For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ 2023: 17 ಆಟಗಾರ ತಂಡವನ್ನು ಪ್ರಕಟಿಸಿದ ಬಾಂಗ್ಲಾದೇಶ: ಶಕೀಬ್‌ಗೆ ನಾಯಕನ ಪಟ್ಟ

ಏಷ್ಯಾಕಪ್ ಟೂರ್ನಿಗೆ ದಿನಗಳು ಸಮೀಪಿಸುತ್ತಿರುವಂತೆಯೇ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ತಮ್ಮ ಸ್ಕ್ವಾಡ್ ಪ್ರಕಟಿಸಲು ಆರಂಭಿಸಿದೆ. ಬಾಂಗ್ಲಾದೇಶ ಕೂಡ ಏಷ್ಯಾಕಪ್ ಟೂರ್ನಿಗೆ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಶಕೀಬ್ ಅಲ್ ಹಸನ್ ನಾಯಕತ್ವದಲ್ಲಿ 17 ಆಟಗಾರರ ಪಡೆಯನ್ನು ಇಂದು ಘೋಷಣೆ ಮಾಡಿದೆ.

ಈ ಟೂರ್ನಿಗೆ ಯುವ ಬ್ಯಾಟರ್‌ಗಳಾದ ತಂಜಿದ್ ಹಸನ್ ತಮೀಮ್ ಮತ್ತು ಶಮೀಮ್ ಹೊಸೈನ್ ಪಟ್ವಾರಿ ಕೂಡ ಬಾಂಗ್ಲಾದೇಶ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಇಬ್ಬರು ಆಟಗಾರರು ಕೂಡ 2020ರಲ್ಲಿ ಬಾಂಗ್ಲಾದೇಶ ಅಂಡರ್‌19 ತಂಡ ವಿರ್ಶವಕಪ್ ಗೆದ್ದಾಗ ಆ ತಂಡದ ಭಾಗವಾಗಿದ್ದರು. ಶಮಿಮ್ 17 ಪಂದ್ಯಗಳಲ್ಲಿ ಬಾಂಗ್ಲಾದೇಶ ಪರವಾಗಿ ಆಡಿದ್ದರೆ ತಮೀಮ್ ಇನ್ನಷ್ಟೇ ಬಾಂಗ್ಲಾದೇಶ ಪರವಾಗಿ ಪದಾರ್ಪಣೆ ಮಾಡಬೇಕಿದೆ.

Asia cup 2023: Bangladesh announce Shakib al hasan led 17-member strong squad

ಇನ್ನು ಇದಕ್ಕೂ ಮುನ್ನ ಸೌಮ್ಯ ಸರ್ಕಾರ್ ಪುನರಾಗಮನ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಆದರೆ ಆಯ್ಕೆಗಾರರು ಅವರನ್ನು ಆಯ್ಕೆ ಮಾಡದಿರಲು ನಿರ್ಧರಿಸಿದ್ದಾರೆ. ಅಲ್ಲದೆ ಹಿರಿಯ ಕ್ರಿಕೆಟಿಗ ಮಹಮ್ಮದುಲ್ಲಾ ರಿಯಾದ್ ಅವರನ್ನು ಕೂಡ ಏಷ್ಯಾ ಕಪ್‌ಗೆ ಪರಿಗಣಿಸಲಾಗಿಲ್ಲ. ಹೀಗಾಗಿ ಮಾಜಿ ನಾಯಕ ವಿಶ್ವಕಪ್ ತಂಡಲ್ಲಿಯೂ ಸ್ಥಾನ ಪಡೆಯುವುದು ಬಹುತೇಕ ಕಷ್ಟ.

ಏಷ್ಯಾಕಪ್ ಮತ್ತು ವಿಶ್ವಕಪ್ ಎರಡರಲ್ಲೂ ಬಾಂಗ್ಲಾದೇಶವನ್ನು ಶಕೀಬ್ ಅಲ್ ಹಸನ್ ಮುನ್ನಡೆಸಲಿದ್ದಾರೆ. ಆಗಸ್ಟ್ 12 ರಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮುಖ್ಯಸ್ಥ ನಜ್ಮುಲ್ ಹಸನ್ ಪಪೋನ್ ಅವರು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು.

"ನಮಗೆ ಯಾವತ್ತೂ ಗೊಂದಲವೇ ಇರಲಿಲ್ಲ. ಮೊದಲೇ ಹೇಳಿದಂತೆ ಆತ ಮೊದಲ ಆಯ್ಕೆಯಾಗಿದ್ದರು. ಅವರಲ್ಲದೆ ಮತ್ತೆ ಯಾರು ಮುನ್ನಡೆಸಲು ಸಾಧ್ಯ. ಆದರೆ ಅವರನ್ನು ಆಯ್ಕೆ ಮಾಡುವುದಕ್ಕೂ ಮುನ್ನ ಅವರೊಂದಿಗೆ ಮಾತುಕತೆ ನಡೆಸಬೇಕಿತ್ತು. ಶಕೀಬ್ ತಮಡದ ನಾಯಕ. ಆತ ಯಾವಾಗಲೂ ನಮ್ಮ ಮೊದಲ ಆದ್ಯತೆ" ಎಂದು ಪಪೊನ್ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷ ಮಹ್ದುಲ್ಲಾ ರಿಯಾದ್ ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಟಿ20 ಮಾದರಿಗೆ ಶಕೀಬ್ ಅಲ್ ಹಸನ್ ಅವರನ್ನು ನಾಯಕನ್ನಾಗಿ ನೇಮಿಸಲಾಗಿತ್ತು. ಇನ್ನು ಈಗಾಘಲೇ ಶಕೀಬ್ ಟೆಸ್ಟ್ ತಂಡವನ್ನು ಕೂಡ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಎಲ್ಲಾ ಮಾದರಿಗೂ ಶಕೀಬ್ ನಾಯಕನಾದಂತಾಗಿದೆ. ಶಕೀಬ್ ಅಲ್ ಹಸನ್ ಈಗಾಗಲೇ 52 ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ 19 ಟೆಸ್ಟ್ ಹಾಗೂ 39 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಏಷ್ಯಾಕಪ್‌ಗೆ ಬಾಂಗ್ಲಾದೇಶ ತಂಡ: ಶಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ತನ್ಜಿದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೋ, ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಮ್ಹುದ್, ಮಹೇದಿ ಹಸನ್, ನಸುಮ್ ಅಹ್ಮದ್, ಶಮೀಮ್ ಹೊಸೈನ್, ಅಫೀಫ್ ಹೊಸೈನ್, ಶೋರಿಫುಲ್ ಇಸ್ಲಾಂ, ಎಬಾಡೋತ್ ಹೊಸೈನ್, ಮೊಹಮ್ಮದ್ ನಯಿಮ್

Story first published: Saturday, August 12, 2023, 12:42 [IST]
Other articles published on Aug 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+