Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023: ಬೌಲಿಂಗ್‌ನಲ್ಲಿ ಮಿಂಚಿದ ಜಡೇಜಾ, ಸಿರಾಜ್: ಭಾರತ ತಂಡಕ್ಕೆ ಸವಾಲಿನ ಗುರಿ ನೀಡಿದ ನೇಪಾಳ

ಸೋಮವಾರ, ಸೆಪ್ಟೆಂಬರ್ 4ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ 5ನೇ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ನೇಪಾಳ ತಂಡವು ಸವಾಲಿನ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪೌಡೆಲ್ ನಾಯಕತ್ವದ ನೇಪಾಳ ತಂಡ ಆಸಿಫ್ ಶೇಖ್ ಅವರ ಅರ್ಧಶತಕದ ನೆರವಿನಿಂದ 48.2 ಓವರ್‌ಗಳಲ್ಲಿ 230 ರನ್‌ಗಳಿಗೆ ಸರ್ವಪತನ ಕಂಡಿತು.

India vs Nepal 2

ಪಂದ್ಯಕ್ಕೆ ಮಳೆ ಪದೇ ಪದೇ ಅಡ್ಡಿಪಡಿಸಿದ್ದು, ಒಂದೆರಡು ಬಾರಿ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆರಂಭದಲ್ಲಿ ಭಾರತೀಯ ಫೀಲ್ಡರ್‌ಗಳು ಕ್ಯಾಚ್ ಬಿಟ್ಟಿದ್ದರಿಂದ ನೇಪಾಳ ತಂಡವು ಉತ್ತಮ ಆರಂಭ ಪಡೆಯಿತು.

ಕುಶಾಲ್ ಭುರ್ಟೆಲ್ ಮತ್ತು ಆಸಿಫ್ ಶೇಖ್ ಮೂರು ಜೀವದಾನ ಪಡೆದು ಕ್ರೀಸ್‌ನಲ್ಲಿ ಉಳಿದು ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 65 ರನ್ ಜೊತೆಯಾಟ ನಿರ್ಮಿಸಿದರು.

ಕುಶಾಲ್ ಭುರ್ಟೆಲ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ ಬಿರುಸಿನ 38 ರನ್ ಗಳಿಸಿದರೆ, ಆಸಿಫ್ ಶೇಖ್ 97 ಎಸೆತಗಳಲ್ಲಿ 8 ಬೌಂಡರಿ ಸಮೇತ 58 ರನ್ ಬಾರಿಸಿದರು. ನಂತರ ಬಂದ ಭೀಮ್ ಶಾರ್ಕಿ 7 ರನ್, ನಾಯಕ ರೋಹಿತ್ ಪೌಡೆಲ್ 5 ರನ್, ಕುಶಾಲ್ ಮಲ್ಲ 2 ರನ್, ಗುಲ್ಶಾನ್ ಜಾ 23 ರನ್ ಗಳಿಸಿದರು.

Asia Cup 2023: India Need 231 Runs To Win Against Nepal In 5th Match

ಕೊನೆಯ ಹಂತದಲ್ಲಿ ಅಬ್ಬರಿಸಿದ ದೀಪೇಂದ್ರ ಸಿಂಗ್ ಐರೆ 25 ಎಸೆತಗಳಲ್ಲಿ 3 ಸಹಾಯದಿಂದ 29 ರನ್, ಸೋಂಪಾಲ್ ಕಾಮಿ 56 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 48 ರನ್ ಬಾರಿಸಿದರು.

ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರು. ಉಳಿದಂತೆ ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಕಬಳಿಸಿದರು.

Story first published: Monday, September 4, 2023, 20:00 [IST]
Other articles published on Sep 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+