15ನೇ ಆವೃತ್ತಿಯ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾನುವಾರ, ಸೆಪ್ಟೆಂಬರ್ 15ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತವು 8ನೇ ಏಷ್ಯಾ ಕಪ್ ಪ್ರಶಸ್ತಿಗಾಗಿ ಶ್ರೀಲಂಕಾ ತಂಡವನ್ನು ಎದುರಿಸುತ್ತಿದೆ.
ಇನ್ನು ಶ್ರೀಲಂಕಾ ತಂಡ ತನ್ನ ಚಾಂಪಿಯನ್‌ಶಿಪ್ ಕಿರೀಟವನ್ನು ರಕ್ಷಿಸಲು ಎದುರು ನೋಡುತ್ತಿದೆ. ಏಕೆಂದರೆ, 2022ರ ಟಿ20 ಪಂದ್ಯಾವಳಿ ಗೆದ್ದಿದೆ.

ಭಾರತ ತಂಡ ಎಲ್ಲ ಸ್ವರೂಪದಾದ್ಯಂತ ಏಷ್ಯಾ ಕಪ್‌ನಲ್ಲಿ 10ನೇ ಫೈನಲ್ ಪಂದ್ಯವನ್ನು ಆಡುತ್ತಿದೆ. ಭಾರತ ಏಳು ಬಾರಿ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಿದ್ದು, ಭಾರತ ನಾಲ್ಕು ಬಾರಿ ಗೆದ್ದಿದೆ.
ಶ್ರೀಲಂಕಾ ವಿರುದ್ಧದ ಮೂರು ಸೋಲುಗಳಲ್ಲಿ ಎರಡು ಶ್ರೀಲಂಕಾದಲ್ಲಿ ಬಂದಿವೆ. ಎಲ್ಲ ಸ್ವರೂಪದಾದ್ಯಂತ ಶ್ರೀಲಂಕಾ ತನ್ನ 12ನೇ ಏಷ್ಯಾ ಕಪ್ ಫೈನಲ್ ಪಂದ್ಯವನ್ನು ಆಡಲಿದೆ.
1988ರಿಂದ ಎಲ್ಲ ಸ್ವರೂಪದಾದ್ಯಂತ 14 ಏಷ್ಯಾ ಕಪ್ ಫೈನಲ್ ಪಂದ್ಯಗಳಲ್ಲಿ ಎಂಟು ಬಾರಿ ಗುರಿಯನ್ನು ಗುರಿ ಬೆನ್ನಟ್ಟಿದ ತಂಡವು ಟ್ರೋಫಿಯನ್ನು ಗೆದ್ದಿದೆ.

ಕೊನೆಯ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 266 ರನ್‌ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಯಿತು. ಆದರೆ, ಭಾರತ ತನ್ನ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾದ 13 ಪಂದ್ಯಗಳ ಗೆಲುವಿನ ಸರಪಳಿಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಈವರೆಗೆ ಭಾರತ ತಂಡ ಶ್ರೀಲಂಕಾ ವಿರುದ್ಧ 97 ಪಂದ್ಯಗಳನ್ನು ಗೆದ್ದಿದೆ. ಇದು ಏಕದಿನ ಮಾದರಿಯಲ್ಲಿ ಯಾವುದೇ ಎದುರಾಳಿಯ ವಿರುದ್ಧ ಅತಿ ಹೆಚ್ಚು ಗೆಲುವಾಗಿದೆ.
ಇನ್ನು ಈ ಪಂದ್ಯದಲ್ಲಿ ಕೆಲವು ಪ್ರಮುಖ ಮೈಲಿಗಲ್ಲುಗಳು ಮತ್ತು ದಾಖಲೆಗಳ ಕಣ್ಣಿಟ್ಟಿದ್ದು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೆಲವು ದಾಖಲೆಗಳ ಸಮೀಪದಲ್ಲಿದ್ದಾರೆ.
