Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023: ಭಾರತ vs ನೇಪಾಳ ನಿರ್ಣಾಯಕ ಪಂದ್ಯ ರದ್ದು?; ಹವಾಮಾನ ವರದಿ, ಭಾರತದ ಸೂಪರ್ 4 ಚಾನ್ಸ್ ಹೇಗಿದೆ?

ಶನಿವಾರದಂದು ಪಲ್ಲೆಕೆಲ್ಲೆಯಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ-ವೋಲ್ಟೇಜ್ ಪಂದ್ಯವು ಮಳೆಯಿಂದ ರದ್ದುಗೊಂಡಿತು. ಇದೀಗ ಪಂದ್ಯಾವಳಿಯಲ್ಲಿ ಮುಂದಿನ ಹಂತ ತಲುಪಲು ಭಾರತ ತಂಡ ನೇಪಾಳ ವಿರುದ್ಧದ ಪಂದ್ಯ ಗೆಲ್ಲುವತ್ತ ದೃಷ್ಟಿ ನೆಟ್ಟಿದೆ.

ಇತ್ತೀಚಿನ ಐಸಿಸಿ ಏಕದಿನ ತಂಡ ಶ್ರೇಯಾಂಕಗಳ ಪ್ರಕಾರ, ಭಾರತ ವಿಶ್ವ ನಂಬರ್ 3 ಆಗಿದ್ದರೆ, ನೇಪಾಳವು 15ನೇ ಸ್ಥಾನದಲ್ಲಿದೆ. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸ್ಪಷ್ಟ ನೆಚ್ಚಿನ ಗೆಲ್ಲುವ ತಂಡವಾಗಿದೆ. ಆದರೆ, ನೇಪಾಳ ತಂಡವನ್ನು ಹಗುರವಾಗಿ ಪರಿಗಣಿಸಬಾರದು.

Asia Cup 2023: India vs Nepal Crucial Match Will Be Cancelled?; How Is The Weather Report?

ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿರುವ ರೋಹಿತ್ ಪೌಡೆಲ್ ನೇಪಾಳ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತದ ನಾಯಕ ಕೂಡ ರೋಹಿತ್ ಆಗಿದ್ದು, ಎರಡೂ ತಂಡಗಳ ನಾಯಕರ ಹೆಸರು ಒಂದೇ ಆಗಿರುವ ಅಪರೂಪದ ಪಂದ್ಯ ಬಹುಶಃ ಮೊದಲ ಬಾರಿಗೆ ಸಂಭವಿಸಲಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯ ರದ್ದುಗೊಂಡ ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ನೇಪಾಳ ನಡುವಿನ ಪಂದ್ಯ ಕೂಡ ನಡೆಯಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಪಂದ್ಯ ಸೋಮವಾರ, ಸೆಪ್ಟೆಂಬರ್ 4ರಂದು ನಡೆಯಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ದುಗೊಂಡ ನಂತರ, 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4ಕ್ಕೆ ಅರ್ಹತೆ ಪಡೆಯಲು ಭಾರತ ತಂಡಕ್ಕೆ ನೇಪಾಳವನ್ನು ಸೋಲಿಸುವುದು ಪ್ರಮುಖವಾಗಿದೆ.

Asia Cup 2023: India vs Nepal Crucial Match Will Be Cancelled?; How Is The Weather Report?

ಆದರೆ, ಪಂದ್ಯ ಸುಗಮವಾಗಿ ಸಾಗಲು ವರುಣ ಅವಕಾಶ ನೀಡಲಿದೆಯೇ?, ಪಂದ್ಯ ನಡೆಯಬಹುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಿಳಿದುಕೊಳ್ಳಲು ಪಲ್ಲೆಕೆಲೆಯಲ್ಲಿ ಹವಾಮಾನ ವರದಿ ಹೇಗಿರಲಿದೆ ಎಂಬುದನ್ನು ಗಮನಿಸೋಣ.

ಸೆಪ್ಟೆಂಬರ್ 4ರಂದು ಪಲ್ಲೆಕೆಲ್ಲೆ ಹವಾಮಾನ ವರದಿ ಹೇಗಿರಲಿದೆ?

ಕಳೆದ ಒಂದು ವಾರದಿಂದ ಪಲ್ಲೆಕೆಲ್ಲೆ ವಾತಾವರಣ ಕ್ರಿಕೆಟ್ ಸ್ನೇಹಿಯಾಗಿಲ್ಲ ಎಂಬುದಂತೂ ಸತ್ಯ. ಪಲ್ಲೆಕೆಲ್ಲೆ ಆತಿಥ್ಯ ವಹಿಸಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ರದ್ದಾಗಿದೆ.

