ್ ಅಜಂ ನಾಯಕತ್ವದ ತಂಡವು 39.3 ಓವರ್‌ಗಳಲ್ಲಿ ಗುರಿ ತಲುಪಿತು.

ಆರಂಭಿಕ ಬ್ಯಾಟರ್ ಇಮಾಮ್-ಉಲ್-ಹಕ್ 84 ಎಸೆತಗಳಲ್ಲಿ 5 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸೇರಿದಂತೆ 78 ರನ್ ಗಳಿಸಿದರೆ, ಮೊಹಮ್ಮದ್ ರಿಜ್ವಾನ್ 79 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ ಅಜೇಯ 63 ರನ್ ಗಳಿಸಿದರು. ಇನ್ನು ಬಾಂಗ್ಲಾದೇಶ ಪರ ಬೌಲಿಂಗ್‌ನಲ್ಲಿ ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ ಮತ್ತು ಮೆಹಿದಿ ಹಸನ್ ತಲಾ ಒಂದು ವಿಕೆಟ್ ಪಡೆದರು.

Story first published: Thursday, September 7, 2023, 19:24 [IST]
Other articles published on Sep 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+