For Quick Alerts
ALLOW NOTIFICATIONS  
For Daily Alerts
 

ಐಸಿಸಿ ರ್‍ಯಾಂಕಿಂಗ್‌ನಲ್ಲೂ ಸಿರಾಜ್ ಅಟ್ಟಹಾಸ: ಭಾರತೀಯ ವೇಗಿ ಈಗ ವಿಶ್ವದ ನಂಬರ್ 1 ಬೌಲರ್!!

ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತ್ಯಮೋಘ ಬೌಲಿಂಗ್ ಪ್ರದರ್ಶಿಸಿ ಅಬ್ಬರಿಸಿದ್ದ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿಯೂ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ನೀಡಿದ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ಬಳಿಕ ಮೊಹಮ್ಮದ್ ಸಿರಾಜ್ ಏಕದಿನ ಮಾದರಿಯ ಬೌಲಿಂಗ್ ವಿಭಾಗದ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನದಿಂದ ನೇರವಾಗಿ ನಂಬರ್ 1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಅಂತಾರಾಷ್ಟ್ರೀಯ ಕ್ರಕೆಟ್ ಮಂಡಳಿ ಐಸಿಸಿ ಇತ್ತೀಚಿನ ಶ್ರೇಯಾಂಕ ಪಟ್ಟಿಯನ್ನು ಇಂದು(ಸೆಪ್ಟೆಂಬರ್20) ಬಿಡುಗಡೆಗೊಳಿಸಿತು. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮದ್ ಸಿರಾಜ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಏಷ್ಯಾಕಪ್ ಫೈನಲ್ ಪಂದ್ಯಕ್ಕೂ ಮುನ್ನ ಮೊಹಮ್ಮದ್ ಸಿರಾಜ್ 637 ಅಂಕಗಳನ್ನು ಹೊಂದಿದ್ದರು. ಆದರೆ ಇದೀಗ ಸಿರಾಜ್ 694 ಅಂಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಎರಡನೇ ಸ್ಥಾನಕ್ಕೆ ಕುಸಿದಿರುವ ಜೋಶ್ ಹೇಜಲ್‌ವುಡ್ ಅವರಿಗಿಂತ 16 ಅಂಗಳಿಂದ ಮುಂದಿದ್ದಾರೆ.

Asia Cup 2023 Final Heroics Propel Mohammed Siraj to No. 1 in ICC ODI Rankings

ಮೊದಲ ಸ್ಥಾನದಲ್ಲಿದ್ದ ಜೇಶ್ ಹೇಜಲ್‌ವುಡ್ ಒಂದು ಸ್ಥಾನದ ಕುಸಿತ ಕಂಡು ಎರಡನೇ ಸ್ಥಾನಕ್ಕೆ ಹಾಗೂ ಟ್ರೆಂಟ್ ಬೋಲ್ಟ್ ಕೂಡ ಒಂದು ಸ್ಥಾನದ ಕುಸಿತದೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಇನ್ನು ಸ್ಪಿನ್ನರ್ ಕುಲ್‌ದೀಪ್ ಯಾದವ್ ಟಾಪ್ 10 ಬೌಲರ್‌ಗಳ ಪಟ್ಟಿಯಲ್ಲರುವ ಮತ್ತೋರ್ವ ಭಾರತೀಯ ಬೌಲರ್ ಆಗಿದ್ದು ಅವರು ಮೂರು ಸ್ಥಾನಗಳ ಕುಸಿತ ಕಂಡು 9ನೇ ಸ್ಥಾನ ಪಡೆದುಕೊಂಡಿದ್ದಾರೆ.

ಮೊಹಮ್ಮದ್ ಸಿರಾಜ್ ಏಷ್ಯಾಖಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವುದರ ಜೊತೆಗೆ 7 ಓವರ್‌ಗಳಲ್ಲಿ ಕೇವಲ 21 ರನ್‌ಗಳನ್ನು ನೀಡಿ 6 ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದ್ದರು. ಈ ಭೀಕರ ಬೌಲಿಂಗ್ ದಾಳಿಯ ಕಾರಣದಿಂದಾಗಿ ಶ್ರೀಲಂಕಾ ತಂಡ ಈ ಫೈನಲ್ ಪಂದ್ಯದಲ್ಲಿ ಕೇವಲಕ 50 ರನ್‌ಗಳಿಗೆ ಆಲೌಟ್ ಆಗಿತ್ತು.

ಮೊಹಮ್ಮದ್ ಸಿರಾಜ್ ಈ ಮೂಲಕ ಎರಡನೇ ಬಾರಿಗೆ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಪಟ್ಟವನ್ನು ಅಲಂಕರಿಸಿದಂತಾಗಿದೆ. ಕಳೆದ ಜನವರಿಯಲ್ಲಿಯೂ ಸಿರಾಜ್ ಶ್ರೀಲಂಕಾ ವಿರುದ್ಧದ ಸರಣಿಯ ಬಳಿಕ ನಂಬರ್ 1 ಬೌಲರ್ ಎನಿಸಿಕೊಂಡಿದ್ದರು.

ಐಸಿಸಿ ಏಕದಿನ ಬೌಲರ್‌ಗಳ ಶ್ರೇಯಾಂಕ ಪಟ್ಟಿ
1. ಮೊಹಮ್ಮದ್ ಸಿರಾಜ್ - 694 ಅಂಕ
2. ಜೋಶ್ ಹ್ಯಾಜಲ್‌ವುಡ್ - 678
3. ಟ್ರೆಂಟ್ ಬೌಲ್ಟ್ - 677
4. ಮುಜೀಬ್ ಉರ್ ರೆಹಮಾನ್ - 657
5. ರಶೀದ್ ಖಾನ್ - 655

ಏಷ್ಯಾಕಪ್ 2023 ಆವೃತ್ತಿಯಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ ಸಿರಾಜ್. ಟೂರ್ನಿಯಲ್ಲಿ ಬೌಲಿಂಗ್ ಚಾರ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದ ಮತೀಶ ಪತಿರಾನ ಅವರಿಗಿಂತ ಕೇವಲ ಒಂದು ಕಡಿಮೆ 10 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

ಈ ಮಧ್ಯೆ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ಒಂದು ಸ್ಥಾನದ ಏರಿಕೆ ಕಂಡಿದ್ದು 8ನೇ ಸ್ಥಾನಕ್ಕೆ ಏರಿದ್ದಾರೆ. ಇನ್ನು ಶುಬ್ಮನ್ ಗಿಲ್ ಅವರು ತಮ್ಮ ನಂ. 2 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಏಷ್ಯಾ ಕಪ್‌ನಲ್ಲಿ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಾಬರ್ ಅಜಂ ಅವರೊಂದಿಗಿನ ಅಂತರವನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದಾರೆ. ಈಗ ಇವರ ಮಧ್ಯೆ 43 ಅಂಕಗಳ ಹಿನ್ನಡೆ ಮಾತ್ರವೇ ಉಳಿದುಕೊಂಡಿದೆ.

Story first published: Wednesday, September 20, 2023, 14:43 [IST]
Other articles published on Sep 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+