ರೋಹಿತ್ ಶರ್ಮಾ 2023ರ ಏಷ್ಯಾ ಕಪ್ ಫೈನಲ್‌ನಲ್ಲಿ ತಮ್ಮ 250ನೇ ಏಕದಿನ ಪಂದ್ಯವನ್ನು ಆಡುತ್ತಿದ್ದಾರೆ. ಈ ಮೂಲಕ 250 ಏಕದಿನ ಪಂದ್ಯಗಳನ್ನು ಆಡಿದ 9ನೇ ಭಾರತೀಯ ಆಟಗಾರನಾಗಿದ್ದಾರೆ.
ಅಲ್ಲದೆ, ರೋಹಿತ್ ಶರ್ಮಾ ಏಕದಿನ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಎರಡನೇ ಬಾರಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇನ್ನೊಂದು ಸಂದರ್ಭ ಕೂಡ ಏಷ್ಯಾಕಪ್ ಆಗಿದೆ. 2018ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಏಷ್ಯಾ ಕಪ್ ಪ್ರಶಸ್ತಿ ಗೆದ್ದಿತ್ತು.
ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಸೋಲು ಏಷ್ಯಾ ಕಪ್ (ಏಕದಿನ)ನಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಅವರ ಮೊದಲ ಸೋಲಾಗಿದೆ.
ಭಾರತದ ನಾಯಕ ರೋಹಿತ್ ಶರ್ಮಾ (939 ರನ್) ಏಕದಿನ ಏಷ್ಯಾ ಕಪ್ ಇತಿಹಾಸದಲ್ಲಿ 1000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಆಗುವ ಅವಕಾಶ ಹೊಂದಿದ್ದು, 61 ರನ್‌ಗಳ ಅಂತರದಲ್ಲಿದ್ದಾರೆ.
ಇನ್ನು ರೋಹಿತ್ ಶರ್ಮಾ ಏಕದಿನ ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಲು 33 ರನ್‌ಗಳ ದೂರದಲ್ಲಿದ್ದಾರೆ. ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ 971 ರನ್ ಗಳಿಸಿ ಭಾರತದ ಪರ ಅಗ್ರಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ ಏಷ್ಯಾ ಕಪ್ ಟ್ರೋಫಿಯನ್ನು ಎರಡು ಬಾರಿ ಎತ್ತಿಹಿಡಿದ 3ನೇ ಭಾರತೀಯ ನಾಯಕನಾಗುವ ಅವಕಾಶ ಹೊಂದಿದ್ದಾರೆ. ಈ ಮೊದಲು ಎಂಎಸ್ ಧೋನಿ (2012 ಮತ್ತು 2016) ಮತ್ತು ಮೊಹಮ್ಮದ್ ಅಜರುದ್ದೀನ್ (1991 ಮತ್ತು 1995) ನಾಯಕರಾಗಿ ಎರಡು ಬಾರಿ ಏಷ್ಯಾ ಕಪ್ ಗೆದ್ದಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಆರಂಭಿಕನಾಗಿ ಶ್ರೀಲಂಕಾದ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ. ಶ್ರೀಲಂಕಾ ವಿರುದ್ಧ ಆಡಿದ ಆರಂಭಿಕ ಬ್ಯಾಟರ್‌ಗಳಲ್ಲಿ ಅತ್ಯಧಿಕ ಸರಾಸರಿ (73.6) ಹೊಂದಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ ಏಕದಿನ ಸ್ವರೂಪದಲ್ಲಿ ಶ್ರೀಲಂಕಾ ವಿರುದ್ಧ 100ಕ್ಕಿಂತ ಹೆಚ್ಚು ಸ್ಟ್ರೈಕ್‌ರೇಟ್‌ನೊಂದಿಗೆ ಆರಂಭಿಕರಾಗಿ 1000ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಇದಲ್ಲದೆ, ರೋಹಿತ್ ಶರ್ಮಾ ತಮ್ಮ ಅತ್ಯಧಿಕ ಸ್ಕೋರ್ 264 ರನ್‌ಗಳು ಶ್ರೀಲಂಕಾ ವಿರುದ್ಧ ಬಂದಿದೆ. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟರ್‌ಗಿಂತ ಹೆಚ್ಚಿನ ಸ್ಕೋರ್ ಆಗಿದೆ.