ಆದರೂ, ಶನಿವಾರದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆಡುವುದನ್ನು ನೋಡಲಾಗಿದೆ. ಆದರೆ, ನೇಪಾಳ ವಿರುದ್ಧ ಪಂದ್ಯದ ದಿನವಾದ ಸೋಮವಾರ, ಸೆಪ್ಟೆಂಬರ್ 4ರಂದು ಶೇಕಡ 80ರಷ್ಟು ಮಳೆಯಾಗುವ ನಿರೀಕ್ಷೆ ಇರುವುದರಿಂದ ಭಾರತ ಮತ್ತು ನೇಪಾಳ ನಡುವಿನ ಸೆಣಸಾಟ ನಡೆಯುವ ಸಾಧ್ಯತೆಯೂ ಕಡಿಮೆ ಇದೆ.

Asia Cup 2023: India vs Nepal Crucial Match Will Be Cancelled?; How Is The Weather Report?

ಅಕ್ಯುವೆದರ್ ಪ್ರಕಾರ, ಕ್ಯಾಂಡಿಯ ಪಲ್ಲೆಕೆಲ್ಲೆಯಲ್ಲಿ ಸೋಮವಾರ ಇಡೀ ದಿನ ಮಳೆಯಾಗುವ ಸಾಧ್ಯತೆಯಿದೆ. ಇದು ಭಾರತ ಮತ್ತು ನೇಪಾಳ ಪಂದ್ಯದ ಆರಂಭದ ಮೇಲೆ ಪರಿಣಾಮ ಬೀರಲಿದೆ. ಟಾಸ್ ಕೂಡ ವಿಳಂಬವಾಗಬಹುದು ಮತ್ತು ಮಧ್ಯಂತರ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳ್ಳುವುದನ್ನು ಕಾಣಬಹುದಾಗಿದೆ.

ಪಂದ್ಯ ರದ್ದಾದರೆ ಭಾರತ ಸೂಪರ್ 4 ಅವಕಾಶ ಹೇಗಿರಲಿದೆ?

ಭಾರತ ಮತ್ತು ನೇಪಾಳ ತಂಡಗಳ ನಡುವಿನ ನಿರ್ಣಾಯಕ ಪಂದ್ಯವೂ ಮಳೆಯಿಂದ ಹಾನಿಗೊಳಗಾದರೆ ಮತ್ತು ಯಾವುದೇ ಫಲಿತಾಂಶವಿಲ್ಲ ರದ್ದುಗೊಂಡರೆ, ಉಭಯ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ.

ಭಾರತ ಮತ್ತು ನೇಪಾಳ ಒಂದು ಅಂಕ ಹಂಚಿಕೊಂಡರೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸೂಪರ್ 4ಗೆ ಪ್ರವೇಶಿಸುತ್ತದೆ ಮತ್ತು ನೇಪಾಳ ತಂಡ ಪಂದ್ಯಾವಳಿಯಿಂದ ಹೊರಬೀಳಲಿದೆ.

ಇನ್ನು ಪಾಕಿಸ್ತಾನ ತಂಡ ಈಗಾಗಲೇ ಸೂಪರ್ 4ಗೆ ಅರ್ಹತೆ ಪಡೆದಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೇಪಾಳ ವಿರುದ್ಧ 238 ರನ್‌ಗಳಿಂದ ಗೆಲುವು ಸಾಧಿಸಿತ್ತು.

ಸದ್ಯ ಪಾಕಿಸ್ತಾನ ತಂಡದ ಬಳಿ ಮೂರು ಅಂಕಗಳಿದ್ದರೆ, ಪಲ್ಲೆಕೆಲ್ಲೆಯಲ್ಲಿ ಮಳೆಯಿಂದಾಗಿ ರದ್ದಾಗಿದ್ದರಿಂದ ಭಾರತ ತಂಡ ಖಾತೆಯಲ್ಲಿ ಒಂದು ಅಂಕವನ್ನು ಇದೆ. ನೇಪಾಳ ತಂಡದ ಬಳಿ ಯಾವುದೇ ಅಂಕವಿಲ್ಲ. ಹೀಗಾಗಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದರೂ ಅಥವಾ ಮಳೆಯಿಂದ ರದ್ದಾದರೂ ಸುಲಭವಾಗಿ ಸೂಪರ್ 4ಗೆ ಅರ್ಹತೆ ಪಡೆಯಲಿದೆ.

ಒಂದು ವೇಳೆ, ನೇಪಾಳ ವಿರುದ್ಧ ಅನಿರೀಕ್ಷಿತ ಸೋಲು ಕಂಡರೆ ಭಾರತ ತಂಡ ಪಂದ್ಯಾವಳಿ ಹೊರಬೀಳಲಿದೆ. ಆಗ ಸೂಪರ್ 4ಗೆ ನೇಪಾಳ ಮತ್ತು ಪಾಕಿಸ್ತಾನ ತಂಡಗಳು ಅರ್ಹತೆ ಪಡೆಯಲಿವೆ.

Story first published: Sunday, September 3, 2023, 16:41 [IST]
Other articles published on Sep 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+