India vs Bangladesh: ಶಕೀಬ್, ಹೃದೋಯ್ ಅರ್ಧಶತಕ; ಭಾರತಕ್ಕೆ ಸವಾಲಿನ ಗುರಿ ನೀಡಿದ ಬಾಂಗ್ಲಾದೇಶ
ಶುಕ್ರವಾರ, ಸೆಪ್ಟೆಂಬರ್ 14ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಕೊನೆಯ ಸೂಪರ್ 4 ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಬಾಂಗ್ಲಾದೇಶ ತಂಡವು ಉತ್ತಮ ಮೊತ್ತ ಕಲೆಹಾಕಿದ್ದು, ಸವಾಲಿನ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ನಾಯಕ ಶಕೀಬ್ ಅಲ್ ಹಸನ್ ಅವರ ಭರ್ಜರಿ ಆರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್‌ಗಳನ್ನು ಕಲೆಹಾಕಿದ್ದು, ಭಾರತಕ್ಕೆ 266 ರನ್‌ಗಳ ಗುರಿ ನೀಡಿದೆ.
ಬಾಂಗ್ಲಾದೇಶ ತಂಡದ ಇನ್ನಿಂಗ್ಸ್ ಆರಂಭಿಸಿದ ತಂಜಿದ್ ಹಸನ್ 13 ರನ್ ಗಳಿಸಿ ಔಟಾದರೆ, ಲಿಟ್ಟನ್ ದಾಸ್ ಸೊನ್ನೆ ಸುತ್ತಿದರು. ನಂತರ ಬಂದ ಅನಾಮುಲ್ ಹಕ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ನಾಯಕ ಶಕೀಬ್ ಅಲ್ ಹಸನ್ 85 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 80 ರನ್ ಬಾರಿಸಿದರು. ಮೆಹಿದಿ ಹಸನ್ ಮಿರಾಜ್ 28 ಎಸೆತಗಳಲ್ಲಿ 13 ರನ್ ಗಳಿಸಿದರು. ತೌಹಿದ್ ಹೃದೋಯ್ 81 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 54 ರನ್ ಬಾರಿಸಿದರು.

ಶಮೀಮ್ ಹೊಸೈನ್ 1 ರನ್‌ಗಳಿಗೆ ಪೆವಿಲಿಯನ್ ಸೇರಿದರೆ, ನಸುಮ್ ಅಹ್ಮದ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 44 ರನ್ ಗಳಿಸಿದರು, ಮೆಹೆದಿ ಹಸನ್ 23 ಎಸೆತಗಳಲ್ಲಿ 29 ರನ್‌ಗಳ ಗಳಿಸಿದರೆ, ತಂಜೀಮ್ ಹಸನ್ ಶಕೀಬ್ 14 ರನ್ ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್ 10 ಓವರ್‌ಗಳಲ್ಲಿ 65 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 8 ಓವರ್‌ಗಳಲ್ಲಿ 32 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications