KL Rahul Fit: ಸಂಜು ಸಾಮ್ಸನ್, ಇಶಾನ್‌ಗೆ ಸಂಕಷ್ಟ, ಏನಿದು ರಾಹುಲ್ ಮಾಸ್ಟರ್ ಪ್ಲ್ಯಾನ್?
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಕೆ.ಎಲ್ ರಾಹುಲ್ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ. ಈಗಾಗಲೇ ಪ್ರಕಟಗೊಂಡ ಏಷ್ಯಾ ಕಪ್ ಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಸ್ಟಾರ್ ಬ್ಯಾಟರ್ ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡಿದ್ದರಿಂದ, ಇಬ್ಬರು ವಿಕೆಟ್ ಕೀಪರುಗಳ ಸ್ಥಾನ ಅಪಾಯದಲ್ಲಿದೆ.
ಐಪಿಎಲ್ ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದ ರಾಹುಲ್ ಹಲವು ತಿಂಗಳುಗಳ ಕಾಲ ಕ್ರಿಕೆಟ್ ಅಂಗಳದಿಂದ ದೂರು ಉಳಿದಿದ್ದರು. ಈಗ ಚೇತರಿಸಿಕೊಂಡಿದ್ದು ಟೀಮ್ ಇಂಡಿಯಾಗೆ ಮರಳಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕೆಎಲ್ ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡುತ್ತಿದ್ದಂತೆ ಇಬ್ಬರು ವಿಕೆಟ್ ಕೀಪರುಗಳಾದ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಸ್ಥಾನ ಅಲುಗಾಡುತ್ತಿದೆ.

ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಾರ. ಪರಿಸ್ಥಿತಿಗೆ ಅನುಗುಣವಾಗಿ ರನ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪ್ಲೇಯರ್. ಕೆ.ಎಲ್ ಬ್ಯಾಟಿಂಗಿಗೆ ವಿದೇಶಿ ಆಟಗಾರರು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸ್ಟಾರ್ ಪ್ಲೇಯರ್ ಭಾರತದ ಪರ ಆರಂಭಿಕರಾಗಿಯೂ ಕಣಕ್ಕೆ ಇಳಿದಿದ್ದಾರೆ. ಈ ವೇಳೆಯೂ ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದಾರೆ.
ತಂಡಕ್ಕೆ ಅಗತ್ಯ ಬಿದ್ದಾಗ ಓಪನರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ರಾಹುಲ್, ಹೆಗಲಿಗೆ ಈಗ ಮತ್ತೊಂದು ಜವಾಬ್ದಾರಿಯನ್ನು ನೀಡಲಾಗಿದೆ. ಟೀಮ್ ಮ್ಯಾನೇಜ್ಮೆಂಟ್ ರಾಹುಲ್ ಅವರಿಗೆ ವಿಕೆಟ್ ಕೀಪಿಂಗ್ ಗ್ಲೌಸ್ ನೀಡಿದೆ. ರಾಹುಲ್ ಬ್ಯಾಟಿಂಗ್ ಜೊತೆಗೆ ಎನ್ಸಿಎನಲ್ಲಿ ವಿಕೆಟ್ ಕೀಪಿಂಗ್ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.
ರಾಹುಲ್ ವಿಕೆಟ್ ಕೀಪಿಂಗ್ ಸ್ಕಿಲ್
ಈ ವೇಳೆ ರಾಹುಲ್ ವಿಕೆಟ್ ಕೀಪಿಂಗ್ ಸ್ಕಿಲ್ ಗಳನ್ನು ಕಲಿಯುತ್ತಿದ್ದಾರೆ. ಈ ದೃಶ್ಯ ನಿಜಕ್ಕೂ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಅವರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡುವಂತೆ ಮಾಡಿವೆ. ಅಂದಹಾಗೆ ರಾಹುಲ್ ವಿಕೆಟ್ ಕೀಪಿಂಗ್ ಜೊತೆಗೆ ಉತ್ತಮವಾಗಿ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇವರ ಕ್ಷಮತೆಗೆ ತಕ್ಕಂತೆ ಟೀಮ್ ಇಂಡಿಯಾ ಇವರಿಗೆ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ನೀಡಲಿದೆ.
ಇಶಾನ್ ಕಿಶನ್ ಟಾಪ್ ಆರ್ಡರ್ ಬ್ಯಾಟರ್
ಇಶಾನ್ ಕಿಶನ್ ಟಾಪ್ ಆರ್ಡರ್ ಬ್ಯಾಟರ್. ಇವರಿಗೆ ಏಷ್ಯಾ ಕಪ್ ನಲ್ಲಿ ಸ್ಥಾನ ಲಭಿಸುವುದು ಕಷ್ಟ. ರೋಹಿತ್ ಶರ್ಮಾ ಜೊತೆ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸುವುದರಿಂದ ಇಶಾನ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಈ ಆರ್ಡರ್ ನಲ್ಲಿ ಆಡಿದ ಅನುಭವ ಇಶಾನ್ ಗೆ ಇಲ್ಲ. ಹೀಗಾಗಿ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇಶಾನ್ ತಂಡದಲ್ಲಿ ಕಾಣಿಸಿಕೊಳ್ಳಬೇಕಿದ್ದರೆ, ರಾಹುಲ್ ನುರಿತ ಬ್ಯಾಟರ್ ಆಗಿ ಮಾತ್ರ ಆಡಬೇಕು.
ಏಷ್ಯಾ ಕಪ್ಪಿನ ಆರಂಭಿಕ ಪಂದ್ಯದಲ್ಲಿ ರಾಹುಲ್ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇವರ ಅನುಪಸ್ಥಿತಿಯನ್ನು ಇಶಾನ್ ಸಮರ್ಥರಾಗಿ ತುಂಬಲಿದ್ದಾರೆ. ನಾಲ್ಕನೇ ಸ್ಥಾನದ ಮೇಲೆ ತಿಲಕ್ ವರ್ಮಾ ಹಾಗೂ ಶ್ರೇಯಸ್ ಅಯ್ಯರ್ ಕಣ್ಣು ನೆಟ್ಟಿದ್ದಾರೆ. ಈ ಇಬ್ಬರಲ್ಲಿ ಶ್ರೇಯಸ್ ಫಿಟ್ ಆಗಿದ್ದಲ್ಲಿ ಇವರಿಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು.
ಐದನೇ ಕ್ರಮಾಂಕದಲ್ಲಿ ಆಡಲು ರಾಹುಲ್ ಬೆಸ್ಟ್ ಬ್ಯಾಟರ್
ಈ ಸ್ಥಾನಕ್ಕೆ ರಾಹುಲ್ ನ್ಯಾಯ ಒದಗಿಸಬಲ್ಲರು. ರಾಹುಲ್ ಐದನೇ ಕ್ರಮಾಂಕದಲ್ಲಿ 18 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು, 53ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 7 ಅರ್ಧಶತಕಗಳು ಸೇರಿವೆ. ರಾಹುಲ್ ಅವರ ಈ ಅಂಕಿ ಅಂಶಗಳೇ ಅವರನ್ನು ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡುವಂತೆ ಮಾಡುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications