Asia Cup 2023 Final: ಏಷ್ಯಾ ಕಪ್‌ನಲ್ಲಿ ಧೋನಿ, ಅಜರುದ್ದೀನ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ
ಭಾನುವಾರ, ಸೆಪ್ಟೆಂಬರ್ 17ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ ತಂಡ 10 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು ಮತ್ತು 8ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿ ಎತ್ತಿ ಹಿಡಿಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಸರ್ವಪತನ ಕಂಡಿತು. ನಂತರ ಏಷ್ಯಾದ ದೈತ್ಯ ತಂಡ ಭಾರತ ಕೇವಲ 6.1 ಓವರ್‌ಗಳಲ್ಲಿ 51 ರನ್‌ಗಳ ಗುರಿ ಬೆನ್ನಟ್ಟಿ 10 ವಿಕೆಟ್‌ಗಳ ಗೆಲುವು ಸಾಧಿಸಿತು.

ಶ್ರೀಲಂಕಾ 50 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಏಕದಿನ ಇತಿಹಾಸದಲ್ಲಿ ತಮ್ಮ 2ನೇ ಕನಿಷ್ಠ ಮೊತ್ತ ಮತ್ತು 50-ಓವರ್‌ಗಳ ಸ್ವರೂಪದಲ್ಲಿ ಭಾರತ ವಿರುದ್ಧ ಅತ್ಯಂತ ಕಡಿಮೆ ಮೊತ್ತವಾಗಿದೆ. ಇನ್ನು ಭಾರತದ ವೇಗಿಗಳ ದಾಳಿಗೆ ಸಿಲುಕಿದ ಶ್ರೀಲಂಕಾ ಏಷ್ಯಾ ಕಪ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ದಾಖಲಿಸಿದರು.
ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ 7 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 21 ರನ್ ನೀಡಿ 6 ವಿಕೆಟ್‌ಗಳನ್ನು ಪಡೆದರು. ಸಿರಾಜ್ ಹೊಸ ಚೆಂಡಿನ ಸೆನ್ಸೇಷನಲ್ ಸ್ಪೆಲ್‌ನಲ್ಲಿ ಶ್ರೀಲಂಕಾ ಒಂದು ಹಂತದಲ್ಲಿ 6 ವಿಕೆಟ್‌ಗೆ 12 ರನ್ ಗಳಿಸಿತ್ತು. ನಂತರ ಕೇವಲ 13.1 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟ್ ಆಯಿತು.
ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಪರಾಕ್ರಮದಿಂದ ರೋಹಿತ್ ಶರ್ಮಾ ಭಾರತ ತಂಡವನ್ನು 8ನೇ ಏಷ್ಯಾಕಪ್ ಕಿರೀಟಕ್ಕೆ ಮತ್ತು ನಾಯಕನಾಗಿ ಎರಡನೇ ಬಾರಿಗೆ ಮುನ್ನಡೆಸಿದರು.
ಗಮನಾರ್ಹವಾಗಿ, 2019ರ ವಿಶ್ವಕಪ್‌ನ ಹಿಂದಿನ ವರ್ಷದಲ್ಲಿ ವಿರಾಟ್ ಕೊಹ್ಲಿ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದಿದ್ದರಿಂದ, ರೋಹಿತ್ ಶರ್ಮಾ 2018ರಲ್ಲಿ ಭಾರತ ತಂಡವನ್ನು ಏಷ್ಯಾ ಕಪ್ ಗೆಲುವಿಗೆ ಮುನ್ನಡೆಸಿದ್ದರು.
ರೋಹಿತ್ ಶರ್ಮಾ 2 ಏಷ್ಯಾ ಕಪ್ ಪ್ರಶಸ್ತಿಗಳನ್ನು ಗೆದ್ದ ಮೂರನೇ ಭಾರತೀಯ ನಾಯಕರೆನಿಸಿದರು. ಈ ಹಿಂದೆ ಎಂಎಸ್ ಧೋನಿ ಮತ್ತು ಮೊಹಮ್ಮದ್ ಅಜರುದ್ದೀನ್ ಏಷ್ಯಾ ಕಪ್‌ನಲ್ಲಿ 2 ಬಾರಿ ಪ್ರಶಸ್ತಿಗಳನ್ನು ಗೆದ್ದಿರುವ ಇತರ ಇಬ್ಬರು ಭಾರತೀಯ ನಾಯಕರಾಗಿದ್ದಾರೆ.
ಏಷ್ಯಾ ಕಪ್‌ನಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಭಾರತೀಯ ನಾಯಕರು
ಎಂಎಸ್ ಧೋನಿ - 3 ಫೈನಲ್ - 2 ಗೆಲುವು- 2010 ಮತ್ತು 2016
ಮೊಹಮ್ಮದ್ ಅಜರುದ್ದೀನ್ - 2 ಫೈನಲ್ 2 ಗೆಲುವು - 1991 ಮತ್ತು 1995
ರೋಹಿತ್ ಶರ್ಮಾ - 2 ಫೈನಲ್ - 2 ಗೆಲುವು - 2018 ಮತ್ತು 2023
ದಿಲೀಪ್ ವೆಂಗ್‌ಸರ್ಕರ್ - 1 ಫೈನಲ್ - 1 ಗೆಲುವು - 1988
ಸುನಿಲ್ ಗವಾಸ್ಕರ್ - 1 ಫೈನಲ್ - 1 ಗೆಲುವು - 1984
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications